೩ ದಿನಗಳ ‘ಜೈಪುರ ಡೈಲಾಗ್ ೨೦೨೫’ಕ್ಕೆ ಪ್ರಾರಂಭ

ಜೈಪುರ (ರಾಜಸ್ಥಾನ) – ನಮ್ಮ ಶತ್ರುಗಳು ಹೊರಗಿಲ್ಲ, ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಇತಿಹಾಸಕಾರರು ಸತ್ಯವನ್ನು ಮುಚ್ಚಿಡದೆ ಇತಿಹಾಸವನ್ನು ಬರೆದರು; ಆದರೆ ಸ್ವಾತಂತ್ರ್ಯದ ನಂತರ ಮಾರ್ಕ್ಸ್ವಾದಿ ಪ್ರಭಾವದಡಿಯಲ್ಲಿ ಇತಿಹಾಸವನ್ನು ವಿರೂಪಗೊಳಿಸಲಾಯಿತು. ನಿಜವಾದ ಸಂಪ್ರದಾಯ ಮತ್ತು ಸಾಂಸ್ಕೃತಿಕ ದೃಷ್ಟಿಯನ್ನು ತೆಗೆದುಹಾಕಿ ಹೊಸ ವಿಕೃತಿಯನ್ನು ರಚಿಸಲಾಯಿತು. ದೆಹಲಿ, ಜೆಎನ್‌ಯು ಮತ್ತು ಅಲಿಗಢದಂತಹ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಿಂದ ಮೂಲ ಭಾರತೀಯ ಇತಿಹಾಸವೇ ಕಣ್ಮರೆಯಾಯಿತು. ಆದ್ದರಿಂದ, ಇಂದು ನಮ್ಮ ಶತ್ರುಗಳು ನಮ್ಮ ವಿಚಾರ ಜಗತ್ತಿನಲ್ಲಿಯೇ ಅಡಗಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಪ್ರಸಿದ್ಧ ಇತಿಹಾಸ ಸಂಶೋಧಕರು ಮತ್ತು ರಾಜ್ಯಸಭಾ ಸದಸ್ಯರು (ರಾಷ್ಟ್ರಪತಿ ನಾಮನಿರ್ದೇಶಿತ) ಮೀನಾಕ್ಷಿ ಜೈನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನವೆಂಬರ್ ೭ ರಿಂದ ೯ ರವರೆಗೆ ಆಯೋಜಿಸಲಾದ ಪ್ರಸಿದ್ಧ ‘ಜೈಪುರ ಡೈಲಾಗ್ ೨೦೨೫’ ಸಮಾವೇಶದಲ್ಲಿ ‘ಶತ್ರು ಬೋಧ’ (ಶತ್ರುವಿನ ಅರಿವು) ವಿಷಯದ ಸತ್ರದಲ್ಲಿ ಸಂಸದೆ ಜೈನ್ ಮಾತನಾಡುತ್ತಿದ್ದರು.

ಸಂಸದೆ ಮೀನಾಕ್ಷಿ ಜೈನ್ ಅವರು ದೀಪ ಬೆಳಗಿಸುವುದರ ಮೂಲಕ ಈ ಸಮಾವೇಶವನ್ನು ಉದ್ಘಾಟಿಸಿದರು. ಮೊದಲ ದಿನ ಮುಖ್ಯ ಸಭಾಂಗಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ೧೪ ಸತ್ರಗಳನ್ನು ಆಯೋಜಿಸಲಾಗಿತ್ತು. ಜೈಪುರ ಡೈಲಾಗ್‌ನ ಅಧ್ಯಕ್ಷರಾದ ಸಂಜಯ ದೀಕ್ಷಿತ್ ಅವರ ‘ಆಲ್ ರಿಲಿಜಿಯನ್ ಆರ್ ನಾಟ್ ಸೇಮ್’ ಎಂಬ ಇಂಗ್ಲಿಷ್ ಪುಸ್ತಕದ ‘ಸಭಿ ಧರ್ಮ ಸಮಾನ್ ನಹೀಂ’ ಎಂಬ ಹಿಂದಿ ಆವೃತ್ತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
![]() |
![]() |
ಮೊದಲ ಸತ್ರ: ಸಂಸ್ಕೃತಿಯ ಶತ್ರುಗಳ ಗುರುತು
‘ಭಾರತವು ತನ್ನ ಸಂಸ್ಕೃತಿಯ ಶತ್ರುಗಳನ್ನು ಗುರುತಿಸಬೇಕು’ ಎಂಬ ವಿಷಯದ ಬಗ್ಗೆ ಪತ್ರಕರ್ತ ಭಾವು ತೋರ್ಸೇಕರ್, ಅನುಪಮ್ ಮಿಶ್ರ, ಓಂಕಾರ ಚೌಧರಿ, ಅಭಿಷೇಕ್ ತಿವಾರಿ ಮತ್ತು ಬಾಬಾ ರಾಮದಾಸ್ ಚರ್ಚಿಸಿದರು. ಭಾರತದ ಅಭಿವೃದ್ಧಿಗೆ ಅಡ್ಡಿಪಡಿಸುವ ಅನೇಕ ಸುಳ್ಳು ನಿರೂಪಣೆಗಳನ್ನು (ನ್ಯಾರೆಟಿವ್) ರಚಿಸಲಾಗುತ್ತಿದೆ ಮತ್ತು ಅವುಗಳನ್ನು ಬಯಲು ಮಾಡುವುದೇ ನಿಜವಾದ ದೇಶಸೇವೆ ಎಂದು ವಕ್ತಾರರು ಹೇಳಿದರು.
ಎರಡನೇ ಸತ್ರ: ದಕ್ಷಿಣ ಏಷ್ಯಾದ ರಾಜಕೀಯ ಬೆಳವಣಿಗೆಗಳು
ಈ ಸತ್ರದಲ್ಲಿ ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ದೇಶಗಳಲ್ಲಿನ ಹೊಸ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು. ‘ಝೆನ್-ಝೆಡ್’ (೧೯೯೬ ರಿಂದ ೨೦೧೦ ರ ನಡುವೆ ಜನಿಸಿದ ಪೀಳಿಗೆ) ಪೀಳಿಗೆಯ ಅಸಮಾಧಾನ ಮತ್ತು ಅದನ್ನು ಭಾರತದ ಕೆಲವು ರಾಜಕೀಯ ಗುಂಪುಗಳು ಬಳಸಿಕೊಳ್ಳುತ್ತಿರುವುದು ಒಂದು ಎಚ್ಚರಿಕೆಯಾಗಿದೆ ಎಂದು ವಕ್ತಾರರು ಹೇಳಿದರು. ನಾವು ಆಂತರಿಕ ಶತ್ರುಗಳ ಬಗ್ಗೆ ಜಾಗೃತರಾಗಿರಬೇಕು.
