|
(‘ಹಂಗರ್ ಇಂಡೆಕ್ಸ್’ ಈ ಅಂಕಿ ಅಂಶ ಪ್ರಪಂಚದ ದೇಶಗಳಲ್ಲಿ ಹಸಿವಿನ ಪ್ರಮಾಣವನ್ನು ತೋರಿಸುತ್ತದೆ. ಇದರಲ್ಲಿ ದೇಶದ ಶ್ರೇಯಾಂಕ ಎಷ್ಟು ಕಡಿಮೆಯಾಗಿದೆಯೋ, ಅಷ್ಟು ಪ್ರಮಾಣದಲ್ಲಿ ಅಲ್ಲಿನ ಜನರು ಹಸಿವಿನಿಂದ ಬಳಲುತ್ತಿದ್ದಾರೆ, ಮತ್ತು ಅಲ್ಲಿನ ಮಕ್ಕಳ ಮರಣ ಪ್ರಮಾಣವೂ ಹೆಚ್ಚಿರುತ್ತದೆ.)
( ‘ಹ್ಯಾಪಿನೆಸ್ ಇಂಡೆಕ್ಸ್’ ಎಂದರೆ ಜಗತ್ತಿನ ದೇಶಗಳಲ್ಲಿ ಜನರು ತಮ್ಮ ಜೀವನದಲ್ಲಿ ಎಷ್ಟು ಸಂತೋಷ ಮತ್ತು ತೃಪ್ತಿಯನ್ನು ಪಡೆಯುತ್ತಾರೆ ಎಂಬುದರ ಪ್ರಮಾಣವನ್ನು ತೋರಿಸುತ್ತದೆ. ಈ ಸಂಖ್ಯೆ ಎಷ್ಟು ಕಡಿಮೆಯಾಗಿದೆಯೋ, ಅಷ್ಟು ಅಲ್ಲಿನ ಜನರು ಅತೃಪ್ತರು ಮತ್ತು ದುಃಖಿತರಾಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ.)

ಜೈಪುರ (ರಾಜಸ್ಥಾನ) – ‘ರಾಷ್ಟ್ರವಾದಿಗಳ ಮಹಾಸಂಗಮ’ ಎಂದು ಗುರುತಿಸಲಾಗುವ ‘ಜೈಪುರ ಡೈಲಾಗ್ಸ್ ೨೦೨೫’ ವಿಚಾರ ಸಂಕಿರಣದಲ್ಲಿ, ಎರಡನೇ ದಿನ ‘ಶತ್ರು ಅರಿವು’ (ಶತ್ರುಬೋಧ) ವಿಷಯದ ಕುರಿತು ವಿವಿಧ ಕ್ಷೇತ್ರಗಳ ತಜ್ಞರು ಭಾರತದ ಮೇಲಿನ ಆಂತರಿಕ ಮತ್ತು ಬಾಹ್ಯ ಆಕ್ರಮಣಗಳ ಬಗ್ಗೆ ಆಳವಾದ ಚರ್ಚೆ ನಡೆಸಿದರು. ಲೇಖಕ ಮತ್ತು ಚಿಂತಕ ಆನಂದ ರಂಗನಾಥನ್, ಪ್ರಮುಖ ಚಲನಚಿತ್ರ ವಿಮರ್ಶಕ ರಾಜೇಶ ಕುಮಾರ್ ಸಿಂಗ್, ರಾಜಕೀಯ ವಿಶ್ಲೇಷಕ ಶಾಂತನು ಗುಪ್ತಾ, ಸಂಶೋಧಕ ವಿನೋದ ಕುಮಾರ್, ಮಾಜಿ ಮುಖ್ಯ ಕೇಂದ್ರ ಮಾಹಿತಿ ಆಯುಕ್ತ ಉದಯ ಮಾಹುರ್ಕರ್, ಗರ್ವಿತ್ ಭಾರದ್ವಾಜ್ ಮತ್ತು ಹಿರಿಯ ಪತ್ರಕರ್ತ ಅನುಪಮ ಮಿಶ್ರಾ ಅವರು ‘ಆಪರೇಷನ್ ಸಿಂದೂರ’ನಿಂದ ಚೀನಾ-ಪಾಕಿಸ್ತಾನದ ಸಂಬಂಧಗಳಲ್ಲಿನ ಹೊಸ ಬೆಳವಣಿಗೆಗಳವರೆಗೆ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು ಮತ್ತು ಭಾರತವು ಜಾಗರೂಕರಾಗಿರಲು ಕರೆ ನೀಡಿದರು. ಕಾರ್ಯಕ್ರಮವನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರೂ ಕೂಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

