
ತಂಜಾವೂರು (ತಮಿಳುನಾಡು) – ಇತ್ತೀಚೆಗೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲೊಬ್ಬರಾದ ಶ್ರೀಚಿತ್ ಶಕ್ತಿ ಸೌ. ಅಂಜಲಿ ಮುಕುಲ್ ಗಾಡಗೀಳ ಅವರು ತಂಜಾವೂರಿನ ಕಲಾಂಚೇರಿಯಲ್ಲಿರುವ ‘ಶ್ರೀ ವೇದವಿದ್ಯಾ ಗುರುಕುಲಂ’ಗೆ ಭೇಟಿ ನೀಡಿದರು. ಅಲ್ಲಿ ಅವರು ವೇದಪ್ರಚಾರರತ್ನಂ ಜ್ಯೋತಿಷ್ಯ ವಿದ್ಯಾರತ್ನಂ ಜಿ.ಕೆ. ಸೀತಾರಾಮನ್ ಶಾಸ್ತ್ರಿಗಳನ್ನು ಭೇಟಿ ಮಾಡಿ, ಡಿಸೆಂಬರ್ ೧೩ ಮತ್ತು ೧೪ ರಂದು ದೆಹಲಿಯಲ್ಲಿ ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಆಮಂತ್ರಣ ನೀಡಿದರು.
Ancient Somnath Shivlingam relics to be showcased at Delhi’s Sanatan Rashtra Shankhnad Mahotsav
ShriChitshakti (Mrs.) Anjali Mukul Gadgil visited Kalancheri in Thanjavur to meet Vedaprachararatnam Jyotish Vidyaratnam G. K. Seetharaman Sastry, whose lineage has long safeguarded… pic.twitter.com/sXno0AeW2q
— Sanatan Prabhat (@SanatanPrabhat) November 17, 2025

ಸೀತಾರಾಮನ್ ಶಾಸ್ತ್ರಿಗಳ ಪೂರ್ವಜರು ಪ್ರಾಚೀನ ಸೋಮನಾಥ ಶಿವಲಿಂಗದ ಅವಶೇಷಗಳ ಗೌರವಾನ್ವಿತ ಸಂರಕ್ಷಕರಾಗಿದ್ದರು. ಭೇಟಿಯ ಸಮಯದಲ್ಲಿ, ಶ್ರೀಚಿತ್ ಶಕ್ತಿ ಸೌ. ಅಂಜಲಿ ಮುಕುಲ್ ಗಾಡಗೀಳ ಅವರು ಪವಿತ್ರ ಶಿವಲಿಂಗಕ್ಕೆ ಅಭಿಷೇಕ ಮಾಡಿದರು ಮತ್ತು ಈ ದಿವ್ಯ ಪರಂಪರೆಯ ವಂಶಾವಳಿ ಹಾಗೂ ಮಹತ್ವದ ಬಗ್ಗೆ ಜಿ.ಕೆ. ಸೀತಾರಾಮನ್ ಜಿ ಅವರೊಂದಿಗೆ ಆಧ್ಯಾತ್ಮಿಕ ಸಂವಾದ ನಡೆಸಿದರು.

ವೇದಕುಲಪತಿ ಜಿ.ಕೆ. ಸೀತಾರಾಮನ್ ಜಿ ಅವರು ಮಹೋತ್ಸವದ ಆಮಂತ್ರಣವನ್ನು ಸ್ವೀಕರಿಸಿದ್ದು, ಪವಿತ್ರ ಸೋಮನಾಥ ಶಿವಲಿಂಗದ ಅವಶೇಷಗಳನ್ನು ಮಹೋತ್ಸವಕ್ಕಾಗಿ ತರಲಿದ್ದಾರೆ. ಇದರಿಂದ ಭಕ್ತಾದಿಗಳಿಗೆ ಈ ಪವಿತ್ರ ಪರಂಪರೆಗೆ ಸಾಕ್ಷಿಯಾಗಲು ಸಾಧ್ಯವಾಗುತ್ತದೆ.
ರಾಜಸ್ಥಾನದ ಪ್ರಸಿದ್ಧ ಮೆಹಂದೀಪುರ ಬಾಲಾಜಿ ಮಂದಿರದ ಸಿದ್ಧಪೀಠಾಧೀಶ್ವರ ಶ್ರೀನರೇಶಪುರಿ ಮಹಾರಾಜರಿಗೆ ಆಮಂತ್ರಣ!![]() ಶ್ರೀಚಿತ್ ಶಕ್ತಿ ಸೌ. ಅಂಜಲಿ ಮುಕುಲ್ ಗಾಡಗೀಳ ಅವರು ಜೈಪುರದ ಪ್ರಸಿದ್ಧ ಮೆಹಂದೀಪುರ ಬಾಲಾಜಿ ಮಂದಿರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಸಿದ್ಧಪೀಠಾಧೀಶ್ವರ ಶ್ರೀನರೇಶಪುರಿ ಮಹಾರಾಜರಿಗೂ ಮಹೋತ್ಸವದ ಆಮಂತ್ರಣ ನೀಡಿದರು.
|

‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !