‘ಭಾರತದಲ್ಲಿ ಆಂತರಿಕ ಮತ್ತು ಬಾಹ್ಯ ಎಂಬ ಎರಡು ರೀತಿಯ ಭಯೋತ್ಪಾದನೆಗಳಿವೆಯಂತೆ!’ : Congressi P. Chidambaram

  • ದೆಹಲಿ ಕೆಂಪು ಕೋಟೆ ಬಾಂಬ್ ಸ್ಫೋಟದ ಪ್ರಕರಣ

  • ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಹೇಳಿಕೆ

ಕಾಂಗ್ರೆಸ್ ನಾಯಕ ಪಿ. ಚಿದಂಬರಂ

ನವದೆಹಲಿ – ಭಯೋತ್ಪಾದಕರು ಎರಡು ಪ್ರಕಾರದವರಾಗಿದ್ದಾರೆ. ನುಸುಳುವವರು ಮತ್ತು ದೇಶದೊಳಗೆ ಬೆಳೆಯುವವರು, ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮೊದಲು ಮತ್ತು ನಂತರವೂ ನಾನು ಇದನ್ನೇ ಹೇಳುತ್ತಿದ್ದೇನೆ. ಸಂಸತ್ತಿನಲ್ಲಿ ‘ಆಪರೇಷನ್ ಸಿಂದೂರ್’ ಮೇಲಿನ ಚರ್ಚೆಯಲ್ಲಿಯೂ ನಾನು ಇದನ್ನು ಹೇಳಿದ್ದೆ. ನನ್ನನ್ನು ಗೇಲಿ ಮಾಡಲಾಯಿತು; ಆದರೆ ಸರಕಾರವು ಮೌನವಾಗಿತ್ತು; ಏಕೆಂದರೆ ಅದಕ್ಕೂ ಸಹ ಈ ಪ್ರವೃತ್ತಿಗಳ ಅರಿವಿತ್ತು, ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಗೃಹಮಂತ್ರಿ ಪಿ. ಚಿದಂಬರಂ ಅವರು ಕೆಂಪು ಕೋಟೆಯ ಸಮೀಪದಲ್ಲಿನ ಬಾಂಬ್ ಸ್ಫೋಟದ ನಂತರ ಹೇಳಿಕೆ ನೀಡಿದರು.

ಯಾವ ವಾತಾವರಣವು ಭಾರತೀಯ ನಾಗರಿಕರನ್ನು ಭಯೋತ್ಪಾದನೆಯ ಕಡೆಗೆ ತಳ್ಳುತ್ತದೆ?

ಚಿದಂಬರಂ ಅವರು ತಮ್ಮ ಮಾತು ಮುಂದುವರಿಸಿ,

ನಾವು ಯೋಚಿಸಬೇಕು, ಯಾವ ವಾತಾವರಣವು ಭಾರತೀಯ ನಾಗರಿಕರನ್ನು ಭಯೋತ್ಪಾದನೆಯ ಕಡೆಗೆ ತಳ್ಳುತ್ತದೆ? (ಕಾಂಗ್ರೆಸ್ಸಿನ ಆಡಳಿತದಲ್ಲಿ ಗೃಹಸಚಿವರಾಗಿದ್ದಾಗ ಚಿದಂಬರಂ ಅವರೇ ಇದರ ಕಾರಣವನ್ನು ಹೇಳಬೇಕು; ಆದರೆ ಅವರ ಪ್ರಶ್ನೆಯ ಮೂಲಕ ಅವರು ‘ದೇಶದಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿದೆ, ಬಾಬ್ರಿಯನ್ನು ಕೆಡವಲಾಯಿತು, ಈ ಕಾರಣಗಳಿಂದ ಅವರು ಭಯೋತ್ಪಾದಕ ಕೃತ್ಯಗಳನ್ನು ಮಾಡುತ್ತಿದ್ದಾರೆ, ಎಂದು ಅವರು ಹೇಳಬಯಸುತ್ತಿದ್ದಾರೆ’ ಇಂತಹ ಮನಃಸ್ಥಿತಿಯ ಕಾರಣದಿಂದಲೇ ಕಾಂಗ್ರೆಸ್‌ನ ಆಡಳಿತದಲ್ಲಿ ದೇಶದಲ್ಲಿ ಜಿಹಾದಿ ಭಯೋತ್ಪಾದನೆಯು ನಾಶವಾಗದೆ ದಿನೇದಿನೇ ಹೆಚ್ಚುತ್ತಾ ಹೋಯಿತು! – ಸಂಪಾದಕರು)

ಚಿದಂಬರಂ ಅವರ ಸರಕಾರದ ಕಾಲದಲ್ಲಿ ಪ್ರತಿದಿನ ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು! – ಭಾಜಪ

ಈ ಹೇಳಿಕೆಯ ಕುರಿತು ಭಾಜಪ ನಾಯಕ ಗೌರವ ವಲ್ಲಭ ಅವರು ಟೀಕಿಸುತ್ತಾ,

ಚಿದಂಬರಂ ಅವರಿಗೆ ಭಯೋತ್ಪಾದನೆಯ ವಿಶೇಷ ಜ್ಞಾನವಿರಬೇಕು; ಏಕೆಂದರೆ ಅವರ ಕಾಲದಲ್ಲಿ ದೇಶದಲ್ಲಿ ಬಹುತೇಕ ಪ್ರತಿದಿನ ಎಲ್ಲೆಲ್ಲೋ ಸ್ಫೋಟಗಳು ನಡೆಯುತ್ತಿದ್ದವು. ಈಗಿನ ಸರಕಾರ ಮತ್ತು ದೇಶದ ಜನರು ಭಯೋತ್ಪಾದನೆಯನ್ನು ಕೇವಲ ಭಯೋತ್ಪಾದನೆ ಎಂದೇ ನೋಡುತ್ತಾರೆ. ಅದರ ಪ್ರಕಾರಗಳನ್ನು ಹುಡುಕುತ್ತಾ ಕೂರುವುದಿಲ್ಲ. ಈಗಿನ ಸರಕಾರವು ಭಯೋತ್ಪಾದನೆಗೆ ಕಠಿಣ ಉತ್ತರ ನೀಡುತ್ತದೆ. ಅಂತಹವರ ಕೃತ್ಯಗಳಿಗೆ ನ್ಯಾಯಾಲಯದ ಪ್ರಕ್ರಿಯೆಯ ಪ್ರಕಾರ ಶಿಕ್ಷೆಯು ಖಚಿತವಾಗಿ ಸಿಗಲಿದೆ. ಈಗಿನ ಸರಕಾರವು ಹಿಂದಿನ ಸರಕಾರದಂತೆ ಇಲ್ಲ, ಒಂದು ಕಾಲದಲ್ಲಿ 3 ಸಾವಿರ ಕಿಲೋ ಸ್ಫೋಟಕಗಳು ದೇಶಕ್ಕೆ ಯಾವಾಗ ಬಂದವು? ಮತ್ತು ಯಾವಾಗ ಬಳಸಲ್ಪಟ್ಟವು? ಎಂಬುದು ಸಹ ತಿಳಿಯುತ್ತಿರಲಿಲ್ಲ. ಆದರೆ ಈಗಿನ ಸರಕಾರವು ಎಚ್ಚರಿಕೆಯಿಂದ ಕ್ರಮ ಕೈಗೊಂಡು ಸ್ಫೋಟಕಗಳನ್ನು ಜಪ್ತಿ ಮಾಡಿತು ಮತ್ತು ಈ ಒತ್ತಡದಿಂದಲೇ ಭಯೋತ್ಪಾದಕರು ಕೆಂಪು ಕೋಟೆಯ ಸಮೀಪದ ಸ್ಫೋಟದಂತಹ ಘಟನೆಗಳನ್ನು ಮಾಡುವ ಕಡೆಗೆ ತಿರುಗಿದರು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಎರಡು ಅಲ್ಲ, ಕೇವಲ ಒಂದೇ ರೀತಿಯ ಭಯೋತ್ಪಾದನೆ ಇದ್ದು, ಅದು ಜಿಹಾದಿ ಭಯೋತ್ಪಾದನೆ! ಅದನ್ನು ಮಾಡುವವರು ಭಾರತೀಯ ಮತ್ತು ಪಾಕಿಸ್ತಾನಿ ಮುಸಲ್ಮಾನರಾಗಿರುತ್ತಾರೆ, ಎಂಬುದು ಪ್ರತಿ ಬಾರಿಯೂ ಬಹಿರಂಗಗೊಂಡಿದೆ. ಭಾರತದಲ್ಲಿನ ಮುಸಲ್ಮಾನರಿಗೆ ಪಾಕಿಸ್ತಾನದಿಂದಲೇ ಕೃತ್ಯಗಳನ್ನು ಮಾಡಲು ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ, ಹೀಗಿರುವಾಗ ಚಿದಂಬರಂ ಅವರು ಇಂತಹ ಹೇಳಿಕೆಯನ್ನು ನೀಡಿ ಪಾಕಿಸ್ತಾನಕ್ಕೆ ಸಹಕಾರ ನೀಡಲು ಪ್ರಯತ್ನಿಸುತ್ತಿದ್ದಾರೆ!