
ನವ ದೆಹಲಿ – ಕಾನೂನು ಭಾಷೆಯು ಸಾಮಾನ್ಯ ಜನರಿಗೆ ಅರ್ಥವಾಗುವಷ್ಟು ಸರಳವಾಗಿರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿ ‘ಕಾನೂನು ನೆರವು ವಿತರಣಾ ವ್ಯವಸ್ಥೆ’ಯನ್ನು ಸಬಲಗೊಳಿಸುವ ಉದ್ದೇಶದಿಂದ ಆಯೋಜಿಸಲಾದ ರಾಷ್ಟ್ರೀಯ ಪರಿಷತ್ತಿನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ಇತರ ಅನೇಕ ನ್ಯಾಯಾಧೀಶರು ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ಮೋದಿ ಅವರು ತಮ್ಮ ಮಾತು ಮುಂದುವರಿಸುತ್ತಾ, ”ಪ್ರತಿಯೊಬ್ಬ ನಾಗರಿಕನಿಗೂ, ಅವನು ಬಡವನೇ ಆಗಿರಲಿ ಅಥವಾ ಶ್ರೀಮಂತನೇ ಆಗಿರಲಿ, ನ್ಯಾಯವು ಸುಲಭವಾಗಿ ಲಭ್ಯವಾಗಬೇಕು. ಜನರು ಅವರ ಸ್ವಂತ ಭಾಷೆಯಲ್ಲಿ ಕಾನೂನನ್ನು ಅರ್ಥಮಾಡಿಕೊಂಡಾಗ, ಅವರು ಅದನ್ನು ಉತ್ತಮವಾಗಿ ಪಾಲಿಸುತ್ತಾರೆ ಮತ್ತು ವಿವಾದಗಳು ಕಡಿಮೆಯಾಗುತ್ತವೆ. ಎಲ್ಲರಿಗೂ ಸಮಯಕ್ಕೆ ಸರಿಯಾಗಿ ನ್ಯಾಯ ಸಿಗುವುದು ಸಾಮಾಜಿಕ ನ್ಯಾಯದ ಅಡಿಪಾಯವಾಗಿದೆ. ತಂತ್ರಜ್ಞಾನದಿಂದಾಗಿ ಈಗ ನ್ಯಾಯವ್ಯವಸ್ಥೆಯು ಆಧುನೀಕರಣಗೊಳ್ಳುತ್ತಿದೆ. ‘ಇ-ಕೋರ್ಟ್ಸ್’ (ಆನ್‌ಲೈನ್ ನ್ಯಾಯಾಲಯಗಳು) ಯೋಜನೆಯಿಂದಾಗಿ ನ್ಯಾಯ ವಿತರಣಾ ಪ್ರಕ್ರಿಯೆಯು ಸರಳ ಮತ್ತು ಪಾರದರ್ಶಕವಾಗಿದೆ. ಸರಕಾರ ಬಡವರು ಮತ್ತು ವಂಚಿತರಿಗೆ ನ್ಯಾಯ ಒದಗಿಸಲು ‘ಕಾನೂನು ನೆರವು ಸಂರಕ್ಷಣಾ ವ್ಯವಸ್ಥೆ’ಯನ್ನು ಜಾರಿಗೆ ತಂದಿದೆ. ಈ ಮೂಲಕ ಅವರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ”, ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಮೂಹಿಕ ಮಧ್ಯಸ್ಥಿಕೆ ಕುರಿತಾದ ಹೊಸ ತರಬೇತಿ ವ್ಯವಸ್ಥೆಯನ್ನು ಪ್ರಾರಂಭಿಸಿದರು. ಅವರು, ಪರಸ್ಪರ ಒಪ್ಪಂದದ ಮೂಲಕ ವಿವಾದಗಳನ್ನು ಬಗೆಹರಿಸುವ ಹಳೆಯ ಸಂಪ್ರದಾಯ ಭಾರತದಲ್ಲಿದೆ. ಹೊಸ ಮಧ್ಯಸ್ಥಿಕೆ ಕಾನೂನಿನ ಮೂಲಕ ಈ ಸಂಪ್ರದಾಯವನ್ನು ಆಧುನೀಕರಿಸಲಾಗಿದೆ. ಇದರಿಂದ ಜನರಿಗೆ ವಿವಾದಗಳನ್ನು ಬಗೆಹರಿಸಲು ಮತ್ತು ಸಾಮಾಜಿಕ ಸೌಹಾರ್ದ ಕಾಪಾಡಲು ಸಹಾಯವಾಗುತ್ತದೆ, ಎಂದು ಹೇಳಿದರು.
ಯಶಸ್ಸಿನ ಅಳತೆಗೋಲು ಎಂದರೆ ಸಾಮಾನ್ಯ ಮನುಷ್ಯನ ವಿಶ್ವಾಸ! – ಮುಖ್ಯ ನ್ಯಾಯಮೂರ್ತಿ