‘ಲುಟಿಯನ್ಸ್ (ದೆಹಲಿಯ ಕಮ್ಯುನಿಸ್ಟ್ ಪತ್ರಕರ್ತರು) ವಿರುದ್ಧ ರಾಷ್ಟ್ರವಾದಿಗಳು (ರಾಷ್ಟ್ರೀಯವಾದಿ ಪತ್ರಕರ್ತರು) – ಯಾರು ಗೆಲ್ಲುತ್ತಿದ್ದಾರೆ?’ ಈ ವಿಷಯದ ಸತ್ರದಲ್ಲಿ ಪ್ರಸಿದ್ಧ ಪತ್ರಕರ್ತರಾದ ಸುಶಾಂತ ಸಿನ್ಹಾ, ಆನಂದ ನರಸಿಂಹನ್, ಪ್ರದೀಪ ಭಂಡಾರಿ, ಭಾವು ತೋರಸೇಕರ್ ಮತ್ತು ಹರ್ಷ್ ಕುಮಾರ ಅವರು ತಥಾಕಥಿತ ‘ಲುಟಿಯನ್ಸ್’ ಮಾಧ್ಯಮಗಳು ನಡೆಸುತ್ತಿರುವ ಮೋದಿ ವಿರೋಧಿ ಅಭಿಯಾನದ ಮೇಲೆ ಪ್ರಹಾರ ಮಾಡಿದರು. ಅವರು, ಕಳೆದ ೧೧ ವರ್ಷಗಳಲ್ಲಿ ಭಾರತದಲ್ಲಿ ದೊಡ್ಡ ಬದಲಾವಣೆ ಆಗಿದೆ; ಭಾರತವನ್ನು ‘ಹಂಗರ್ ಇಂಡೆಕ್ಸ್’ ಮತ್ತು ‘ಹ್ಯಾಪಿನೆಸ್ ಇಂಡೆಕ್ಸ್’ನಲ್ಲಿ ಪಾಕಿಸ್ತಾನದಂತಹ ದೇಶಗಳಿಗಿಂತ ಕೆಳಮಟ್ಟದಲ್ಲಿ ತೋರಿಸುವುದು ಶತ್ರುರಾಷ್ಟ್ರಗಳ ಕುತಂತ್ರ ಎಂದು ಅವರು ಹೇಳಿದರು.

‘ಲಾ-ಫೇರ್ ಶತ್ರು ಅರಿವು (ಶತ್ರುಬೋಧ)’ ಈ ಅಧಿವೇಶನದಲ್ಲಿ ಅಯೋಧ್ಯೆ ಪ್ರಕರಣದ ಸುಪ್ರಸಿದ್ಧ ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸರ್ವೋಚ್ಚ ನ್ಯಾಯಾಲಯದ ಸುಪ್ರಸಿದ್ಧ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ, ವಿಜಯ ಸರ್ದಾನಾ, ಸಾಮಾಜಿಕ ಕಾರ್ಯಕರ್ತೆ ನಾಜಿಯಾ ಇಲಾಹಿ ಖಾನ್ ಮತ್ತು ಪತ್ರಕರ್ತ ಅಜಿತ ಭಾರತಿ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿರೋಧಾಭಾಸಗಳನ್ನು ಬಹಿರಂಗಪಡಿಸಿದರು. ಈ ಚರ್ಚೆಯ ಸೂತ್ರಸಂಚಾಲನೆಯನ್ನು ‘ಜೈಪುರ ಡೈಲಾಗ್ಸ್’ನ ಅಧ್ಯಕ್ಷ ಸಂಜಯ ದೀಕ್ಷಿತ್ ಅವರು ನಿರ್ವಹಿಸಿದರು. ಲಾ-ಫೇರ್ ಎಂದರೆ ಕಾನೂನನ್ನು ತನ್ನದೇ ಪ್ರಾಬಲ್ಯ ಸ್ಥಾಪಿಸಲು ಅಥವಾ ಒಂದು ನಿರೂಪಣೆಯನ್ನು ಸೃಷ್ಟಿಸಲು ಬಳಸಿಕೊಳ್ಳುವುದು.

