ನೌಕರಿ ನೆಪದಲ್ಲಿ ಮೋಸ: ರ್ಫಾನ್ ಅಲಿಯಿಂದ ಹಿಂದೂ ಯುವತಿಗೆ ಹೋಟೆಲ್‌ನಲ್ಲಿ ಇಬಲಾತ್ಕಾರ! Rapist Irfan Ali Arrested

  • ಮಧ್ಯಪ್ರದೇಶದಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ!

  • ಅಶ್ಲೀಲ ವಿಡಿಯೋ ಮೂಲಕ ‘ಬ್ಲಾಕ್‌ಮೇಲ್’

  • ಕಲ್ಮಾ ಪಠಿಸಲು ಬಲವಂತ

ಇರ್ಫಾನ್ ಅಲಿ

ಇಂದೋರ (ಮಧ್ಯಪ್ರದೇಶ) – ಮಧ್ಯಪ್ರದೇಶದ ಇಂದೋರನಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 21 ವರ್ಷದ ಹಿಂದೂ ಯುವತಿಯೊಬ್ಬಳು ಇರ್ಫಾನ್ ಅಲಿ ಉರ್ಫ್ ಹ್ಯಾಪಿ ಅಲಿ ಉರ್ಫ್ ಹ್ಯಾಪಿ ಪಂಜಾಬಿ ವಿರುದ್ಧ ಅತ್ಯಾಚಾರ, ಬ್ಲಾಕ್‌ಮೇಲ್ ಮತ್ತು ಬಲವಂತವಾಗಿ ಗರ್ಭಪಾತಕ್ಕೆ ಒತ್ತಾಯಿಸಿದಂತಹ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ವಿಜಯನಗರ ಪೊಲೀಸರು ಸಂತ್ರಸ್ತೆಯ ದೂರಿನ ಮೇರೆಗೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಸಂತ್ರಸ್ತೆ ಹಿಂದೂ ಯುವತಿ ಮೂಲತಃ ರಾಜಸ್ಥಾನದ ನಿವಾಸಿಯಾಗಿದ್ದಾಳೆ. ಇವಳು ನಿಪಾನಿಯಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ‘ಮೇಕಪ್ ಆರ್ಟಿಸ್ಟ್’ ಆಗಿ ಕೆಲಸ ಮಾಡುತ್ತಿದ್ದಳು. ಮೇ 2023 ರಲ್ಲಿ, ಆರೋಪಿ ಇರ್ಫಾನ್ ಅಲಿ ‘ಹ್ಯಾಪಿ ಪಂಜಾಬಿ’ ಎಂಬ ಹೆಸರಿನಲ್ಲಿ ಆಕೆಗೆ ಪರಿಚಯ ಮಾಡಿಕೊಂಡಿದ್ದನು. ಆರೋಪಿ ಇರ್ಫಾನ್ ನೌಕರಿಯ ಆಮಿಷವೊಡ್ಡಿ ಆಕೆಯನ್ನು ಒಂದು ಹೋಟೆಲ್‌ ಗೆ ಕರೆಸಿಕೊಂಡಿದ್ದನು. ಅಲ್ಲಿ ಆತ ತಂಪು ಪಾನೀಯದಲ್ಲಿ ಮಾದಕ ವಸ್ತುವನ್ನು ಬೆರೆಸಿ ಆಕೆಯನ್ನು ಮೂರ್ಛೆಗೊಳಿಸಿ ಅತ್ಯಾಚಾರ ಎಸಗಿದ್ದಾನೆ. ಆತ ಆಕೆಯ ಅಶ್ಲೀಲ ಫೋಟೋ ಮತ್ತು ವಿಡಿಯೋ ಕೂಡ ಮಾಡಿದ್ದ. ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿ ಆಕೆಯನ್ನು ‘ಬ್ಲಾಕ್‌ಮೇಲ್’ ಮಾಡಲು ಶುರುಮಾಡಿದ. ಆಕೆಯ ಕೋಣೆಗೆ ಹೋಗಿ ಬೆದರಿಕೆ ಹಾಕಿ ಪದೇ ಪದೇ ದೈಹಿಕ ಸಂಬಂಧಕ್ಕೆ ಬೆಳೆಸುತ್ತಿದ್ದನು. ಇದರಿಂದ ಆಕೆ ಗರ್ಭಿಣಿಯಾದಳು. ಆತ ಬಲವಂತವಾಗಿ ಔಷಧಿ ನೀಡಿ ಆಕೆಯ ಗರ್ಭಪಾತ ಮಾಡಿಸಿದನು. ನಂತರ ‘ಹ್ಯಾಪಿ ಪಂಜಾಬಿ’ ನಿಜವಾಗಿ ಇರ್ಫಾನ್ ಅಲಿ ಎಂದು ಆಕೆಗೆ ತಿಳಿಯಿತು. ಅದಾದ ಮೇಲೆ ಇರ್ಫಾನ್ ಆಕೆಯ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಲು ಶುರುಮಾಡಿದ. ಕಲ್ಮಾ ಪಠಿಸಲು ಆಕೆಯನ್ನು ಬಲವಂತ ಮಾಡುತ್ತಿದ್ದನು. ಕೊನೆಗೆ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿದ ನಂತರ, ಕರಣಿ ಸೇನೆಯ ಸಹಾಯದಿಂದ ಆಕೆ ಪೊಲೀಸರಿಗೆ ದೂರು ದಾಖಲಿಸಿದಳು.

ಮಾಧ್ಯಮ ವರದಿಗಳ ಪ್ರಕಾರ, ಇರ್ಫಾನ್ ಅಲಿ ವಿರುದ್ಧ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆತ ಅಶ್ಲೀಲ ವಿಡಿಯೋಗಳನ್ನು ಮಾಡಿ ಹುಡುಗಿಯರನ್ನು ‘ಬ್ಲಾಕ್‌ಮೇಲ್’ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಭಾಜಪ ಆಡಳಿತದ ಮಧ್ಯಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ‘ಲವ್ ಜಿಹಾದ್’ನ ಹೆಚ್ಚುತ್ತಿರುವ ಘಟನೆಗಳನ್ನು ನೋಡಿದರೆ, ಮಧ್ಯಪ್ರದೇಶವು ‘ಲವ್ ಜಿಹಾದಿಗಳ ರಾಜಧಾನಿ’ ಆಗಿದೆಯೇ ಎಂಬ ಸಂದೇಹ ಬರುತ್ತದೆ. ಹಿಂದೂಗಳಿಗೆ ಇದು ಅಪೇಕ್ಷಿತವಲ್ಲ. ಸರಕಾರ ಈಗಲಾದರೂ ಲವ್ ಜಿಹಾದಿಗಳಿಗೆ ಬುದ್ಧಿ ಕಲಿಸುತ್ತದೆಯೇ?