ಜಾಮನಗರ (ಗುಜರಾತ್): ೮೦೦ ಆರೋಗ್ಯವಂತ ಜನರಿಗೆ ಹೃದಯ ಶಸ್ತ್ರಚಿಕಿತ್ಸೆ; ೬ ಕೋಟಿ ರೂಪಾಯಿ ವಂಚನೆ !

ಜಾಮನಗರ (ಗುಜರಾತ್) – ‘ಜೆಸಿಸಿ ಹಾರ್ಟ್ ಇನ್‌ಸ್ಟಿಟ್ಯೂಟ್’ ಆಸ್ಪತ್ರೆಯಲ್ಲಿ, ಆರೋಗ್ಯವಂತ ವ್ಯಕ್ತಿಗಳಿಗೆ ಅಗತ್ಯವಿಲ್ಲದಿದ್ದರೂ ಹೃದಯ ಶಸ್ತ್ರಚಿಕಿತ್ಸೆ ಮಾಡಿ ‘ಸ್ಟೆಂಟ್’ (ಧಮನಿಗಳಲ್ಲಿ ಅಳವಡಿಸಲಾಗುವ ಆಧಾರದ ನಳಿಕೆ) ಹಾಕಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಇಲ್ಲಿ ಸುಮಾರು ೮೦೦ ಶಸ್ತ್ರಚಿಕಿತ್ಸೆಗಳು ದಾಖಲಾಗಿವೆ. ಇದಕ್ಕಾಗಿ ಸಂಬಂಧಪಟ್ಟವರಿಂದ ೬ ಕೋಟಿ ರೂಪಾಯಿಗಳ ಬಿಲ್ ವಸೂಲಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆಗಳ ಸಂಖ್ಯೆಯ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅನುಮಾನ ಬಂದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

೧. ಈ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ‘ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ’ಯಡಿ ಮಾಡಲಾಗಿದೆ ಎಂದು ಹೇಳಿ, ಅವುಗಳ ಬಿಲ್ ಅನ್ನು ಆರೋಗ್ಯ ಇಲಾಖೆಗೆ ಕಳುಹಿಸಲಾಗಿತ್ತು. ಶಸ್ತ್ರಚಿಕಿತ್ಸೆಗಳ ಸಂಖ್ಯೆ ಮತ್ತು ಬಿಲ್‌ಗಳನ್ನು ನೋಡಿ, ಏನೋ ತಪ್ಪಾಗಿದೆ ಎಂದು ಆರೋಗ್ಯ ಇಲಾಖೆಗೆ ಅನುಮಾನ ಬಂತು. ಆರೋಗ್ಯ ಇಲಾಖೆಯ ಅಧಿಕಾರಿಗಳು ತನಿಖೆ ಆರಂಭಿಸಿದರು.

೨. ಪ್ರಾಥಮಿಕ ತನಿಖೆಯಲ್ಲಿ, ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದ ೧೦೫ ಜನರಿಗೆ ಸ್ಟೆಂಟ್‌ಗಳನ್ನು ಅಳವಡಿಸಲಾಗಿದೆ ಎಂಬುದು ಬಹಿರಂಗವಾಗಿದೆ. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಹಣವನ್ನು ಲೂಟಿ ಮಾಡಲು ಈ ಕೆಲಸ ಮಾಡಲಾಗಿದೆ. ಆಸ್ಪತ್ರೆಯ ಇತರ ನಿರ್ದೇಶಕರು ಮತ್ತು ಪಾಲುದಾರರಿಗೆ ಏನೂ ತಿಳಿಯಬಾರದೆಂದು ಡಾ. ಪಾರ್ಶ್ವ ವೋರಾ ಅವರ ಮೇಲೆ ಶಸ್ತ್ರಚಿಕಿತ್ಸೆಯ ಆರೋಪ ಹೇರಲಾಗಿದೆ. ‘ಆಯುಷ್ಮಾನ್ ಕಾರ್ಡ್’ ಫಲಾನುಭವಿಗಳ ಆನ್‌ಲೈನ್ ಸೇರಿದಂತೆ ಎಲ್ಲಾ ಪ್ರವೇಶ ಪ್ರಕ್ರಿಯೆಯ ಮಾಹಿತಿಯನ್ನು ಅವರು ತಮ್ಮ ಬಳಿಯೇ ಇಟ್ಟುಕೊಂಡಿದ್ದರು ಎಂದು ಆರೋಪಿಸಲಾಗಿದೆ.

೩. ‘ರೋಗಿಗಳನ್ನು ಕಳುಹಿಸಿದ್ದಕ್ಕಾಗಿ ಔಷಧ ಕಂಪನಿಗಳಿಂದ ವೈದ್ಯರಿಗೆ ಶೇ.೨೦% ರಷ್ಟು ದಲ್ಲಾಳಿ ಹಣ ನೀಡಲಾಗುತ್ತಿತ್ತು’ ಎಂದೂ ತನಿಖೆಯಲ್ಲಿ ತಿಳಿದುಬಂದಿದೆ. ಈಗ ಈ ಆಸ್ಪತ್ರೆಯನ್ನು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಿಂದ ತೆಗೆದುಹಾಕಲಾಗಿದೆ ಮತ್ತು ೬ ಲಕ್ಷ ರೂಪಾಯಿ ದಂಡವನ್ನೂ ಸಹ ವಿಧಿಸಲಾಗಿದೆ.

೪. ಈ ಮೊದಲು ಕರ್ಣಾವತಿಯಲ್ಲಿನ ಒಂದು ಪ್ರಖ್ಯಾತ ಆಸ್ಪತ್ರೆಯಲ್ಲಿಯೂ ಆಯುಷ್ಮಾನ್ ಭಾರತ್ ಯೋಜನೆಯ ಇಂತಹ ಹಗರಣ ಬೆಳಕಿಗೆ ಬಂದಿತ್ತು. ಈ ಆಸ್ಪತ್ರೆಯಲ್ಲಿ ೧೯ ಜನರಿಗೆ ಬಲವಂತವಾಗಿ ‘ಆಂಜಿಯೋಗ್ರಫಿ’ (ರಕ್ತನಾಳಗಳ (ಧಮನಿಗಳು/ಶಿರೆಗಳು) ಬಣ್ಣದ ಸಹಾಯದಿಂದ ಚಿತ್ರೀಕರಣ) ಮಾಡಲಾಗಿತ್ತು, ಮತ್ತು ೭ ಜನರ ಮೇಲೆ ‘ಆಂಜಿಯೋಪ್ಲಾಸ್ಟಿ’ (ಬಲೂನ್ ಮೂಲಕ ವಿಸ್ತರಿಸಿದ ಧಮನಿಯನ್ನು ಉಬ್ಬಿಸಿ ಮತ್ತು ಅಗತ್ಯವಿದ್ದರೆ ಸ್ಟೆಂಟ್ ಅಳವಡಿಸಿ ಮತ್ತೆ ತೆರೆಯುವ ಪ್ರಕ್ರಿಯೆ) ಮಾಡಲಾಗಿತ್ತು; ಆದರೆ ಈ ಶಸ್ತ್ರಚಿಕಿತ್ಸೆಯ ವೇಳೆ ಇಬ್ಬರು ಸಾವನ್ನಪ್ಪಿದ್ದರು, ಮತ್ತು ೫ ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಜಿಹಾದಿ ಭಯೋತ್ಪಾದಕ ವೈದ್ಯರು ಬಾಂಬ್ ಸ್ಫೋಟದಿಂದ ಜನರನ್ನು ಕೊಲ್ಲುತ್ತಾರೆ, ಆದರೆ ಆಸ್ಪತ್ರೆಯ ವೈದ್ಯರು ಈ ರೀತಿ ಜನರನ್ನು ಲೂಟಿ ಮಾಡುತ್ತಾರೆ!
  • ಈ ರೀತಿ ಜನರನ್ನು ವಂಚಿಸಿ ಲೂಟಿ ಮಾಡುವ ವೈದ್ಯರಿಗೆ ಗಲ್ಲು ಶಿಕ್ಷೆಯೇ ಆಗಬೇಕು!