
ಅಕ್ಟೋಬರ್ ೩೧ ರಂದು ಸರ್ದಾರ್ ಪಟೇಲ್ ಅವರ ಜಯಂತಿಯ ದಿನ ಗುಜರಾತಿನ ಕೆವಾಡಿಯಾದಲ್ಲಿ ‘ಏಕತಾ ದಿವಸ್’ ಆಚರಣೆಯ ಕಾರ್ಯಕ್ರಮದಲ್ಲಿ ಗಡಿ ಭದ್ರತಾ ಪಡೆಯ (ಬಿ.ಎಸ್.ಎಫ್. – ‘ಬಾರ್ಡರ್ ಸೆಕ್ಯುರಿಟಿ ಫೋರ್ಸ್’) ಸೈನಿಕರು ಅತ್ಯಂತ ವೈಶಿಷ್ಟ್ಯಪೂರ್ಣ ಮತ್ತು ಹೆಮ್ಮೆಯಿಂದ ಎದೆಯುಬ್ಬಿಸುವಂತಹ ಪ್ರದರ್ಶನಗಳನ್ನು ನೀಡಿದರು. ಈ ಪ್ರದರ್ಶನಗಳು ಸೈನಿಕರದ್ದಲ್ಲ, ಬದಲಾಗಿ ಸೇನೆಯ ತರಬೇತಿ ಪಡೆದ ಬೇಟೆಗಾರ ನಾಯಿಗಳದ್ದಾಗಿತ್ತು ! ಅತ್ಯಂತ ಉದಾತ್ತ, ಚುರುಕು ಮತ್ತು ಆಕ್ರಮಣಕಾರಿ, ಆದರೆ ಅಷ್ಟೇ ಶಾಂತ ಸ್ವಭಾವದ ಭಾರತೀಯ ತಳಿಯ ‘ರಾಮಪುರ’ ಮತ್ತು ‘ಮುಧೋಳ’ ಜಾತಿಯ ಬೇಟೆಗಾರ ನಾಯಿಗಳು ಸೈನಿಕ ಕಾರ್ಯಾಚರಣೆಗಳಲ್ಲಿ ಉಪಯುಕ್ತವಾಗುವ, ಬೆರಗುಗೊಳಿಸುವ ಪ್ರದರ್ಶನಗಳನ್ನು ನೀಡಿದವು. ೨೦ ಅಡಿ ಎತ್ತರದ ಏಣಿಯನ್ನು ಏರುವುದು, ಏರಿ ನಿಧಾನವಾಗಿ ನಿಲ್ಲುವುದು ಮತ್ತು ಅಷ್ಟೇ ನಿಧಾನವಾಗಿ ಇಳಿಯುವುದು, ಕಣ್ಣುಗಳನ್ನು ಕಟ್ಟಿದ್ದರೂ ಕಷ್ಟಕರ ಪರಿಸ್ಥಿತಿಯಲ್ಲಿ ನಡೆಯುವುದು (ಇದರಿಂದ ಆ ಶ್ವಾನವು ಕತ್ತಲೆಯಲ್ಲಿ ಮತ್ತು ಕಲ್ಲುಬಂಡೆಗಳಿರುವ ರಸ್ತೆಗಳಲ್ಲೂ ನಡೆಯಲು ಸಾಧ್ಯವಿದೆ ಎಂಬುದು ಸಾಬೀತಾಗುತ್ತದೆ), ದುಂಡಾದ ಮೆಟ್ಟಿಲುಗಳನ್ನು ಏರುವುದು ಮತ್ತು ಇಳಿಯುವುದು (ಈ ಸಂದರ್ಭದಲ್ಲಿ ಅವು ಮೇಲಿಂದ ಹಾರುವುದಿಲ್ಲ, ಮನುಷ್ಯರಂತೆ ಸರಿಯಾಗಿ ಇಳಿದು ಕೆಳಗೆ ಬರುತ್ತವೆ) ಇತ್ಯಾದಿ ಪ್ರದರ್ಶನಗಳನ್ನು ಸರ್ದಾರ್ ಪಟೇಲ್ ಅವರ ಪ್ರತಿಮೆಯ ಸಮ್ಮುಖದಲ್ಲಿ ತೋರಿಸಲಾಯಿತು. ಎತ್ತರ ಏರುವ ಪ್ರಯೋಗಗಳನ್ನು ಮಾಡಲು ವಿದೇಶಿ ತಳಿಯ ನಾಯಿಗಳಿಗೆ ಹಿಂದೆ ೨ ಗಂಟೆಗಳೂ ಬೇಕಾಗುತ್ತಿತ್ತು; ಆದರೆ ಈ ಭಾರತೀಯ ಶ್ವಾನಗಳು ಪ್ರತಿಯೊಂದು ಕೃತಿಯನ್ನೂ ತತ್ಪರತೆಯಿಂದ ಮಾಡುತ್ತಿವೆ. ಇಲ್ಲಿಯವರೆಗೆ ಪೋಲೀಸ್ ಮತ್ತು ಸೇನೆಗಾಗಿ ‘ಜರ್ಮನ್ ಶೆಫರ್ಡ್’, ‘ಲ್ಯಾಬ್ರಡಾರ್’ ಅಥವಾ ‘ಡಾಬರ್ಮನ್’ ನಂತಹ ವಿದೇಶಿ ಶ್ವಾನಗಳನ್ನು ಬಳಸಲಾಗುತ್ತಿತ್ತು. ಈಗ ಸುಮಾರು ೧೫೦ ಸ್ವದೇಶಿ ನಾಯಿಗಳ ತಂಡವನ್ನು ಗಡಿ ಭದ್ರತಾ ದಳದ ಸೈನಿಕರು ಅತ್ಯಂತ ಕಷ್ಟಪಟ್ಟು ತರಬೇತಿ ನೀಡಿ ಸಿದ್ಧಪಡಿಸಿದ್ದಾರೆ. ‘ಕೆ ೯’ ಈ ಸೈನ್ಯದಳದಲ್ಲಿರುವ ಈ ಶ್ವಾನಗಳು ಭಾರತೀಯ ಗಡಿಗಳನ್ನು ರಕ್ಷಿಸುತ್ತಿವೆ; ಅವುಗಳು ಪ್ರತಿ ಸೈನಿಕರಂತೆ ಇವೆ. ಭಾರತೀಯ ಸೇನೆ ಮತ್ತು ಜನತೆಯ ದೃಷ್ಟಿಯಿಂದ, ಅವು ಈಗ ಸೈನಿಕರಷ್ಟೇ ಪ್ರಮುಖವಾಗಿವೆ.

ದೂರದೃಷ್ಟಿಯ ಪ್ರಧಾನಮಂತ್ರಿ ಮತ್ತು ಅವರ ಕನಸು ನನಸು ಮಾಡುವ ಸೈನಿಕರು !
‘ಆತ್ಮನಿರ್ಭರ’ ಭಾರತದ ಅನೇಕ ಆಯಾಮಗಳಲ್ಲಿ, ಇದೂ ಒಂದು ಪ್ರಮುಖ ಆಯಾಮವಾಗಿ ಇಂದು ಕಾರ್ಯರೂಪಕ್ಕೆ ಬಂದು ನಮ್ಮ ಮುಂದೆ ಇದೆ. ಸೈನಿಕರಂತೆಯೇ, ಇದರ ಶ್ರೇಯಸ್ಸು ಭಾರತದ ಅತ್ಯಂತ ಚಾಣಾಕ್ಷ, ದೂರದೃಷ್ಟಿಯ ಮತ್ತು ಸೂಕ್ಷ್ಮ ವಿವರಗಳೊಂದಿಗೆ ಕಾರ್ಯನಿರ್ವಹಿಸಿ ಫಲಿತಾಂಶವನ್ನು ತರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ೫ ವರ್ಷಗಳ ಹಿಂದೆ, ಮೋದಿ ಅವರು ಭಾರತೀಯ ತಳಿಯ ನಾಯಿಗಳನ್ನು ಬಳಸುವಂತೆ ಆಗ್ರಹಿಸಿದ್ದರು. ಅವರ ಮನಸ್ಸಿನ ಈ ಆಶಯಕ್ಕೆ ಗಡಿ ಭದ್ರತಾ ದಳ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ದಳದ (ಸಿ.ಆರ್.ಪಿ.ಎಫ್.) ಸೈನಿಕರು ಅಷ್ಟೇ ಬೆಂಬಲ ನೀಡಿದರು ಮತ್ತು ಶ್ರಮಿಸಿದರು. ಅದರ ಅತ್ಯುತ್ತಮ ಫಲಿತಾಂಶ ಇಂದು ಈ ಭದ್ರತಾ ಶ್ವಾನಗಳ ರೂಪದಲ್ಲಿ ದೊರೆತಿದೆ. ‘ಮನ್ ಕಿ ಬಾತ್’ನಲ್ಲಿ ಪ್ರಧಾನಮಂತ್ರಿಯವರು ಈ ವಿಷಯವನ್ನು ಹೆಮ್ಮೆಯಿಂದ ಹೇಳಿದ್ದರು.

ಭಾರತೀಯ ತಳಿಯ ರಕ್ಷಕ ಶ್ವಾನಗಳನ್ನು ಸಿದ್ಧಪಡಿಸುವುದು ಸುಲಭದ ವಿಷಯವಾಗಿರಲಿಲ್ಲ. ಒಂದು ವೇಳೆ ಮನುಷ್ಯನಿಗೆ ಕಲಿಸುವುದು ಸುಲಭವಿರಬಹುದು; ಆದರೆ ಬೇಟೆಗಾರ ನಾಯಿಗೆ ಕಲಿಸುವುದು ಎಷ್ಟು ಕಷ್ಟಕರವಾಗಿರಬಹುದು ಎಂದು ನಾವು ಊಹಿಸಬಹುದು; ಆದರೆ ಗಡಿ ಭದ್ರತಾ ದಳದ ಸೈನಿಕರು ಈ ಸವಾಲನ್ನು ಎದುರಿಸಿದರು ಮತ್ತು ಈಗ ಈ ಶ್ವಾನಗಳು ಸೈನಿಕರಿಗೆ ಅಷ್ಟೇ ಮೌಲ್ಯಯುತವಾದ ಸಹಕಾರ ನೀಡುತ್ತಿವೆ. ಕಳೆದ ೨ ವರ್ಷಗಳಿಂದ, ಈ ಶ್ವಾನಗಳು ಭಾರತೀಯ ಗಡಿ ಮತ್ತು ನಕ್ಸಲ್ ಪೀಡಿತ ಪ್ರದೇಶಗಳನ್ನು ಸೈನಿಕರ ಹೆಜ್ಜೆಗೆ ಹೆಜ್ಜೆ ಇಟ್ಟು ರಕ್ಷಿಸುತ್ತಿವೆ. ಭಾರತೀಯ ತಳಿಯ ನಾಯಿಗಳು ದೇಶದ ವಾತಾವರಣದಲ್ಲಿ ಉತ್ತಮವಾಗಿ ಬದುಕಲು ಸಾಧ್ಯವಾಗುವುದರಿಂದ, ಗಡಿಯಲ್ಲಿನ ಚಳಿ, ಬೇಸಿಗೆಯಂತಹ ಎಲ್ಲಾ ವಿಷಯಗಳನ್ನು ಅವು ಸಹಿಸಿಕೊಂಡು ಇರಬಲ್ಲವು. ಸೈನಿಕರಂತೆಯೇ ಅವರಿಗೆ ಅತ್ಯಂತ ಕಠಿಣ ತರಬೇತಿಯನ್ನು ನೀಡಲಾಗಿದೆ. ಕಠಿಣ ಸವಾಲುಗಳ ಗೋಡೆಯು ಈ ಭಾರತೀಯ ತಳಿಯ ಶ್ವಾನಗಳ ಮಾರ್ಗಕ್ಕೆ ಅಡ್ಡ ಬರಲಿಲ್ಲ. ಅತ್ಯಂತ ಕಷ್ಟಕರ ಅಪಾಯವನ್ನು ಎದುರಿಸುವ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಬೇಕಾದ ತರಬೇತಿಯಲ್ಲಿ ಗಡಿಗಳನ್ನು ರಕ್ಷಿಸುವುದು, ನುಸುಳುವಿಕೆಯನ್ನು ತಡೆಯುವುದು, ಭಯೋತ್ಪಾದಕರ ಮೇಲೆ ಎಗರುವುದು, ಭಯೋತ್ಪಾದಕರ ವಿರುದ್ಧದ ವಿವಿಧ ಕಾರ್ಯಾಚರಣೆಗಳಿಗೆ ಸಮರ್ಥರನ್ನಾಗಿ ಮಾಡುವುದು, ಇಷ್ಟೇ ಅಲ್ಲದೆ, ಹೆಲಿಕಾಪ್ಟರ್‌ನಿಂದ ಹಗ್ಗದ ಮೂಲಕ ಕೆಳಗಿಳಿಯುವುದು, ನದಿ ದಾಟುವುದು ಇವುಗಳ ತರಬೇತಿಯನ್ನೂ ನೀಡಲಾಗಿದೆ. ಪ್ರಸ್ತುತ, ಮಧ್ಯಪ್ರದೇಶದ ಗ್ವಾಲಿಯರ್‌ನ ಟೇಕನಪುರದಲ್ಲಿರುವ ‘ರಾಷ್ಟ್ರೀಯ ಶ್ವಾನ ತರಬೇತಿ ಕೇಂದ್ರ’ವು ೪ ಸ್ವದೇಶಿ ತಳಿಯ ನಾಯಿಗಳ ಸಂತಾನೋತ್ಪತ್ತಿ ಮತ್ತು ತರಬೇತಿ ಕೇಂದ್ರವಾಗಿದೆ. ಇಲ್ಲಿಯವರೆಗೆ, ವಿದೇಶಿ ತಾಳಿಯ ನಾಯಿಗಳನ್ನು ಬಳಸಲಾಗುತ್ತಿತ್ತು. ಭಾರತೀಯ ತಳಿಗಳು ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳುವುದರಿಂದ, ಸೇನೆಯು ಅದರ ಮೇಲೆ ಸಂಶೋಧನೆಯನ್ನು ಪ್ರಾರಂಭಿಸಿತು. ಮೊದಲು ಈ ನಾಯಿಗಳ ಬಗ್ಗೆ ಅಧ್ಯಯನ ಮಾಡಲಾಯಿತು, ನಂತರ ವೈಜ್ಞಾನಿಕ ಆಧಾರದ ಮೇಲೆ ಮಾತ್ರ ಸಂತಾನೋತ್ಪತ್ತಿ ಮಾಡಿ ಅವುಗಳನ್ನು ಪಳಗಿಸಲಾಯಿತು, ನಂತರ ಮೂರನೇ ತಲೆಮಾರಿಗೆ ಸೈನಿಕ ತರಬೇತಿಯನ್ನು ನೀಡಲು ಪ್ರಾರಂಭಿಸಲಾಯಿತು. ಕಳೆದ ವರ್ಷ ‘ಪೋಲೀಸ್ ಡ್ಯೂಟಿ ಮೀಟ್’ ಈ ಶ್ವಾನ ತರಬೇತಿ ಸ್ಪರ್ಧೆಯಲ್ಲಿ ಭಾಗವಹಿಸಲು ಇಲ್ಲಿ ತರಬೇತಿ ಪಡೆದ ಕರ್ನಾಟಕದ ‘ಮುಧೋಳ’ ಜಾತಿಯ ‘ರಿಯಾ’ವನ್ನು ಕರೆದುಕೊಂಡು ಹೋದಾಗ, ಪ್ರೇಕ್ಷಕರು ಸೇರಿದಂತೆ ಪರೀಕ್ಷಕರೂ ‘ಇದು ಯಾವ ಜಾತಿಯ ನಾಯಿ ತಂದಿದ್ದಾರೆ ?’ ಎಂದು ಕೇಳಿ ಗೇಲಿ ಮಾಡಿದರು; ಆದರೆ ‘ರಿಯಾ’ ಸುಮಾರು ೧೧೬ ಕ್ಕೂ ಹೆಚ್ಚು ವಿದೇಶಿ ನಾಯಿಗಳನ್ನು ಸೋಲಿಸಿ ಚಾಂಪಿಯನ್‌ಶಿಪ್‌ನ ೨ ಚಿನ್ನದ ಪದಕಗಳನ್ನು ಗೆದ್ದಾಗ, ಎಲ್ಲರಿಗೆ ಹುಬ್ಬೇರಿಸುವಂತೆ ಮಾಡಿತು ಮತ್ತು ಭಾರತೀಯ ತಳಿಯ ಶ್ವಾನಗಳು ಶ್ರೇಷ್ಠವೆಂದು ಮತ್ತೊಮ್ಮೆ ಸಿದ್ಧವಾಯಿತು. ಅದಕ್ಕೆ ತರಬೇತಿ ನೀಡಿದ ಸೈನಿಕರ ಕಣ್ಣುಗಳಲ್ಲಿನ ಆನಂದದ ಕಣ್ಣೀರು ಅಂದು ನಿಲ್ಲಲಿಲ್ಲ !
