ಬಲೂಚಿಗಳ ಮೇಲಿನ ಪಾಕಿಸ್ತಾನಿ ಸೇನೆಯ ಕ್ರೂರತೆ ಮತ್ತೆ ಬಹಿರಂಗ!

ಬರ್ಲಿನ್ (ಜರ್ಮನಿ) – ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ದೌರ್ಜನ್ಯವು ಮತ್ತೊಮ್ಮೆ ಜಗತ್ತಿನ ಮುಂದೆ ಬಹಿರಂಗಗೊಂಡಿದ್ದು, ಬಲೂಚ್ ಜನರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ‘ಬಲೂಚ್ ರಾಷ್ಟ್ರೀಯ ಆಂದೋಲನವು (ಬಿ.ಎನ್.ಎಂ. – ಬಲೂಚ್ ನ್ಯಾಷನಲ್ ಮೂವ್ಮೆಂಟ್) ‘ಬಲೂಚ್ ಹುತಾತ್ಮ ದಿನಾಚರಣೆ’ಯ ನಿಮಿತ್ತ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಹಲವು ದೇಶಗಳ ರಾಜಕೀಯ ನಾಯಕರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಬಲೂಚ್ ಸಮುದಾಯದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಮಯದಲ್ಲಿ ಭಾಷಣಕಾರರು ಪಾಕಿಸ್ತಾನದ ದೌರ್ಜನ್ಯದ ಬಗ್ಗೆ ತೀವ್ರವಾಗಿ ಟೀಕೆ ಮಾಡಿದರು.

ಬಲೂಚಿಸ್ತಾನದ ಜನರೊಂದಿಗೆ ನಡೆದಿರುವ ದುರ್ವರ್ತನೆ ಮತ್ತು ಅವರ ಆಸ್ತಿಗಳ ಲೂಟಿಯ ಮೇಲೆ ಈ ಸಂದರ್ಭದಲ್ಲಿ ಬೆಳಕು ಚೆಲ್ಲಲಾಯಿತು.

೧. ‘ಬಿ.ಎನ್.ಎಂ.’ ನ ಈ ಕಾರ್ಯಕ್ರಮದಲ್ಲಿ ಸ್ವತಂತ್ರ ಬಲೂಚಿಸ್ತಾನದ ಸಂಕಲ್ಪವನ್ನು ಉಚ್ಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಲೂಚಿಸ್ತಾನದ ಮೇಲೆ ಪಾಕಿಸ್ತಾನಿ ಸೇನೆಯ ನಿಯಂತ್ರಣವನ್ನು ತೀವ್ರವಾಗಿ ಖಂಡಿಸಲಾಯಿತು ಮತ್ತು ಮಾರ್ಚ್ ೨೭, ೧೯೪೮ ರಂದು ಪಾಕಿಸ್ತಾನದ ಸೇನೆ ನಡೆಸಿದ ಆಕ್ರಮಣವನ್ನು ಸ್ಮರಿಸಲಾಯಿತು.

೨. ಈ ಕಾರ್ಯಕ್ರಮದಲ್ಲಿ ಡಾ. ನಸೀಮ್ ಅವರು ಮಾತನಾಡಿ, ಹಲವು ವರ್ಷಗಳ ಪಾಕಿಸ್ತಾನದ ಕ್ರೌರ್ಯದ ನಂತರವೂ ಬಲೂಚ್ ಜನರ ಸಂಘರ್ಷದ ಭಾವನೆ ಇನ್ನೂ ಅಚಲವಾಗಿದೆ. ಈ ಹೋರಾಟವು ಬಂದೂಕುಗಳದ್ದಲ್ಲ, ಬದಲಿಗೆ ನಂಬಿಕೆಯದ್ದು ಮತ್ತು ನಂಬಿಕೆ ಯಾವಾಗಲೂ ಗೆಲ್ಲುತ್ತದೆ ಎಂದು ಹೇಳಿದರು.

೩. ‘ವಿಶ್ವ ಸಿಂಧಿ ಕಾಂಗ್ರೆಸ್’ ನ ಡಾ. ಲಖು ಲುಹಾನಾ ಅವರು ಪಾಕಿಸ್ತಾನ ಸರಕಾರವು ಸಿಂಧಿ ಮತ್ತು ಬಲೂಚ್ ಜನರ ಗುರುತನ್ನು ನಾಶಪಡಿಸಲು ಮತ್ತು ಅವರ ಸಂಪನ್ಮೂಲಗಳನ್ನು ಲೂಟಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಅವರು ಈ ಶೋಷಣೆಯ ವಿರುದ್ಧ ಸಿಂಧಿ-ಬಲೂಚ್ ಐಕ್ಯತೆಗೆ ಕರೆ ನೀಡಿದರು.

೪. ತಮಿಳು ಕಾರ್ಯಕರ್ತ ನಿವೇತನ್ ನಂಥಾಕುಮಾರ್ ಅವರು ತಮಿಳು ಮತ್ತು ಬಲೂಚ್ ವಿಮೋಚನಾ ಹೋರಾಟಗಳ ನಡುವಿನ ಸಾಮ್ಯತೆಗಳನ್ನು ಒತ್ತಿಹೇಳುತ್ತಾ, ಗೌರವ ಮತ್ತು ನ್ಯಾಯಕ್ಕಾಗಿ ನೀಡಿದ ಜಂಟಿ ಬಲಿದಾನವನ್ನು ಉಲ್ಲೇಖಿಸಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನದ ಒಟ್ಟಾರೆ ಕ್ರೂರ ಮತ್ತು ಅಮಾನವೀಯ ಇತಿಹಾಸವನ್ನು ಗಮನಿಸಿದರೆ, ಭಾರತ ಸೇರಿದಂತೆ ಎಲ್ಲಾ ಸಂಬಂಧಿತ ದೇಶಗಳು ಪಾಕಿಸ್ತಾನದ ಮಾನ್ಯತೆಯನ್ನು ರದ್ದುಗೊಳಿಸುವಂತೆ ವಿಶ್ವಸಂಸ್ಥೆಗೆ ಒತ್ತಾಯಿಸಬೇಕು!