ಮೂರನೇ ಸತ್ರ: ಶಿಕ್ಷಣದ ಮೂಲಕ ನಡೆಯುತ್ತಿರುವ ಭಾರತ ವಿರೋಧಿ ನುಸುಳುವಿಕೆ
ಖಾಸಗಿ ಸಂಸ್ಥೆಗಳ ನಿಧಿಯಿಂದ ನಡೆಯುವ ವಿಚಾರಸಂಸ್ಥೆಗಳಿಂದ ಶಿಕ್ಷಣದ ಮೂಲಕ ಹರಡುತ್ತಿರುವ ಭಾರತ ವಿರೋಧಿ ಕಲ್ಪನೆಗಳ ಬಗ್ಗೆ ಸಂಸದೆ ಮೀನಾಕ್ಷಿ ಜೈನ್, ಎಸ್ತರ್ ಧನರಾಜ್, ಪ್ರಾ. ಭಾರತ ಗುಪ್ತ, ಆಭಾಸ್ ಮಾಲದಹಿಯಾರ್, ನೀಲೇಶ್ ಓಕ್ ಮತ್ತು ಕುಂದನ್ ಸಿಂಗ್ ಅಭಿಪ್ರಾಯ ಮಂಡಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದೇಶಿ ಸಿದ್ಧಾಂತಗಳ ಪ್ರಚಾರಗಳನ್ನು ಗುರುತಿಸುವುದು ಮತ್ತು ಅವುಗಳಿಗೆ ಉತ್ತರಿಸುವುದು ರಾಷ್ಟ್ರೀಯ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ನಾಲ್ಕನೇ ಸತ್ರ: ದೇಶದ ಆಂತರಿಕ ಶತ್ರುಗಳ ಹುಡುಕಾಟ
‘ಬ್ರೇಕಿಂಗ್ ಇಂಡಿಯಾ’ ಗುಂಪು, ‘ತುಕಡೆ ತುಕಡೆ’ ಪ್ರವೃತ್ತಿ, ನಕ್ಸಲರು ಮತ್ತು ಇಸ್ಲಾಮಿಕ್ ಜಾಲಗಳ ಕುರಿತು ಸಂಜಯ ದೀಕ್ಷಿತ್, ನಾಜಿಯಾ ಖಾನ್, ಅಭಿಜಿತ ಮಿತ್ರಾ, ಅಭಿಜಿತ ಚಾವ್ಡಾ, ಪಂಕಜ್ ಸಕ್ಸೇನಾ ಮತ್ತು ಅವಿನಾಶ ಧರ್ಮಾಧಿಕಾರಿ ಮಾತನಾಡಿದರು. ದೇಶವಿರೋಧಿ ಜಾಲಗಳು ಕೇವಲ ಹೊರಗಿನಿಂದ ಮಾತ್ರವಲ್ಲದೆ, ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಬೇರೂರಿವೆ ಎಂದು ಅವರು ಬಹಿರಂಗವಾಗಿ ಹೇಳಿದರು.
Watch live streaming of #TJD2025
The Jaipur Dialogues 2025 https://t.co/GTjlX5rMRj
— Sanatan Prabhat (@SanatanPrabhat) November 7, 2025
ಭ್ರಷ್ಟಾಚಾರ ಮತ್ತು ಆಡಳಿತದ ಬಗ್ಗೆ ಚರ್ಚೆ
‘ಓಪನ್ ಮೈಕ್’ ಸತ್ರದಲ್ಲಿ ಅವಿನಾಶ್ ಧರ್ಮಾಧಿಕಾರಿ, ಉದಯ ಮಾಹುರ್ಕರ್, ಸ್ಯಾವಿಯೋ ರಾಡ್ರಿಗ್ಸ್, ರಾಹುಲ ಸೂರ್ ಮತ್ತು ಸಂಜಯ ದೀಕ್ಷಿತ್ ಭಾಗವಹಿಸಿದರು. ಅವರು, ಭ್ರಷ್ಟಾಚಾರವು ನಮ್ಮ ಸಮಾಜ ಮತ್ತು ಪ್ರಜಾಪ್ರಭುತ್ವದ ಕ್ಯಾನ್ಸರ್ ಆಗಿದೆ. ಅದಕ್ಕೆ ಪರಿಹಾರ ಶಿಕ್ಷಣ ಮತ್ತು ಚಾರಿತ್ರ್ಯ ನಿರ್ಮಾಣದ ಮೂಲಕ ಮಾತ್ರ ಸಾಧ್ಯ. ಆಡಳಿತ ವ್ಯವಸ್ಥೆಯಲ್ಲಿ ‘ರಾಷ್ಟ್ರ ಮೊದಲು’ ಎಂಬ ಭಾವನೆಯನ್ನು ಬೆಳೆಸಲು ಶಿಕ್ಷಣ ನೀತಿಗಳನ್ನು ರೂಪಿಸುವ ಅಧಿಕಾರಿಗಳ ಸ್ವಭಾವ ದೃಢವಾಗಿರಬೇಕು.
ನಾಗರಿಕ ಸಂಸ್ಕಾರಗಳ ಕೊರತೆ
ಅಭಿಜಿತ ಅಯ್ಯರ್ ಮಿತ್ರಾ, ಸುಶಾಂತ್ ಸರೀನ್ ಮತ್ತು ಗರ್ವಿತ್ ಚರ್ಚೆಯಲ್ಲಿ, ಭಾರತದಲ್ಲಿ ನಾಗರಿಕ ಶಿಸ್ತು (ಸಿವಿಕ್ ಸೆನ್ಸ್) ಇನ್ನೂ ಕಡಿಮೆಯಾಗಿದೆ ಎಂದು ಹೇಳಿದರು. ಅದು ಸಾಮಾನ್ಯ ನಾಗರಿಕರಲ್ಲಿಯೂ ಇಲ್ಲ, ಜನಪ್ರತಿನಿಧಿಗಳಲ್ಲಿಯೂ ಇಲ್ಲ. ಟ್ರಾಫಿಕ್ ಸಿಗ್ನಲ್ ಜಿಗಿಯುವುದು, ರಸ್ತೆಯಲ್ಲಿ ಕಸ ಹಾಕುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮುಂತಾದ ಅಭ್ಯಾಸಗಳಿಂದ ಸಮಾಜ ತೊಂದರೆಗೊಳಗಾಗುತ್ತಿದೆ. ಸಮಾಜದ ನೈತಿಕ ಪತನವಾಗಿದೆ. ತಥಾಕಥಿತ ವಿದ್ಯಾವಂತರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇವರುಗಳ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಾರೆ; ಆದರೆ ಇತರ ಧರ್ಮಗಳ ಬಗ್ಗೆ ಮಾತನಾಡಲು ಧೈರ್ಯ ಮಾಡುವುದಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಕೆಲವರು ಶೌಚಾಲಯಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ ಅಶ್ಲೀಲ ವಿಷಯಗಳನ್ನು ಬರೆಯುತ್ತಾರೆ. ಇದು ಅವರ ದುರ್ಬಲ ಮನಸ್ಥಿತಿಯ ಗುರುತಾಗಿದೆ ಎಂದು ಹೇಳಿದರು.
ನಾವು ಕಾಲಕ್ರಮವನ್ನು ಅರ್ಥಮಾಡಿಕೊಳ್ಳಬೇಕು !
ಮುಂದಿನ ಸತ್ರದಲ್ಲಿ ವೇದವೀರ್ ಆರ್ಯ, ನೀಲೇಶ ಓಕ್ ಮತ್ತು ಸಂಜಯ ದೀಕ್ಷಿತ ವೈದಿಕ ಗಣನೆಯ ಬಗ್ಗೆ ಚರ್ಚಿಸಿದರು. ಕಳೆದ ೨-೩ ಶತಮಾನಗಳಲ್ಲಿ ನಮ್ಮ ಸಂಪ್ರದಾಯವನ್ನು ವಿರೂಪಗೊಳಿಸಲಾಗಿದೆ ಎಂದು ಅವರು ಹೇಳಿದರು. ವೇದ ಮತ್ತು ಮಹಾಭಾರತದಲ್ಲಿನ ಖಗೋಳಜ್ಞಾನವು ಸತ್ಯ ಮತ್ತು ವಿಜ್ಞಾನ ಆಧಾರಿತವಾಗಿದೆ. ಜಗತ್ತಿನ ಯಾವುದೇ ಸಂಸ್ಕೃತಿಯಲ್ಲಿ ನಕ್ಷತ್ರ ಗಣನೆ ಇಲ್ಲ, ಇದು ಭಾರತದ ವಿಶಿಷ್ಟ ಕೊಡುಗೆಯಾಗಿದೆ. ಸಂಸ್ಕೃತ ಶ್ಲೋಕಗಳಿಂದ ಗ್ರಂಥಗಳ ಕಾಲಗಣನೆಗೆ ತರ್ಕಬದ್ಧ ವಿವರಣೆ ಸಿಗುತ್ತದೆ.