ನ್ಯಾಯವು ಕೆಲವೇ ಜನರ ವಿಶೇಷಾಧಿಕಾರವಲ್ಲ, ಬದಲಿಗೆ ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಹೇಳಿದರು. ‘ಯಶಸ್ಸಿನ ನಿಜವಾದ ಅಳತೆಗೋಲು ಅಂಕಿ-ಅಂಶಗಳಲ್ಲ, ಬದಲಾಗಿ ಸಾಮಾನ್ಯ ಮನುಷ್ಯನ ವಿಶ್ವಾಸ,’ ಎಂದೂ ಅವರು ಹೇಳಿದರು.
ತಂತ್ರಜ್ಞಾನ ಅಗತ್ಯವಿದೆ! – ನ್ಯಾಯಮೂರ್ತಿ ಸೂರ್ಯಕಾಂತ್

ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮಾತನಾಡಿ, ಕಾನೂನು ನೆರವನ್ನು ಹೆಚ್ಚು ಸುಲಭಗೊಳಿಸಲಾಗುವುದು. ದೂರದ ಪ್ರದೇಶಗಳಲ್ಲಿ ವಾಸಿಸುವ ಜನರಿಗಾಗಿ ಕಾನೂನು ಕೇಂದ್ರಗಳು, ಆನ್ ಲೈನ್ ಒಡಂಬಡಿಕೆ ಮತ್ತು ಡಿಜಿಟಲ್ ದೂರುಗಳಂತಹ ಸೇವೆಗಳನ್ನು ಒದಗಿಸಲು ತಂತ್ರಜ್ಞಾನ ಅಗತ್ಯವಿದೆ. ಸ್ಥಳೀಯ ಭಾಷೆ ಮತ್ತು ಜನರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ, ಎಂದು ಹೇಳಿದರು.
ಕಾರಾಗೃಹಗಳಲ್ಲಿರುವ ಶೇ.70 ರಷ್ಟು ಬಂಧಿಗಳನ್ನು ಇನ್ನೂ ನ್ಯಾಯಾಲಯವು ದೋಷಿಗಳೆಂದು ನಿರ್ಣಯಿಸಿಲ್ಲ! – ನ್ಯಾಯಮೂರ್ತಿ ವಿಕ್ರಮ ನಾಥ

ಹಾಗಿದ್ದಲ್ಲಿ, ಅದರ ಮೇಲೆ ಪರಿಹಾರ ಕ್ರಮಗಳನ್ನು ಏಕೆ ಕೈಗೊಳ್ಳುತ್ತಿಲ್ಲ?
ಭಾಗ್ಯನಗರ (ತೆಲಂಗಾಣ) ಇಲ್ಲಿನ ಎನ್.ಎ.ಎಲ್.ಎಸ್.ಎ.ಆರ್. ಕಾನೂನು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನ್ಯಾಯಮೂರ್ತಿ ವಿಕ್ರಮ ನಾಥ ಅವರು, ಭಾರತೀಯ ಕಾರಾಗೃಹಗಳಲ್ಲಿರುವ ಶೇ.70 ರಷ್ಟು ಬಂಧಿಗಳು ಇನ್ನೂ ನ್ಯಾಯಾಲಯದಿಂದ ದೋಷಿಗಳೆಂದು ನಿರ್ಣಯಿಸಲಿಲ್ಲ. ಈ ಪರಿಸ್ಥಿತಿಯು ಬಹಳ ಗಂಭೀರವಾಗಿದೆ ಮತ್ತು ಇದಕ್ಕಾಗಿ ಕಾನೂನು ನೆರವು ಮತ್ತು ಪ್ರಕ್ರಿಯೆಗಳಲ್ಲಿ ತಕ್ಷಣ ಸುಧಾರಣೆ ಮಾಡುವ ಅವಶ್ಯಕತೆಯಿದೆ. ಕೆಲವು ಬಂಧಿಗಳು ತಮ್ಮ ಅಪರಾಧಗಳಿಗೆ ಗರಿಷ್ಠ ಶಿಕ್ಷೆಗಿಂತ ಹೆಚ್ಚು ಶಿಕ್ಷೆಯನ್ನು ಅನುಭವಿಸಿದ್ದಾರೆ, ಆದರೂ ಅವರ ಮೊಕದ್ದಮೆಗಳು ಇನ್ನೂ ಪೂರ್ಣಗೊಂಡಿಲ್ಲ. ಕೆಲವರು ಜಾಮೀನು ಪಡೆಯಲು ಸಾಧ್ಯವಾಗದ ಕಾರಣ ಕಾರಾಗೃಹದಲ್ಲಿದ್ದಾರೆ. ಅವರ ಮೊಕದ್ದಮೆಗಳ ವಿಚಾರಣೆ ಸಮಯಕ್ಕೆ ಸರಿಯಾಗಿ ನಡೆದಿದ್ದರೆ, ಅನೇಕರನ್ನು ಬಿಡುಗಡೆ ಮಾಡಬಹುದಾಗಿತ್ತು; ಆದರೆ ಅವರು ಇನ್ನೂ ಕಾರಾಗೃಹದಲ್ಲಿದ್ದಾರೆ, ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!