ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಯುವತಿಯ ಮತಾಂತರ ಮಾಡಿ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲಾಗಿದೆ ಎಂಬ ಆರೋಪ! – Missing Indian Woman Married in Pakistan

ಇಸ್ಲಾಮಾಬಾದ – ಗುರು ನಾನಕ್ ದೇವ್‌ ಅವರ ಉತ್ಸವಕ್ಕಾಗಿ ಪಾಕಿಸ್ತಾನಕ್ಕೆ ಹೋಗಿ ನಂತರ ಕಾಣೆಯಾಗಿದ್ದ ಭಾರತೀಯ ಯುವತಿಯ ಬಗ್ಗೆ ಒಂದು ಪ್ರಮುಖ ದಾವೆ ಹೊರಬಿದ್ದಿದೆ. ಸರಬಜಿತ್ ಕೌರ್ ಎಂಬ ಈ ಸಿಖ್ ಯುವತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಶೇಖುಪುರದ ನಾಸಿರ್ ಹುಸೇನ್ ಎಂಬ ಮುಸ್ಲಿಂ ಯುವಕನನ್ನು ವಿವಾಹವಾಗಿದ್ದಾಳೆ ಎಂದು ತಿಳಿದು ಬಂದಿದೆ. ಸರಬಜಿತ್ ಕೌರ್ ಪಂಜಾಬನ ಕಪೂರ್ತಲಾ ನಿವಾಸಿಯಾಗಿದ್ದಾಳೆ. ಗುರು ನಾನಕ್ ದೇವ್ ಅವರ ಉತ್ಸವಕ್ಕಾಗಿ ನವೆಂಬರ್ 4 ರಂದು ಒಟ್ಟು 1 ಸಾವಿರದ 923 ಯಾತ್ರಾರ್ಥಿಗಳು ಪಾಕಿಸ್ತಾನಕ್ಕೆ ಹೋಗಿದ್ದರು. ಅಕಾಲ ತಖ್ತ್ ಸಾಹಿಬ್‌ ನ ಜತ್ಥೇದಾರರಾದ ಜ್ಞಾನಿ ಕುಲದೀಪಸಿಂಗ್ ಗಡಗಜ್ ಅವರು ಈ ಯಾತ್ರೆಯ ನೇತೃತ್ವ ವಹಿಸಿದ್ದರು. 10 ದಿನಗಳ ಕಾಲ ವಿವಿಧ ಗುರುದ್ವಾರಗಳಿಗೆ ಭೇಟಿ ನೀಡಿದ ನಂತರ, 1 ಸಾವಿರದ 922 ಯಾತ್ರಾರ್ಥಿಗಳು ಭಾರತಕ್ಕೆ ಮರಳಿದರು; ಆದರೆ ಹಿಂತಿರುಗಿದ ಗುಂಪಿನಲ್ಲಿ ಸರಬಜಿತ್ ಕೌರ್ ಇರಲಿಲ್ಲ. ಆಕೆ ಕಾಣೆಯಾದ ಮಾಹಿತಿ ದೊರೆತ ತಕ್ಷಣ ಎರಡೂ ದೇಶಗಳ ಗುಪ್ತಚರ ಸಂಸ್ಥೆಗಳು ಶೋಧ ಕಾರ್ಯವನ್ನು ನಡೆಸುತ್ತಿವೆ.

1. ಭಾರತ ಸರಕಾರದ ಮೂಲಗಳ ಪ್ರಕಾರ, ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಅಲ್ಲಿನ ಸಂಬಂಧಿತ ಪಾಕಿಸ್ತಾನಿ ಅಧಿಕಾರಿಗಳ ಸಂಪರ್ಕದಲ್ಲಿದೆ.

2. ಕಳೆದ ತಿಂಗಳು, ಕೇಂದ್ರ ಸರಕಾರವು ಸಿಖ್ ಯಾತ್ರಿಕರಿಗೆ ಪಾಕಿಸ್ತಾನದ ನನಕಾನಾ ಸಾಹಿಬ್‌ ನಲ್ಲಿ 10 ದಿನಗಳ ಯಾತ್ರೆಗೆ ಅನುಮತಿ ನೀಡಿತ್ತು. ಈ ಹಿಂದೆ ಸುರಕ್ಷತೆಯ ಕಾರಣದಿಂದ ಈ ಅನುಮತಿಯನ್ನು ನೀಡುತ್ತಿರಲಿಲ್ಲ.

3. ಪ್ರತಿ ವರ್ಷ ಸಿಖ್‌ ಗುರುದ್ವಾರ ವ್ಯವಸ್ಥಾಪಕ ಸಮಿತಿಯು ಸಿಖ್ ಭಕ್ತರ ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತದೆ. ಅಲ್ಲಿ ಅವರು ಸಿಖ್ ಸಂಪ್ರದಾಯಕ್ಕೆ ಸಂಬಂಧಿಸಿದ ಅನೇಕ ಐತಿಹಾಸಿಕ ಗುರುದ್ವಾರಗಳಿಗೆ, ವಿಶೇಷವಾಗಿ ಗುರು ನಾನಕ್ ದೇವ್ ಅವರ ಉತ್ಸವದ ನಿಮಿತ್ತ, ಭೇಟಿ ನೀಡಬಹುದು.

ಸಂಪಾದಕೀಯ ನಿಲುವು

ಸರಕಾರವು ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಸತ್ಯವನ್ನು ಜನರ ಮುಂದಿಡಬೇಕು!