ಪಂಜಾಬ್‌ನಲ್ಲಿ ಭಯೋತ್ಪಾದಕ ಕೃತ್ಯದ ಸಂಚು ವಿಫಲ: 10 ಜನರ ಬಂಧನ : Punjab Terrorist Plot Busted

ಮಲೇಷಿಯಾದಿಂದ ಐ.ಎಸ್.ಐ. ಸೂಚನೆಗಳ ಮೇರೆಗೆ ಗ್ರೆನೇಡ್‌ ಗಳ ಮೂಲಕ ದಾಳಿ ನಡೆಸಲು ಯತ್ನ

ಲುಧಿಯಾನ (ಪಂಜಾಬ) – ಪಂಜಾಬ್ ಪೊಲೀಸರು ಮಲೇಷಿಯಾದಿಂದ ನಿರ್ವಹಿಸಲಾಗುತ್ತಿದ್ದ ಗ್ರೆನೇಡ್ ದಾಳಿಯ ಸಂಚನ್ನು ವಿಫಲಗೊಳಿಸಿದ್ದಾರೆ. ಈ ಸಂದರ್ಭದಲ್ಲಿ 10 ಜನರನ್ನು ಬಂಧಿಸಲಾಗಿದೆ. ಈ ಗುಂಪು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐ.ಎಸ್.ಐ. (‘ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್’) ನ ಸೂಚನೆಗಳ ಮೇರೆಗೆ ಮಲೇಷಿಯಾದಿಂದ ಕಾರ್ಯನಿರ್ವಹಿಸುತ್ತಿತ್ತು. ಭಯೋತ್ಪಾದಕರು ಪಂಜಾಬಿನ ಜನನಿಬಿಡ ಪ್ರದೇಶಗಳಲ್ಲಿ ಸ್ಫೋಟಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದರು. ನವೆಂಬರ್ 13 ರಂದು ಪೊಲೀಸರು ಈ ಜಾಲವನ್ನು ಭೇದಿಸಿದ್ದಾರೆ.

1. ಪೊಲೀಸರ ಪ್ರಕಾರ, ಆರೋಪಿಗಳು ಪಾಕಿಸ್ತಾನದಲ್ಲಿರುವ ತಮ್ಮ ನಿರ್ವಾಹಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಮಲೇಷಿಯಾದಲ್ಲಿರುವ ಮೂವರು ವ್ಯಕ್ತಿಗಳು ‘ಅಜಯ್’ ಉರ್ಫ್ ‘ಅಜಯ್ ಮಲೇಷಿಯಾ’, ಜೈಸ್ ಬೆಹಬಾಲ್ ಮತ್ತು ಪವನದೀಪ್ ಸಂದೇಶಗಳು ಮತ್ತು ಸೂಚನೆಗಳನ್ನು ತಲುಪಿಸುತ್ತಿದ್ದರು. ಈ ಮೂವರ ವಿರುದ್ಧ ‘ರೆಡ್ ಕಾರ್ನರ್’ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಮೂವರು ಮೂಲತಃ ರಾಜಸ್ಥಾನದ ಶ್ರೀಗಂಗಾನಗರದವರಾಗಿದ್ದು, ಪ್ರಸ್ತುತ ಮಲೇಷಿಯಾದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಐ.ಎಸ್.ಐ. ಜೊತೆ ನೇರ ಸಂಪರ್ಕ ಇರುವುದು ಸ್ಪಷ್ಟವಾಗಿದೆ. (ಕೇಂದ್ರ ರಕ್ಷಣಾ ಏಜೆನ್ಸಿಗಳ ಸಹಾಯದಿಂದ ಪಂಜಾಬ್ ಪೊಲೀಸರು ಈ ದೇಶದ್ರೋಹಿಗಳನ್ನು ಭಾರತಕ್ಕೆ ಕರೆತಂದು ಗಲ್ಲು ಶಿಕ್ಷೆ ಕೊಡಿಸಲು ಪ್ರಯತ್ನಿಸಬೇಕು! – ಸಂಪಾದಕರು)

2. ಮುಕ್ತಸರದಲ್ಲಿ ಕುಲದೀಪ ಸಿಂಗ್‌ ನನ್ನು ಬಂಧಿಸಿದ ನಂತರ ಈ ಸಂಚು ಬೆಳಕಿಗೆ ಬಂದಿದೆ. ಇದರ ನಂತರ ಪೊಲೀಸರು ಶೇಖರ ಮತ್ತು ಅಜಯ ಅವರನ್ನೂ ಬಂಧಿಸಿದರು.

ಮಾರಕಾಸ್ತ್ರಗಳನ್ನು ಪೂರೈಸಲು ಬಳಸಲಾಗುತ್ತಿದ್ದ ಮಾದಕವಸ್ತು ಜಾಲ!

ಲೂಧಿಯಾನ ಪೊಲೀಸ್ ಆಯುಕ್ತ ಸ್ವಪನ್ ಶರ್ಮಾ ಹೇಳಿದ್ದಾರೆ.

ಮಲೇಷಿಯಾದ ಮಾಸ್ಟರ್‌ಮೈಂಡ್ ಆರಂಭದಲ್ಲಿ ಮಾದಕವಸ್ತು ಜಾಲವನ್ನು ಬಳಸುತ್ತಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ. ನಂತರ ಇದನ್ನು ಗ್ರೆನೇಡ್‌ಗಳು ಮತ್ತು ದಾಳಿಗೆ ಪೂರೈಕೆ ಸರಪಳಿಯನ್ನು ಸ್ಥಾಪಿಸಲು ಬಳಸಲಾಯಿತು.

3. ಮೂವರ ವಿಚಾರಣೆಯಿಂದಾಗಿ ಅಮರಿಕಾ ಸಿಂಗ್, ಪರಮಿಂದರ್ ಉರ್ಫ್ ‘ಛೀರಿ’ ಮತ್ತು ವಿಜಯ ಅವರನ್ನೂ ವಶಕ್ಕೆ ಪಡೆಯಲಾಯಿತು. ಅವರೊಂದಿಗೆ ಫರೀದಕೋಟ್ ಮತ್ತು ಶ್ರೀಗಂಗಾನಗರದಿಂದ ಸುಖಜೀತ ಸಿಂಗ್ ಉರ್ಫ್ ಸುಖ್ ಬ್ರಾರ್, ಸುಖವಿಂದರ್ ಸಿಂಗ್, ಕರಣವೀರ್ ಸಿಂಗ್ ಉರ್ಫ್ ವಿಕ್ಕಿ ಮತ್ತು ಸಾಜನ ಕುಮಾರ ಉರ್ಫ್ ಸಂಜು ಅವರನ್ನೂ ಬಂಧಿಸಲಾಗಿದೆ. ಇವರೆಲ್ಲರೂ ಸ್ಥಳೀಯ ಮಟ್ಟದಲ್ಲಿ ಸರಬರಾಜುದಾರರು ಮತ್ತು ಸಾಗಣಿಕೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮಾದಕ ವಸ್ತುಗಳ ಜಾಲವನ್ನು ನಂತರ ಕೈಗ್ರೆನೇಡ್‌ಗಳ ಪೂರೈಕೆಗಾಗಿ ಬಳಕೆ!