ಚರ್ಚಾ ಸತ್ರ: ‘ಐ ಲವ್ ಮೊಹಮ್ಮದ್’ ವಿರುದ್ಧ ಬುಲ್ಡೋಜರ್ ನ್ಯಾಯ!
ಈ ಚರ್ಚಾ ಸತ್ರದಲ್ಲಿ ನಾಜಿಯಾ, ಸಾಹಿಲ್ ಮತ್ತು ನೀರಜ್ ಅತ್ರಿ ಅವರು, ಜಾತ್ಯತೀತತೆಯ ಅರ್ಥ ಹಿಂದೂ ದೇವತೆಗಳನ್ನು ಅವಮಾನಿಸುವುದು ಅಲ್ಲ ಎಂದು ಹೇಳಿದರು. ‘ಐ ಲವ್ ಮೊಹಮ್ಮದ್’ ಪ್ರಕರಣದಲ್ಲಿ ಉತ್ತರ ಪ್ರದೇಶ ಸರಕಾರ ತೆಗೆದುಕೊಂಡ ನಿಲುವು ಸರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯದ ಅನೇಕ ಅಕ್ರಮ ಚಟುವಟಿಕೆಗಳಲ್ಲಿ ಮುಸ್ಲಿಂ ಘಟಕಗಳು ಭಾಗಿಯಾಗಿರುವುದರಿಂದ ‘ಬುಲ್ಡೋಜರ್ ಕ್ರಮ’ ನ್ಯಾಯಯುತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮಮತಾ ಬ್ಯಾನರ್ಜಿ ಮತ್ತು ಓವೈಸಿ ವಿರುದ್ಧವೂ ಟೀಕೆ ಮಾಡಿದ ಅವರು, ‘ನುಸುಳುಕೋರರ ಮತಗಳ ಮೇಲೆ ನಿಂತಿರುವ ಸರಕಾರಗಳು ಭಾರತಕ್ಕೆ ಅಪಾಯಕಾರಿ’ ಎಂದು ಹೇಳಿದರು.

ಇಂದಿಗೂ ಪತ್ರಿಕೆಗಳ ಶಕ್ತಿ ಅಬಾಧಿತ!
ಪ್ರಖರ ಹಿಂದೂತ್ವನಿಷ್ಠ ಚಿಂತಕರಾದ ಅಭಿಷೇಕ ತಿವಾರಿ, ಶೆಫಾಲಿ ವೈದ್ಯ, ಆನಂದ ರಂಗನಾಥನ್ ಮತ್ತು ಪ್ರಖರ್ ಶ್ರೀವಾಸ್ತವ ಅವರು, ಇಂದಿಗೂ ‘ಪ್ರಿಂಟ್ ಮೀಡಿಯಾ’ (ಮುದ್ರಣ ಮಾಧ್ಯಮ) ಅತಿ ಹೆಚ್ಚು ವಿಶ್ವಾಸಾರ್ಹ ಮಾಧ್ಯಮವಾಗಿದೆ. ‘ವಕ್ಫ್’ನಂತಹ ಸಂಸ್ಥೆಗಳನ್ನು ಮಿತಿಗೊಳಿಸದೆ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಸಹ ಅವರು ಈ ಸಮಯದಲ್ಲಿ ಮಂಡಿಸಿದರು.
ಧರ್ಮಾಧಾರಿತ ಮೀಸಲಾತಿ ಸಂವಿಧಾನ ಬಾಹಿರ!
‘ಶೇ. ೫೦ ಕ್ಕಿಂತ ಹೆಚ್ಚು ಮೀಸಲಾತಿ ನೀಡುವುದು ಉತ್ತಮವೇ, ಕೆಟ್ಟದ್ದೇ ಅಥವಾ ವಿಕಾರವೇ?’ ಎಂಬ ವಿಷಯದ ಸತ್ರದಲ್ಲಿ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಅವರು, ‘ಬೃಹತ್ ಫೌಂಡೇಶನ್’ನ ಅಧ್ಯಕ್ಷ ಪಂಕಜ್ ಸಕ್ಸೇನಾ ಮತ್ತು ಪ್ರಸಿದ್ಧ ಹಿಂದೂತ್ವನಿಷ್ಠ ಪತ್ರಕರ್ತ ಅಜಿತ ಭಾರತಿ ಅವರು ತಮ್ಮ ವಿಚಾರಗಳನ್ನು ಮಂಡಿಸಿದರು. ‘ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಸ್ಥಾನವಿಲ್ಲ; ಆದರೆ ಬಂಗಾಳ ಮತ್ತು ಕರ್ನಾಟಕದಲ್ಲಿ ಮುಸಲ್ಮಾನರಿಗೆ ಒಬಿಸಿ ಮೀಸಲಾತಿ ನೀಡಿ ಮತಪೆಟ್ಟಿಗೆ ರಾಜಕೀಯ ನಡೆಸಲಾಗುತ್ತದೆ. ಕೆಲವು ತಥಾಕಥೀತ ‘ದಲಿತ ನಾಯಕರು’ ಹಿಂದೂ ದೇವತೆಗಳನ್ನು ಅವಮಾನಿಸಿದರೂ, ಹಿಂದೂ ಧರ್ಮವನ್ನು ಬಿಡುವುದಿಲ್ಲ’ ಎಂಬುದು ಈ ಚರ್ಚೆಯ ಮುಖ್ಯ ಅಂಶವಾಗಿತ್ತು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)