ಭಾರತೀಯ ಶ್ವಾನಗಳ ಇತಿಹಾಸ ಮತ್ತು ಭವಿಷ್ಯ

ಕಾಲಭೈರವ ದೇವತೆಯ ವಾಹನ ಶ್ವಾನವಾಗಿದೆ. ಗುರುದೇವ ದತ್ತರ ಪಾದಗಳ ಬಳಿ ಯಾವಾಗಲೂ ೪ ಶ್ವಾನಗಳಿರುತ್ತವೆ. ಮೊಹೆಂಜೋದಾರೋದಲ್ಲಿ ದೊರೆತ ಪ್ರತಿಕೃತಿಗಳಲ್ಲಿ ಶ್ವಾನಗಳಿದ್ದವು. ರಾಯಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸಮಾಧಿಯ ಬಳಿ ಶ್ವಾನದ ಪ್ರತಿಮೆಯಿದೆ. ಉತ್ತರ ಪ್ರದೇಶದ ರಾಮಪುರದಲ್ಲಿ ಹಿಂದೆ ನವಾಬರು ಬೇಟೆಗಾಗಿ ಈ ನಾಯಿಗಳನ್ನು ಸಾಕುತ್ತಿದ್ದರು. ಅವರು ನಾಯಿಗಳನ್ನು ಅಫ್ಘಾನಿ ಮತ್ತು ಇಂಗ್ಲಿಷ್ ಬೇಟೆಗಾರ ನಾಯಿಗಳ ಮಿಶ್ರಣದಿಂದ ಸೃಷ್ಟಿಸಿದ್ದರು. ಆದ್ದರಿಂದ ‘ರಾಮಪುರ’ ಈ ತಳಿಯು ಹೆಚ್ಚು ಸಮರ್ಥ, ತಿಳುವಳಿಕೆಯುಳ್ಳ ಮತ್ತು ಶಕ್ತಿಶಾಲಿಯಾಗಿದೆ. ಈ ಶ್ವಾನಗಳು ೪೦ ಕಿ.ಮೀ. ವೇಗದಲ್ಲಿ ಓಡಬಲ್ಲವು. ಸ್ವಾತಂತ್ರ್ಯದ ನಂತರ ಈ ತಳಿಯ ಬಗ್ಗೆ ಗಮನ ಹರಿಸದ ಕಾರಣ ಅದು ನಶಿಸಲು ಪ್ರಾರಂಭಿಸಿತ್ತು. ಕರ್ನಾಟಕದ ‘ಮುಧೋಳ’ದ ರಾಜ ಮಾಲೋಜಿರಾಜೆ ಘೋರ್ಪಡೆ ಅವರು ಆದಿವಾಸಿಗಳ ಬಳಿ ಈ ನಾಯಿಗಳನ್ನು ಕಂಡು ಅವುಗಳ ಶಕ್ತಿ ಮತ್ತು ಗ್ರಹಣ ಸಾಮರ್ಥ್ಯವನ್ನು ಗುರುತಿಸಿದರು. ಅವರು ಇಂಗ್ಲೆಂಡ್‌ನ ರಾಜನಿಗೆ ಈ ಶ್ವಾನಗಳನ್ನು ಉಡುಗೊರೆಯಾಗಿ ನೀಡಿದರು. ಮಹಾರಾಷ್ಟ್ರದಲ್ಲಿಯೂ ಈ ತಳಿ ಕಂಡುಬರುತ್ತದೆ. ಈಗ ಭಾರತೀಯ ತಳಿಯ ಈ ಬೇಟೆಗಾರ ನಾಯಿಗಳ ಈ ತರಬೇತಿಯು ಸಾಬೀತುಪಡಿಸುತ್ತಿದೆ ಎಂದರೆ, ಭಾರತೀಯರು ದುರ್ಬಲರು ಎಂಬ ಪೂರ್ವಗ್ರಹವನ್ನು ಕಡಿಮೆ ಮಾಡಬಹುದು ಮತ್ತು ಕಷ್ಟಗಳನ್ನು ಜಯಿಸಬಹುದು. ಉತ್ತರ ಪ್ರದೇಶದಿಂದ ದಖ್ಖನ್ ಪ್ರಸ್ಥಭೂಮಿಯವರೆಗೆ ತಿರುಗಾಡುವ ಈ ಉತ್ಸಾಹಿ ಮತ್ತು ಶಕ್ತಿಶಾಲಿ ತಳಿಯ ನಾಯಿಗಳಿಗೆ ಈಗ ಭಾರತೀಯ ಹೆಸರುಗಳನ್ನು ನೀಡಲಾಗುತ್ತಿದೆ. ಪ್ರತಿಕಾರ ಶಕ್ತಿ, ಅನುಕರಣೆ ಸಾಮರ್ಥ್ಯ ಇವು ಈ ಶ್ವಾನಗಳ ವೈಶಿಷ್ಟ್ಯಗಳಾಗಿವೆ ಮತ್ತು ವಿದೇಶಿ ಶ್ವಾನಗಳಿಗೆ ಹೋಲಿಸಿದರೆ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಅವು ಈಗ ದೇಶಗಳ ಗಡಿಗಳನ್ನು ರಕ್ಷಿಸುತ್ತಿವೆ. ಅಕ್ಟೋಬರ್ ೩೧ ರಂದು ಸೈನಿಕರ ಗುಂಪು ಈ ಸ್ವದೇಶಿ ಶ್ವಾನಗಳೊಂದಿಗೆ ಕವಾಯತು ಮಾಡಿತು ಮತ್ತು ಭಾರತವು ಆತ್ಮನಿರ್ಭರತೆಯ ಕಡೆಗೆ ಮತ್ತೊಂದು ಹೆಜ್ಜೆ ಇಟ್ಟಿದ್ದು ಖಚಿತವಾಯಿತು ! ಸ್ವದೇಶಿ ಸಂಪ್ರದಾಯಗಳಲ್ಲಿ ವಿಶ್ವಾಸವಿಟ್ಟು ಒಂದು ಹೆಜ್ಜೆ ಮುಂದಿಟ್ಟು ಅವುಗಳನ್ನು ಅಭಿವೃದ್ಧಿಪಡಿಸಿದರೆ ಯಾವ ಪವಾಡ ಸಂಭವಿಸಬಹುದು ಎಂಬುದನ್ನು ಮೋದಿ ಮತ್ತು ಸೈನಿಕರು ಸಿದ್ದಪಡಿಸಿದ್ದಾರೆ ! ಮುಂಬರುವ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರವೂ ಇಂತಹ ಆತ್ಮನಿರ್ಭರತೆಯಿಂದ ತುಂಬಿಹೋಗಲಿದೆ ಎಂಬುದರಲ್ಲಿ ಸಂದೇಹವಿಲ್ಲ !
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!
ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !
ಥಾಪರ್ ಅವರ ‘ವೋಕಿಸಂ’ !