ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ’ ಆಯೋಜಿಸಿದ ಸಭೆ!

ಮುಂಬಯಿ – ಕೌರವರು ಪಾಂಡವರಿಗೆ 5 ಹಳ್ಳಿಗಳನ್ನೂ ನೀಡದ ಕಾರಣ ಮಹಾಭಾರತ ನಡೆಯಿತು. ಹಿಂದೂಗಳು ಸಂಧಾನ ಮಾಡುತ್ತಿದ್ದರೂ, ಮತಾಂಧರು ಮಂದಿರಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಆದ್ದರಿಂದ, ಕೇವಲ ಶ್ರೀಕೃಷ್ಣ ಜನ್ಮಭೂಮಿ ಮಾತ್ರವಲ್ಲ, ಅತಿಕ್ರಮಣಕ್ಕೊಳಗಾದ ದೇಶದ ಲಕ್ಷಾಂತರ ಮಂದಿರಗಳನ್ನು ಹಿಂದೂಗಳು ಮತ್ತೆ ಹಿಂಪಡೆಯಬೇಕು. ಅದಕ್ಕಾಗಿ ಹಿಂದೂಗಳು ಸಿದ್ಧರಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಪ್ರವಕ್ತರಾದ ಶ್ರೀ. ಸತೀಶ ಕೋಚರೇಕರ ಅವರು ಕರೆ ನೀಡಿದರು. ‘ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ’ದ ವತಿಯಿಂದ ವರಳಿಯ ಜಾಂಬೋರಿ ಮೈದಾನದಲ್ಲಿ ಆಯೋಜಿಸಲಾದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ವೇದಿಕೆಯ ಮೇಲೆ ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸದ ರಾಷ್ಟ್ರೀಯ ಅಧ್ಯಕ್ಷರಾದ ಪಂ. ದಿನೇಶ ಫಲಾಹಾರಿ ಮಹಾರಾಜರು. ಅಂತರರಾಷ್ಟ್ರೀಯ ಪ್ರಚಾರಕ ಪ್ರಿಯಾಕಿಶೋರಿ ಭಾರದ್ವಾಜ, ರಾಷ್ಟ್ರೀಯ ಸಹಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ. ಉಪೇಂದ್ರ ಡಹಾಕೆ ಮತ್ತು ‘ರಾಯಗಡ ಸಂವರ್ಧನ ಪ್ರತಿಷ್ಠಾನ’ದ ಅಧ್ಯಕ್ಷರಾದ ಶ್ರೀ. ರಾಜೇಂದ್ರ ಸಾವಂತ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಶ್ರೀ. ಸತೀಶ ಕೋಚರೇಕರ ಅವರು ಮಾತನಾಡುತ್ತಾ, ”ಮದನ ಮೋಹನ ಮಾಳವೀಯ ಅವರು ಶ್ರೀಕೃಷ್ಣ ಜನ್ಮಭೂಮಿ ಸ್ಥಳದಲ್ಲಿ ಮಂದಿರ ನಿರ್ಮಿಸಲು ಪ್ರಯತ್ನಿಸುತ್ತಿದ್ದರು; ಆದರೆ ಅಂದಿನ ಕಾಂಗ್ರೆಸ್ ಸರಕಾರವು ಅದನ್ನು ಮಾಡಲು ಬಿಡಲಿಲ್ಲ. ಈ ಇತಿಹಾಸ ಹಿಂದೂಗಳಿಗೆ ತಿಳಿದಿರಬೇಕು. ಶ್ರೀರಾಮಜನ್ಮಭೂಮಿಗಾಗಿ 500 ವರ್ಷಗಳ ಕಾಲ ಹೋರಾಟ ಮಾಡಬೇಕಾಯಿತು. ಅದೇ ರೀತಿ, ಇತರ ಮಂದಿರಗಳಿಗಾಗಿಯೂ ಹಿಂದೂಗಳು ಹೋರಾಟ ಮಾಡಬೇಕಾಗುತ್ತದೆ,” ಎಂದು ಹೇಳಿದರು.
ಹಿಂದೂಗಳು ಜಾತಿಭೇದ ಮತ್ತು ಪ್ರಾಂತಭೇದವನ್ನು ಬದಿಗಿಟ್ಟು ಸಂಘಟಿತರಾಗಬೇಕು! – ರಾಜೇಂದ್ರ ಸಾವಂತ, ಅಧ್ಯಕ್ಷರು, ರಾಯಗಡ ಸಂವರ್ಧನ ಪ್ರತಿಷ್ಠಾನ
ಶ್ರೀಕೃಷ್ಣ ಜನ್ಮಭೂಮಿಯನ್ನು ಅತಿಕ್ರಮಣ ಮುಕ್ತಗೊಳಿಸಲು ಹಿಂದೂಗಳು ಜಾತಿಭೇದ ಮತ್ತು ಪ್ರಾಂತಭೇದವನ್ನು ಬದಿಗಿಟ್ಟು ಸಂಘಟಿತರಾಗಬೇಕು. ಈ ಮಹಾನ್ ಕಾರ್ಯಕ್ಕಾಗಿ ಪರಮಾತ್ಮನು ನಮಗೆ ಶಕ್ತಿಯನ್ನು ನೀಡುತ್ತಾನೆ. ಅದಕ್ಕಾಗಿಯೇ ಶ್ರೀ ನಾರಾಯಣ ಮಹಾಯಜ್ಞವನ್ನು ಆಯೋಜಿಸಲಾಗಿತ್ತು. ಶ್ರೀಕೃಷ್ಣ ಜನ್ಮಭೂಮಿಯನ್ನು ಪಡೆಯಲು ಹಿಂದೂಗಳು ಸಿದ್ಧರಾಗಬೇಕು, ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸದ ರಾಷ್ಟ್ರೀಯ ಸಹಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ. ಉಪೇಂದ್ರ ಡಹಾಕೆ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ. ಶಂಕರ ವರಾಡಕರ ಅವರೂ ಸಹ ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!