
ಅಂಕಾರಾ (ಟರ್ಕಿ) – ಮೇ ತಿಂಗಳಿನಲ್ಲಿ ನಡೆದ ಭಾರತ-ಪಾಕಿಸ್ತಾನ್ ಸಂಘರ್ಷದಲ್ಲಿ ಟರ್ಕಿ ಪಾಕಿಸ್ತಾನಕ್ಕೆ ನೆರವು ನೀಡಿತ್ತು. ಇದೀಗ ಟರ್ಕಿ ಭಾರತಕ್ಕೆ ಹೊಸ ಸವಾಲಾಗಿ ಪರಿಣಮಿಸುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಭಾರತವು 2020 ರಲ್ಲಿ ಅಮೆರಿಕಾದೊಂದಿಗೆ ಹೆಲಿಕಾಪ್ಟರ್ ಖರೀದಿಯ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ 3 ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ತರುತ್ತಿದ್ದ ಸರಕು ವಿಮಾನಕ್ಕೆ ಟರ್ಕಿಯ ವಾಯುಪ್ರದೇಶದ ಮೂಲಕ ಹಾದುಹೋಗಲು ಅನುಮತಿ ಸಿಗಲಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಪಾಕಿಸ್ತಾನ ಮತ್ತು ಟರ್ಕಿಯ ಹೆಚ್ಚುತ್ತಿರುವ ಸಲಿಗೆ!
ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯ ನಂತರ ಪರಿಸ್ಥಿತಿ ಹದಗೆಡುವ ಲಕ್ಷಣಗಳು ಕಾಣಿಸುತ್ತಿದ್ದಂತೆಯೇ ಟರ್ಕಿ ತನ್ನ ಯುದ್ಧನೌಕೆಯನ್ನು ತಕ್ಷಣವೇ ಕರಾಚಿ ಬಂದರಿಗೆ ಕಳುಹಿಸಿತ್ತು. ಚೀನಾದ ನಂತರ ಟರ್ಕಿ ಪಾಕಿಸ್ತಾನಕ್ಕೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶವಾಗಿದೆ. ಪಾಕಿಸ್ತಾನ ಮತ್ತು ಟರ್ಕಿಯ ಹೆಚ್ಚುತ್ತಿರುವ ಈ ಸಲಿಗೆ ಭಾರತಕ್ಕೆ ಹೊಸ ಸಂಕಟವನ್ನು ಸೃಷ್ಟಿಸುತ್ತಿದೆ.
ಏರ್ ಮಾರ್ಷಲ್ ಅನಿಲ್ ಚೋಪ್ರಾ ಅವರು ಈ ಸಂಬಂಧಗಳ ಹಿಂದೆ ಧಾರ್ಮಿಕ ಸಾಮ್ಯತೆ ಇದೆ ಎಂದು ಹೇಳಿದ್ದಾರೆ. ಎರಡೂ ದೇಶಗಳು ಕಟ್ಟರ್ ಇಸ್ಲಾಮಿಕ್ ಪ್ರವಾಹವನ್ನು ಪ್ರೋತ್ಸಾಹಿಸುತ್ತವೆ. ಟರ್ಕಿ ಇಸ್ಲಾಮಿಕ್ ಜಗತ್ತಿನಲ್ಲಿ ಮುಂಚೂಣಿ ಸ್ಥಾನ ಪಡೆಯಲು ಬಯಸುತ್ತದೆ ಮತ್ತು ಪಾಕಿಸ್ತಾನ ಈ ನೀತಿಯ ಪ್ರಮುಖ ಪಾಲುದಾರವಾಗಿದೆ. ಕಾಶ್ಮೀರ ವಿಷಯದಲ್ಲಿ ಟರ್ಕಿ ಪಾಕಿಸ್ತಾನದ ಪರವಾಗಿ ನಿಲ್ಲುತ್ತದೆ ಮತ್ತು ಇದು ಭಾರತದ ಮೇಲೆ ನೇರ ಪರಿಣಾಮ ಬೀರುತ್ತದೆ. ಅನಿಲ್ ಚೋಪ್ರಾ ಅವರು, ಭಾರತವು ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ಪಶ್ಚಿಮ ಏಷ್ಯಾ ಮತ್ತು ಯುರೋಪ್‌ನಲ್ಲಿ ಟರ್ಕಿಯ ವಿಸ್ತರಣಾವಾದಿ ನೀತಿಯ ಬಗ್ಗೆ ಚಿಂತಿತರಾಗಿರುವ ದೇಶಗಳೊಂದಿಗೆ ಸಹಕಾರ ಹೆಚ್ಚಿಸಬೇಕು ಎಂದು ಹೇಳಿದರು. ವಿವೇಚನಾಯುಕ್ತ ರಾಜತಾಂತ್ರಿಕತೆ ಮತ್ತು ಸ್ವಯಂ ನಿರ್ಧಾರಿತ ನೀತಿಯ ಆಧಾರದ ಮೇಲೆ ಭಾರತವು ಟರ್ಕಿ ಮತ್ತು ಪಾಕಿಸ್ತಾನದ ಮೈತ್ರಿಯನ್ನು ಪರಿಣಾಮಕಾರಿಯಾಗಿ ಸವಾಲು ಹಾಕುಬಹುದು.
ಸಂಪಾದಕೀಯ ನಿಲುವುಭಾರತದೊಂದಿಗೆ ನಿರಂತರವಾಗಿ ಕಿತಾಪತಿ ಮಾಡುತ್ತಿರುವ ಟರ್ಕಿಗೆ ಸರಕಾರವು ಸಮಯಕ್ಕೆ ಸರಿಯಾಗಿ ಪಾಠ ಕಲಿಸಬೇಕು, ಇಲ್ಲದಿದ್ದರೆ ಅದು ಪಾಕಿಸ್ತಾನದಂತೆ ಭಾರತವನ್ನು ಪದೇ ಪದೇ ಕೆಣಕುತ್ತಲೇ ಇರುತ್ತದೆ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara