ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲು ಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನು ನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಾಧನೆಯ ಪಂಚಸೂತ್ರಗಳಲ್ಲಿ ಮೊದಲನೆಯ ಸೂತ್ರವಾದ ‘ವಿಚಾರಿಸುವ ವೃತ್ತಿ’, ಈ ಸಂದರ್ಭದಲ್ಲಿ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಸಾಧನೆಯೆಂದರೆ ಈಶ್ವರಪ್ರಾಪ್ತಿಗಾಗಿ ನಿರಂತರ ಮಾಡಬೇಕಾದ ಪ್ರಯತ್ನ ! ಸಾಧನೆಯೆಂದರೆ ಈಶ್ವರನೊಂದಿಗೆ ಜೋಡಿಸಲ್ಪಡುವ ನಿರಂತರ ಪ್ರಕ್ರಿಯೆ ! ಅನೇಕ ಬಾರಿ ಗಮನಕ್ಕೆ ಬರುವ ವಿಷಯವೆಂದರೆ, ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿದ್ದರೂ ಸಾಧನೆಯಲ್ಲಿ ಮೇಲಿಂದ ಮೇಲೆ ಬರುವ ಅಡೆತಡೆಗಳಿಂದಾಗಿ ಸಾಧಕರು ಒಂದೇ ಹಂತದಲ್ಲಿ ಸಿಲುಕಿರುತ್ತಾರೆ. ಮುಂದೆ ಹೋಗುವ ಮಾರ್ಗವನ್ನು ಭಗವಂತನು ನಮಗೆ ಆಗಾಗ ತೋರಿಸುತ್ತಿದ್ದರೂ ಅದು ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ‘ಸಾಧನೆಯಲ್ಲಿ ಮುಂದೆ ಹೋಗಲು ನಿರ್ದಿಷ್ಟವಾಗಿ ಯಾವ ಪ್ರಯತ್ನ ಮಾಡುವುದು ಅಪೇಕ್ಷಿತವಿದೆ ?’, ಎಂದು ಹೊಳೆಯುವುದಿಲ್ಲ. ಆ ಸಮಯದಲ್ಲಿ ಸಾಧಕರು ‘ಸಾಧನೆಯಲ್ಲಿ ಮುಂದೆ ಹೋಗಲು ಬಯಸಿದರೂ ನಾವು ಒಂದೇ ಹಂತದಲ್ಲಿ ಏಕೆ ಸಿಲುಕಿಕೊಂಡಿದ್ದೇವೆ ?’, ಎಂಬ ಬಗ್ಗೆ ಚಿಂತನೆ ಮಾಡಿ ಪ್ರಯತ್ನಿಸುವುದು ಅಪೇಕ್ಷಿತವಿರುತ್ತದೆ. ‘ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಯಾವ ಅಡಚಣೆಗಳು ಇರಬಹುದು ? ಮತ್ತು ಆ ಅಡಚಣೆಗಳನ್ನು ದೂರ ಮಾಡಲು ಏನು ಮಾಡಬೇಕು ?’, ಈ ಬಗೆಗಿನ ಮಾರ್ಗದರ್ಶನವನ್ನು ಪ್ರತಿ ಗುರುವಾರದಂದು ನಡೆಯುವ ಭಕ್ತಿಸತ್ಸಂಗದ ಅಂತರ್ಗತ ‘ವಿಶೇಷ ಭಕ್ತಿಸತ್ಸಂಗ ಶೃಂಖಲೆಯ’ ಮೂಲಕ ಮಾಡಲಾಗುತ್ತಿದೆ. ‘ಈ ಹೊಸ ಭಕ್ತಿಸತ್ಸಂಗ ಶೃಂಖಲೆಯಿಂದ ಸಾಧಕರಿಗೆ ಮತ್ತು ವಾಚಕರಿಗೆ ಹೆಚ್ಚೆಚ್ಚು ಲಾಭ ಆಗಬೇಕೆಂದು ಅದರಲ್ಲಿನ ಅಂಶಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.

ಕಳೆದ ವಾರದ ಸಂಚಿಕೆಯಲ್ಲಿ ನಾವು ‘ವಿಚಾರಿಸಿ ಮಾಡುವುದರ ಮಹತ್ವ’ವನ್ನು ಅರಿತುಕೊಂಡೆವು. ಈ ವಾರದ ಲೇಖನದಲ್ಲಿ ‘ವಿಚಾರಿಸದಿರುವುದರ’ ಹಿಂದೆ ವಿವಿಧ ರೀತಿಯ ತಪ್ಪು ಮಾನಸಿಕತೆ ಏನಿರುತ್ತದೆ ? ಅದನ್ನು ಹೇಗೆ ಎದುರಿಸುವುದು ? ಅದಕ್ಕಾಗಿ ಕೃತಿಯ ಸ್ತರದಲ್ಲಿ ಅಥವಾ ಭಾವದ ಸ್ತರದಲ್ಲಿ ಹೇಗೆ ಪ್ರಯತ್ನಿಸಬೇಕು ?’ ಎಂಬುದರ ಬಗ್ಗೆ ಅರಿತುಕೊಳ್ಳೋಣ. (ಲೇಖನ ೨)

೭. ವಿಚಾರಿಸದಿರುವ ಹಿಂದಿನ ಅಯೋಗ್ಯ ಮಾನಸಿಕತೆ ಮತ್ತು ಅದಕ್ಕೆ ಯೋಗ್ಯ ದೃಷ್ಟಿಕೋನ ಮತ್ತು ಉಪಾಯಯೋಜನೆ

೭ ಅ. ‘ನನಗೆ ಹೆಚ್ಚು ತಿಳಿಯುತ್ತದೆ’ ಎಂದೆನಿಸುವುದು : ‘ನಾವು ಅನೇಕ ವರ್ಷಗಳಿಂದ ಸಾಧನೆ ಮತ್ತು ಸೇವೆ ಮಾಡಿದ್ದರಿಂದ ಅನೇಕ ಸಾಧಕರಿಗೆ ‘ನಾವು ಮಾಡುತ್ತಿರುವುದು ಯೋಗ್ಯವಿದೆ’, ಎಂದು ಅನಿಸುತ್ತಿರುತ್ತದೆ. ‘ನನಗೆ ತಿಳಿಯುತ್ತದೆ’, ಈ ವಿಚಾರದಿಂದ ‘ನಾನು ಸಾಧನೆಯಲ್ಲಿ ಹಳಬನಾಗಿದ್ದೇನೆ. ನನಗೆ ಈಗ ಎಲ್ಲ ದೃಷ್ಟಿಕೋನ ತಿಳಿದಿದೆ. ನಾನು ಸ್ವತಃ ಪ್ರಯತ್ನ ಮಾಡಬಹುದು’ ಎಂಬಂತೆ ಸಾಧಕನಿಗೆ ತನ್ನ ಸಾಧನೆಯ ಅಥವಾ ಅನುಭವದ ಅಹಂ ಇರುತ್ತದೆ. ಅವನಿಗೆ ಇಂತಹ ಅಹಂಯುಕ್ತ ವಿಚಾರಗಳಿಂದ ನಮಗೆ ವಿಚಾರಿಸುವ ಅವಶ್ಯಕತೆ ಅನಿಸುವುದಿಲ್ಲ. ‘ಸೇವೆಯ ಸಂದರ್ಭದಲ್ಲಿ ಕೆಲವು ಅಂಶಗಳನ್ನು ಕೇಳದಿದ್ದರೂ ನಡೆಯುತ್ತದೆ. ನಂತರ ಹೇಳೋಣ’ ಎಂಬ ಅಯೋಗ್ಯ ಮನೋಭಾವವಿರುತ್ತದೆ.

೭ ಅ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ನಾವು ಸಾಧನೆಯಲ್ಲಿ ಎಷ್ಟೇ ಹಳಬರಾದರೂ ಅಥವಾ ನಮಗೆ ಎಷ್ಟೇ ದೃಷ್ಟಿಕೋನಗಳು ತಿಳಿದಿದ್ದರೂ ಅವು ಕಾರ್ಯರೂಪಕ್ಕೆ ಬರಲು ಪರಾಕಾಷ್ಠೆಯ ಪ್ರಯತ್ನಗಳನ್ನು ಮಾಡಲೇಬೇಕಾಗುತ್ತದೆ. ‘ನನಗೆ ತಿಳಿದಿದೆ’, ಎಂಬ ಅಹಂಕಾರದ ವಿಚಾರವು ನಮ್ಮ ಸಾಧನೆಯನ್ನು ನಿಲ್ಲಿಸುತ್ತದೆ. ‘ನಾನು ಇನ್ನೂ ಅಜ್ಞಾನಿ, ನಾನು ಇನ್ನಷ್ಟು ಕಲಿಯಬೇಕು. ಭಗವಂತನ ಕೃಪೆಯಿಲ್ಲದೆ ಏನೂ ಸಾಧ್ಯವಿಲ್ಲ,’ ಎಂದು ಯಾವಾಗ ಅನಿಸುತ್ತದೆಯೋ, ಆಗಲೇ ಸಾಧನೆಗೆ ನಿಜವಾದ ಆರಂಭವಾಗು ತ್ತದೆ. ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಎಲ್ಲ ದೃಷ್ಟಿಕೋನಗಳು ತಿಳಿದಿದ್ದರೂ ಸಾಧನೆಯಲ್ಲಿ ಮುಂದೆ ಹೋಗಲು ಸಮಷ್ಟಿಯ ಸಹಾಯವು ಅತ್ಯಗತ್ಯವಾಗಿರುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ‘ನಮಗೆ ಎಷ್ಟೇ ಅನುಭವವಿದ್ದರೂ ನಾವು ಪರಿಪೂರ್ಣರಲ್ಲ’, ಎಂಬುದನ್ನು ಯಾವಾಗಲೂ ಕಲಿಸುತ್ತಿರುತ್ತಾರೆ. ಗುರುಗಳಿಗೆ ಅಪೇಕ್ಷಿತವಿರುವಂತಹ ಪರಿಪೂರ್ಣತೆಯು ನಮ್ಮಲ್ಲಿ ಬರಲು ನಾವು ಯಾವಾಗಲೂ ಕಲಿಯುವ ಸ್ಥಿತಿಯಲ್ಲಿರಬೇಕು. ಇದಕ್ಕಾಗಿಯೇ ತಿಳಿದಿದ್ದರೂ ನಾವು ಆಗಾಗ ಕೇಳಿಕೊಂಡು ಸೇವೆ ಮಾಡಬೇಕು. ಒಂದು ಸೇವೆಯನ್ನು ನಾವು ಈ ಮೊದಲೇ ಮಾಡಿದ್ದರೂ ಸ್ವಲ್ಪ ಸಮಯದ ನಂತರ ಅದೇ ಸೇವೆಯನ್ನು ಮಾಡುವಾಗ ಇದರ ನಿಲುವಿನಲ್ಲಿ ಅಥವಾ ಸೇವೆ ಮಾಡುವ ಪದ್ಧತಿಯಲ್ಲಿ ಬದಲಾವಣೆ ಯಾಗಿದೆಯೇ ? ಎಂಬುದನ್ನು ನಾವು ಒಮ್ಮೆ ತಿಳಿದುಕೊಳ್ಳಬೇಕು.

೭ ಆ. ಅತಿಯಾದ ಆತ್ಮವಿಶ್ವಾಸ : ಕೆಲವೊಮ್ಮೆ, ‘ನಾವು ತೆಗೆದುಕೊಳ್ಳುವ ನಿರ್ಧಾರವನ್ನೇ ಜವಾಬ್ದಾರ ಸಾಧಕರು ತಿಳಿಸುತ್ತಾರೆ’ ಎಂಬ ವಿಚಾರದಿಂದ, ನಾವು ಅವರನ್ನು ವಿಚಾರಿಸುವುದಿಲ್ಲ.

ಆ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ಜವಾಬ್ದಾರ ಸಾಧಕರ ನಿರ್ಧಾರವು ನಮಗೆ ಅನಿಸಿದಂತೆಯೇ ಇರಬಹುದು, ಆದರೂ ನಾವು ಮಾತನಾಡಿ ಅಥವಾ ಕೇಳಿದಾಗ, ‘ನಾವು ಮಾಡಿದ ವಿಚಾರ ಯೋಗ್ಯವೋ ಅಯೋಗ್ಯ ?’ ಎಂದು ಖಚಿತವಾಗುತ್ತದೆ. ಇದರಿಂದ ನಾವು ಶೇಕಡಾ ೧೦೦ ರಷ್ಟು ನಿಶ್ಚಿಂತೆಯಿಂದ ಆ ಕೃತಿ ಅಥವಾ ಸೇವೆಯನ್ನು ಮಾಡಬಹುದು. ಆದ್ದರಿಂದ, ‘ನಾವು ನಿರ್ಧರಿಸಿದ ನಿರ್ಧಾರವನ್ನೇ ಜವಾಬ್ದಾರ ಸಾಧಕರು ನೀಡುತ್ತಾರೆ’, ಎಂದು ತೀರ್ಮಾನಿಸದೆ, ಆಯಾ ಸಮಯದಲ್ಲಿ ವಿಚಾರಿಸೋಣ.

೭ ಇ. ‘ವಿಚಾರಿಸುವ ಅಗತ್ಯವಿಲಲ್’, ಎಂದು ನಮ್ಮಷ್ಟಕ್ಕೆ ನಿರ್ಧರಿಸುವುದು : ಕೆಲವೊಮ್ಮೆ ನಮಗೆ ‘ಇದು ತುಂಬಾ ಸರಳವಾದ ನಿರ್ಧಾರ’, ‘ಇದು ಸಣ್ಣ ವಿಷಯವಾಗಿದೆ’, ‘ಇದರಲ್ಲಿ ಏನು ವಿಚಾರಿಸಲಿಕ್ಕಿದೆ ?’ ಎಂದು ಅನಿಸುತ್ತದೆ. ಇದರಿಂದಾಗಿ ವಿಚಾರಿಸಿಕೊಳ್ಳುವುದಿಲ್ಲ.

೭ ಇ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ನಮಗೆ ಇದು ಸಣ್ಣ ವಿಷಯವೆಂದು ಅನಿಸಿದರೂ ‘ಯಾವುದೇ ವಿಷಯ ಸಣ್ಣದೋ ಅಥವಾ ದೊಡ್ಡದೋ ?’ ಎಂದು ನಾವೇ ನಮ್ಮಷ್ಟಕ್ಕೆ ನಿರ್ಧರಿಸಬಾರದು. ಇಂತಹ ಸಣ್ಣಪುಟ್ಟ ಪ್ರಸಂಗಗಳಿಂದ ನಮ್ಮ ಸಾಧನೆ ಆಗುತ್ತಿರುತ್ತದೆ. ಆದ್ದರಿಂದ, ‘ನಿರ್ಧಾರವು ಸಣ್ಣದಾಗಿದ್ದರೂ ನಮ್ಮ ಸಾಧನೆಯು ಅದರ ಮೇಲೆ ಅವಲಂಬಿತವಾಗಿದೆ’, ಎಂಬುದನ್ನು ಗಮನದಲ್ಲಿಡಬೇಕು ಮತ್ತು ಆಯಾ ಸಂದರ್ಭದಲ್ಲಿ ಜವಾಬ್ದಾರ ಸಾಧಕರಲ್ಲಿ ವಿಚಾರಿಸಿಕೊಳ್ಳಬೇಕು

೭ ಈ. ‘ಅದೇ ವಿಷಯಗಳನ್ನು ಎಷ್ಟು ಬಾರಿ ವಿಚಾರಿಸಬೇಕು ?’ ಎಂದೆನಿಸುವುದು : ಸೇವೆಯ ವಿಷಯದಲ್ಲಿ ಯಾವುದಾದರೊಂದು ಅಂಶದ ಬಗ್ಗೆ ಹಿಂದೆ ಕೆಲವು ಉತ್ತರ ಅಥವಾ ನಿರ್ಧಾರ ಸಿಕ್ಕಿರುತ್ತದೆ. ಅದರಂತೆ ನಾವು ಕೃತಿ ಮಾಡುತ್ತಿರುತ್ತೇವೆ. ಮತ್ತೆ ಅಂತಹ ಸಂದರ್ಭ ಬಂದಾಗ, ‘ಮೊದಲು ಕೊಟ್ಟಿದ್ದ ಉತ್ತರದ ಪ್ರಕಾರವೇ ಮಾಡೋಣ. ಅದೇ ವಿಷಯವನ್ನು ಮತ್ತೆ ಏಕೆ ವಿಚಾರಿಸಬೇಕು ?’ ಎಂದು ನಮಗೆ ಅನಿಸುತ್ತದೆ.

೭ ಈ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ಹಿಂದೊಮ್ಮೆ ಸಿಕ್ಕಿದ ನಿರ್ಧಾರವು ಆ ಪರಿಸ್ಥಿತಿಗೆ ಅನುಗುಣವಾಗಿರುತ್ತದೆ, ಆದರೆ ಈಗಿನ ಪರಿಸ್ಥಿತಿಗನುಗುಣವಾಗಿ ಅದರಲ್ಲಿ ಕೆಲವು ಬದಲಾವಣೆಗಳೂ ಆಗಬಹುದು. ಆದ್ದರಿಂದ, ಈಗಿನ ಪರಿಸ್ಥಿತಿಯಲ್ಲಿ ಆ ವಿಷಯವನ್ನು ಮತ್ತೊಮ್ಮೆ ವಿಚಾರಿಸಿಕೊಳ್ಳುವುದೇ ನಮ್ಮ ಸಾಧನೆಯಾಗಿದೆ.

೭ ಉ. ನಾನು ಹೇಳಿದ್ದು ಇತರರಿಗೆ ಅರ್ಥವಾಗುವುದಿಲ್ಲ ಎಂದು ಅನಿಸುವುದು : ಕೆಲವೊಮ್ಮೆ ‘ನನ್ನಿಂದ ಯೋಗ್ಯ ರೀತಿಯಲ್ಲಿ ಪ್ರಶ್ನೆ ವಿಚಾರಿಸಲು ಆಗಬಹುದೇ ? ಸಹ-ಸಾಧಕರಿಗೆ ಅಥವಾ ಜವಾಬ್ದಾರ ಸಾಧಕರಿಗೆ ನಾನು ವಿಚಾರಿಸಿದ್ದು ಅರ್ಥವಾಗುವುದಿಲ್ಲ’, ಎಂದು ಅನಿಸಿ ವಿಚಾರಿಸುವುದನ್ನು ತಪ್ಪಿಸಲಾಗುತ್ತದೆ.

೭ ಉ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ಇಂತಹ ಸಮಯದಲ್ಲಿ ‘ಆ ಸಾಧಕರೂ ನಮ್ಮವರೇ ಆಗಿದ್ದಾರೆ. ಅವರೂ ಗುರುಸೇವಕರಾಗಿದ್ದಾರೆ. ಆದ್ದರಿಂದ, ಅವರಿಗೆ ಪ್ರಶ್ನೆ ಕೇಳುವಾಗ ‘ನನ್ನಿಂದ ಏನಾದರೂ ತಪ್ಪಾಗುತ್ತದೆಯೇ ?’, ಎಂದು ಸಂಕೋಚಪಡದೆ ಮನಮುಕ್ತವಾಗಿ ಕೇಳೋಣ. ಮಾತನಾಡಿ ಮುಗಿದ ನಂತರ ‘ನಾವು ಹೇಳಿದ್ದು ಅವರಿಗೆ ಸ್ಪಷ್ಟವಾಯಿತೇ ?’ ಅಥವಾ ‘ನಾನು ಮಾತನಾಡಿದ್ದರಲ್ಲಿ ಏನಾದರೂ ತಪ್ಪಾಗಿದೆಯೇ ?’, ಎಂದು ಅವರಲ್ಲಿ ಕೇಳಬಹುದು.

ಕೆಲವೊಮ್ಮೆ ವಿಷಯವು ಸಂಪೂರ್ಣವಾಗಿ ನೆನಪಿರುವುದಿಲ್ಲ ಅಥವಾ ಆ ಸಮಯದಲ್ಲಿ ತೊಂದರೆದಾಯಕ ಶಕ್ತಿಯ ಆವರಣವಿದ್ದರೆ ಹೊಳೆಯುವುದಿಲ್ಲ. ಇದರಿಂದಾಗಿ ಕೇಳುವಾಗ ಅಡಚಣೆಯಾಗುತ್ತದೆ. ಅಂತಹ ಸಮಯದಲ್ಲಿ, ಕೇಳಬೇಕಾದ ಅಂಶಗಳನ್ನು ಜವಾಬ್ದಾರ ಸಾಧಕರಿಗೆ ಲಿಖಿತ ರೂಪದಲ್ಲಿ ನೀಡಿ ಕೇಳಬಹುದು. ಎಲ್ಲ ವಿಚಾರಗಳನ್ನು ಬರೆದುಕೊಟ್ಟರೆ, ‘ನಮ್ಮದೇನೂ ಬಿಟ್ಟುಹೋಗಿದೆ,’ ಎಂದು ಆಗುವುದಿಲ್ಲ.

೭ ಊ. ‘ವಿಚಾರಿಸಿದರೆ ಉತ್ತರ ಬೇಗ ಸಿಗುವುದಿಲ್ಲ’ ಎಂದು ಅನಿಸುವುದು : ಕೆಲವೊಮ್ಮೆ ‘ನಾವು ವಿಚಾರಿಸಿದರೆ, ‘ಉತ್ತರ ಯಾವಾಗ ಸಿಗುತ್ತದೆ ?’ ಎಂದು ಗೊತ್ತಿಲ್ಲ, ನನಗೆ ಈಗಲೇ ಸೇವೆಯನ್ನು ಪೂರ್ಣಗೊಳಿಸಬೇಕಿದೆ, ಎಂಬ ವಿಚಾರವಿರುತ್ತದೆ. ‘ಉತ್ತರ ಸಿಗಲು ಸಮಯ ತೆಗೆದುಕೊಳ್ಳುತ್ತದೆ, ಅಲ್ಲಿಯವರೆಗೂ ನಮ್ಮ ಸೇವೆ ಆಗಿರುತ್ತದೆ’ ಎಂದು ನಮಗೆ ಅನಿಸುತ್ತದೆ. ನಮ್ಮ ಮನಸ್ಸಿನ ಈ ತಪ್ಪು ವಿಚಾರದಿಂದ ‘ವಿಚಾರಿಸುವುದನ್ನು’ ಬಿಡುತ್ತೇವೆ.

೭ ಊ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ನಮಗೆ ತುರ್ತು ಇದ್ದರೆ, ‘ನಮಗೆ ಯಾವಾಗ ತನಕ ಉತ್ತರ ಬೇಕು ?’ ಎಂಬುದನ್ನು ನಾವು ಜವಾಬ್ದಾರ ಸಾಧಕರಿಗೆ ಸ್ಪಷ್ಟಪಡಿಸಬಹುದು. ‘ಕೆಲವೊಮ್ಮೆ ಉತ್ತರ ಬೇಕು, ಆದರೆ ಜವಾಬ್ದಾರ ಸಾಧಕರ ಸಂಪರ್ಕ ಸಾಧ್ಯವಾಗುವುದಿಲ್ಲ, ಆಗ ‘ಬೇರೆ ಏನು ಆಯ್ಕೆ ಇರಬಹುದು ? ಅಥವಾ ಸಹ-ಸಾಧಕರ ಅಭಿಪ್ರಾಯ ತೆಗೆದುಕೊಳ್ಳಬಹುದೇ ?’, ಎಂದು ಸಹ ನಾವು ನೋಡಬಹುದು. ನಾವು ಅಡಚಣೆಯ ಬಗ್ಗೆ ಕೊನೆಯ ಕ್ಷಣದಲ್ಲಿ ಕೇಳದೇ ಸ್ವಲ್ಪ ಮುಂಚೆ ವಿಚಾರಿಸಬಹುದು.

ಕೆಲವೊಮ್ಮೆ ನಮ್ಮ ಮನಸ್ಸಿನಲ್ಲಿ ಆತುರತೆ ಇರುತ್ತದೆ. ಕಾಯುವ ಸಿದ್ಧತೆ ಇರುವುದಿಲ್ಲ, ಆದ್ದರಿಂದ ಆ ಸೇವೆಯನ್ನು ಸ್ವಲ್ಪ ಸಮಯದ ನಂತರ ಮಾಡಲು ಸಾಧ್ಯವಿದ್ದರೂ, ಉತ್ತರಕ್ಕೆ ದಾರಿ ಕಾಯದೇ ತಕ್ಷಣವೇ ಮಾಡುತ್ತೇವೆ. ಅಂತಹ ಅಡೆತಡೆ ಇದ್ದರೆ, ಅಲ್ಲಿ ‘ಭಗವಂತನು ನಮ್ಮಲ್ಲಿ ಕಾಯುವ ಅಥವಾ ತಾಳ್ಮೆಯ ಸ್ವಭಾವವನ್ನು ಬೆಳೆಸುತ್ತಿದ್ದಾನೆ’, ಎಂದು ವಿಚಾರ ಮಾಡೋಣ.

೭ ಎ. ಜವಾಬ್ದಾರ ಸಾಧಕರು ಹೇಳಿದ್ದನ್ನು ಮಾಡಲು ಸಾಧ್ಯವಾಗಲಿಕ್ಕಿಲ್ಲ, ಎಂದು ವಿಚಾರಿಸದಿರುವುದು : ಜವಾಬ್ದಾರ ಸಾಧಕರಿಗೆ ಕೇಳಿದಾಗ ‘ಅವರು ಹೇಳಿದ ಪ್ರಯತ್ನವನ್ನು ಮಾಡಲು ನನ್ನಿಂದ ಸಾಧ್ಯವಾಗಲಿಕ್ಕಿಲ್ಲ ಅಥವಾ ‘ಅದು ನನಗೆ ಸ್ವೀಕಾರವಾಗುವುದೇ ?’, ಎಂದು ಅನಿಸಿ, ತನಗೆ ಹೇಗೆ ಅನುಕೂಲವೋ ಹಾಗೆ ನಾವು ಮಾಡುತ್ತೇವೆ.

೭ ಎ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ಇಂತಹ ಸಮಯದಲ್ಲಿ ‘ಜವಾಬ್ದಾರ ಸಾಧಕರು ಗುರುಗಳ ರೂಪವೇ ಆಗಿದ್ದಾರೆ. ಅವರ ಮಾಧ್ಯಮದಿಂದ ಗುರುತತ್ತ್ವವು ಆ ಕೃತಿ ಅಥವಾ ಪ್ರಯತ್ನ ಮಾಡಲು ನನಗೆ ಊರ್ಜೆ ನೀಡಲಿದೆ’, ಎಂಬ ಭಾವವಿಟ್ಟು ಅವರಲ್ಲಿ ಕೇಳೋಣ. ಎರಡನೆಯದಾಗಿ, ಜವಾಬ್ದಾರ ಸಾಧಕರು ಹೇಳಿದ ಪ್ರಯತ್ನ ಮಾಡಲು ನಮಗೆ ಏನಾದರೂ ಅಡಚಣೆ ಅನಿಸಿದರೆ, ಕಷ್ಟವೆಂದು ಅನಿಸಿದರೆ, ಅದನ್ನು ಸಹ ಅವರೊಂದಿಗೆ ಮನಮುಕ್ತವಾಗಿ ಮಾತನಾಡೋಣ. ಇದರಿಂದ ಅವರು ಅದನ್ನು ಇನ್ನಷ್ಟು ಸರಳವಾಗಿ ಮಾಡಲು ಉಪಾಯಯೋಜನೆಗಳನ್ನು ಸೂಚಿಸಬಹುದು ಅಥವಾ ಅವಶ್ಯಕತೆ ಇದ್ದರೆ ಅದಕ್ಕಾಗಿ ಸಹಾಯ ನೀಡಬಹುದು.

೭ ಏ. ವರದಿಸೇವಕರು ಹೇಳಿದ ಪ್ರಯತ್ನಗಳನ್ನು ಮಾಡಲು ಆಗುವುದಿಲ್ಲವೆಂದು ಕೇಳದಿರುವುದು : ‘ವರದಿ ಸೇವಕರು ಹೇಳಿದ ವ್ಯಷ್ಟಿ ಸಾಧನೆಯ ಪ್ರಯತ್ನಗಳನ್ನು ನಮಗೆ ಮಾಡಲು ಆಗುವುದಿಲ್ಲ,’ ಎಂದುಕೊಂಡು, ವ್ಯಷ್ಟಿ ಸಾಧನೆಯಲ್ಲಿನ ಅಡಚಣೆಗಳನ್ನು ಮಂಡಿಸುವುದಿಲ್ಲ.

೭ ಏ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ‘ಹೇಳಿದ ಪ್ರಯತ್ನಗಳು ನಮಗೆ ಸಾಧ್ಯವಾಗುವುದಿಲ್ಲ,’ ಎಂಬ ವಿಚಾರದಿಂದ ಅಡಚಣೆಗಳನ್ನು ಕೇಳುವುದನ್ನು ತಪ್ಪಿಸುವುದು, ಎಂದರೆ ಗುರುಕೃಪೆಯ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಸಾಗುವುದು. ಮನಸ್ಸಿನಿಂದ ನಕಾರಾತ್ಮಕ ವಿಚಾರಗಳು ಹೊರಬಂದಾಗ, ಶ್ರದ್ಧೆಯ ಪ್ರಭಾವದಿಂದ ಗುರುಕೃಪೆಯ ಪ್ರವಾಹವು ನಮ್ಮ ಅಂತರಂಗದಲ್ಲಿ ಹರಿಯಲಿದ್ದು, ದೊರೆತ ದಿಶೆಯಂತೆ ಪ್ರಯತ್ನಗಳನ್ನು ಮಾಡಲು ನಮಗೆ ಶಕ್ತಿಯು ದೊರೆಯುತ್ತದೆ, ಹಾಗೆಯೇ ನಮ್ಮ ಪ್ರಯತ್ನಗಳು ಮತ್ತೆ ಹೊಸದಾಗಿ ಆರಂಭವಾಗುತ್ತದೆ. ಆದ್ದರಿಂದ, ನಾವು ವರದಿ ಸೇವಕರ ಮೂಲಕ ಕಾರ್ಯನಿರ್ವಹಿಸುತ್ತಿರುವ ಗುರುತತ್ತ್ವದ ಮೇಲೆ ಪೂರ್ಣ ಶ್ರದ್ಧೆ ಇಡಬೇಕು.

೭ ಋ. ನಮ್ಮ ಮನಸ್ಸಿಗೆ ಅಪೇಕ್ಷಿತ ಉತ್ತರ ಸಿಗುವುದಿಲ್ಲ ಎಂದು ಕೇಳದಿರುವುದು : ‘ಕೆಲವೊಮ್ಮೆ ಒಂದು ನಿರ್ದಿಷ್ಟ ಉತ್ತರ ಸಿಗಬೇಕು’ ಎಂದು ಮನಸ್ಸು ಅಪೇಕ್ಷಿಸುತ್ತದೆ. ‘ಹಾಗೆ ಸಿಗದಿದ್ದರೆ ಹೇಗೆ ? ಎಂಬ ವಿಚಾರವೂ ಮನಸ್ಸಿನಲ್ಲಿ ಬರುತ್ತದೆ. ಸಂಕ್ಷಿಪ್ತವಾಗಿ, ‘ನಮಗೆ ಬೇಕಾದ ಉತ್ತರ ಸಿಗುವುದಿಲ್ಲ’, ಎಂಬ ವಿಚಾರದಿಂದ ಕೇಳುವುದಿಲ್ಲ.

೭ ಋ ಅ. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ‘ನನಗೆ ಬೇಕಾದ ಉತ್ತರ ಸಿಗುವುದಕ್ಕಿಂತ, ನನಗೆ ಅವಶ್ಯಕವಾದ ಉತ್ತರ ಸಿಗಲಿ’ ಎಂಬ ವಿಚಾರ ಸಾಧನೆಯ ದೃಷ್ಟಿಯಿಂದ ಯೋಗ್ಯವಿದೆ. ಆದ್ದರಿಂದ, ‘ಜವಾಬ್ದಾರ ಸಾಧಕರು ನಮಗೆ ಯಾವ ಉತ್ತರವನ್ನು ನೀಡಿದರೂ, ಅದರಿಂದ ನಮ್ಮ ಸಾಧನೆಯೇ ಆಗುತ್ತದೆ’, ಎಂದು ಶೇಕಡಾ ೧೦೦ ರಷ್ಟು ಶ್ರದ್ಧೆ ಇಡೋಣ.

೭ ಒ. ಪ್ರತಿಷ್ಠೆ ಕಾಪಾಡುವುದು/ ಕಡಿಮೆತನ ಅನಿಸುವುದು : ಬಹಳಷ್ಟು ಸಾಧಕರ ವಿಷÀಯದಲ್ಲಿ ವಿಚಾರಿಸದಿರುವುದಕ್ಕೆ ಪ್ರತಿಷ್ಠೆಯು ಒಂದು ದೊಡ್ಡ ಅಡಚಣೆಯಾಗಿರುತ್ತದೆ. ‘ನನ್ನ ಪ್ರಶ್ನೆ ಅನಗತ್ಯವೇ ?’ ‘ಎಲ್ಲರಿಗೂ ಇದು ಗೊತ್ತಿರಬಹುದು, ಆದರೆ ನನಗೆ ಮಾತ್ರ ಗೊತ್ತಿಲ್ಲ’, ಎಂದು ತನ್ನ ಬಗ್ಗೆ ಕೀಳರಿಮೆ ಇರುತ್ತದೆ. ಕೆಲವೊಮ್ಮೆ ಹೇಳಿದ ಕೆಲವು ವಿಷಯಗಳು ನಮ್ಮ ಅರ್ಥವಾಗಿದ್ದರೆ, ‘ಮತ್ತೊಮ್ಮೆ ಹೇಗೆ ಕೇಳುವುದು ?’, ‘ನನಗೆ ಇಷ್ಟೂ ಅರ್ಥವಾಗಲಿಲ್ಲವೇ ?’, ಎಂದು ಇತರರಿಗೆ ಅನಿಸಬಹುದು’, ಎಂಬ ಮತ್ತು ಇಂತಹ ತಮ್ಮ ಬಗೆಗಿನ ಪ್ರತಿಷ್ಠೆ ವಿಚಾರಗಳಿಂದ ವಿಚಾರಿಸುವುದಿಲ್ಲ.

೭ ಒ. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ಇಲ್ಲಿ ಪ್ರತಿಷ್ಠೆ ಅಥವಾ ತಮ್ಮ ಬಗ್ಗೆ ಕೀಳರಿಮೆ ಅನಿಸುವುದಕ್ಕಿಂತ, ನಾವು ಪರಿಪೂರ್ಣರಲ್ಲ ಎಂಬುದನ್ನು ಗಮನಿಸೋಣ. ನಾವು ಸಹ ಕಲಿಯುತ್ತಿದ್ದೇವೆ ಎಂಬುದನ್ನು ಅಂತರ್ಮನಸ್ಸಿನಿಂದ ಸ್ವೀಕರಿಸಿದರೆ, ವಿಚಾರಿಸಲು ಕೀಳರಿಮೆ ಅನಿಸುವುದಿಲ್ಲ. ಕೆಲವೊಮ್ಮೆ ‘ನಮ್ಮ ಪ್ರಶ್ನೆ ಅನಗತ್ಯವಿದೆಯೇ ?’ ಎಂದು ಅನಿಸಿದರೂ ನಾವೇ ಮನಸ್ಸಿನಲ್ಲಿ ಇಂತಹ ತೀರ್ಮಾನಕ್ಕೆ ಬಾರದೆ, ಆ ಕುರಿತು ಜವಾಬ್ದಾರ ಸಾಧಕರಲ್ಲಿ ವಿಚಾರಿಸೋಣ. ಇದರಿಂದ ನಮ್ಮ ಪ್ರಶ್ನೆ ನಿಜವಾಗಿಯೂ ಅನಗತ್ಯವಾಗಿದ್ದರೆ, ಅದರಲ್ಲಿ ಸುಧಾರಣೆ ಮಾಡಬಹುದು.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೨೪.೭.೨೦೨೫)

‘ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸದ್ಯ ಕಾಲಾನುಸಾರ ಸಾಕ್ಷಾತ್‌ ಭಗವಂತನ ಇಚ್ಛೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಆಠವಲೆಯವರ ಕೃಪೆಯಿಂದ ವಿಶೇಷ ಭಕ್ತಿಸತ್ಸಂಗ ಶೃಂಖಲೆಯ ಮೂಲಕ ಸಾಧಕರಿಗೆ ಮಾರ್ಗದರ್ಶನ ಸಿಗುತ್ತಿದೆ. ಈ ಮಾರ್ಗದರ್ಶನ ಸಾಧಕರಿಗಾಗಿ ಅತ್ಯಂತ ಅಮೂಲ್ಯ ಮತ್ತು ಮಹತ್ವಪೂರ್ಣವಾಗಿದೆ. ‘ಭಕ್ತಿಸತ್ಸಂಗದ ಈ ವಿಷಯದಿಂದಾಗಿ ಎಲ್ಲೆಡೆಯ ಸಾಧಕರ ಶುದ್ಧಿಯಾಗಬೇಕು, ಹಾಗೆಯೇ ಅವರ ಅಂತಃಕರಣದಲ್ಲಿನ ಸ್ವಭಾವದೋಷಗಳ ಮಲೀನತೆ ನಾಶವಾಗಿ ಅವರು ಶುದ್ಧ ಮತ್ತು ಪವಿತ್ರರಾಗಬೇಕು’, ಎಂಬುದಕ್ಕಾಗಿ ಇದು ಭಕ್ತಿಯಜ್ಞವೇ ಆಗಿದೆ. ಸಾಧಕರು ಈ ಲೇಖನವನ್ನು ತಮ್ಮ ಬಳಿ ಸಂಗ್ರಹದಲ್ಲಿಟ್ಟುಕೊಳ್ಳಬೇಕು, ಹಾಗೆಯೇ ಈ ಅಂಶಗಳಿಗನುಸಾರ ತಳಮಳದಿಂದ ಪ್ರಯತ್ನಿಸಿ ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅಞ್ರಿಂದ ಹೆಚ್ಚೆಚ್ಚು ಲಾಭ ಪಡೆದುಕೊಳ್ಳಬೇಕು !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