ಸನಾತನ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವ
ಈ ಸತ್ರದಲ್ಲಿ ಕಾರ್ತಿಕ್ ಗೌರ್, ವಿನೋದ ಕುಮಾರ್ ಮತ್ತು ಅನುಜ ಭಾರದ್ವಾಜ್ ಚರ್ಚಿಸಿದರು. ಅವರು, ‘ಬಟೋಗೆ ತೋ ಕಟೋಗೆ’ (ವಿಭಾಗಿಸಿದರೆ ಕತ್ತರಿಸಲ್ಪಡುವಿರಿ) ಎಂಬ ಘೋಷಣೆ ಭಾರತದಲ್ಲಿ ಇನ್ನೂ ನೂರಾರು ವರ್ಷ ಕೇಳಿಬರಬಹುದು. ಸಾಮಾಜಿಕ ಮಾಧ್ಯಮಗಳು, ಚಲನಚಿತ್ರ ನಿರ್ಮಾಪಕರು, ಯೂಟ್ಯೂಬರ್ ಮತ್ತು ಪ್ರಭಾವಿ ವ್ಯಕ್ತಿಗಳನ್ನು ಟೀಕಿಸಿದ ಅವರು, ಕೆಲವರು ತಮ್ಮನ್ನು ಹಿಂದೂತ್ವದ ಪ್ರತಿನಿಧಿಗಳು ಎಂದು ಕರೆದುಕೊಳ್ಳುತ್ತಾರೆ; ಆದರೆ ಅವರು ವಾಸ್ತವವಾಗಿ ಹಿಂದೂತ್ವದಿಂದ ದೂರವಿದ್ದಾರೆ ಎಂದು ಹೇಳಿದರು. ಹಿಂದೂತ್ವವು ಕ್ರಿಶ್ಚಿಯನ್ ಮತ್ತು ಇಸ್ಲಾಮಿಕ್ ಮತಗಳಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ತಥಾಕಥಿತ ಪತ್ರಕರ್ತರು ಮತ್ತು ಇತಿಹಾಸಕಾರರು ಕೂಡ ಈ ತಪ್ಪಾದ ಪ್ರವಾಹದಲ್ಲಿ ಭಾಗಿಯಾಗಿದ್ದಾರೆ. ಕೆಲವರು ಜ್ಯೋತಿಷ್ಯದ ಮೂಲಕ ಹಿಂದೂತ್ವಕ್ಕೆ ಅಪಕೀರ್ತಿ ತರುತ್ತಾರೆ, ಜನಪ್ರಿಯತೆಗಾಗಿ ಇತಿಹಾಸ ಮತ್ತು ಅಧ್ಯಾತ್ಮದ ತಪ್ಪಾದ ವ್ಯಾಖ್ಯಾನ ಮಾಡುತ್ತಾರೆ, ಎಂದು ಹೇಳಿದರು.
ವಕ್ತಾರರು, ಆಂತರಿಕ ಭದ್ರತೆಗೆ ಸರ್ವೋಚ್ಚ ಆದ್ಯತೆ ನೀಡುವುದು ಅವಶ್ಯಕ. ಸ್ವಾತಂತ್ರ್ಯದ ಉಪಯೋಗವು ಪ್ರಜಾಪ್ರಭುತ್ವಕ್ಕೆ ಲಾಭ ನೀಡುತ್ತದೆಯೋ ಅಥವಾ ಹಾನಿಯೋ? ಎಂದು ಯೋಚಿಸುವ ಸಮಯ ಬಂದಿದೆ, ಎಂದು ಹೇಳಿದರು.
ಯುವ ಪೀಳಿಗೆಯ ಮೇಲೆ ಸಾಮಾಜಿಕ ಮಾಧ್ಯಮದ ಪರಿಣಾಮ
ಕೊನೆಯ ಸತ್ರದಲ್ಲಿ ಪ್ರಿಯಾಂಕ್ ಕಾನೂನ್‌ಗೋ ಮತ್ತು ಹರ್ಷ ಚರ್ಚಿಸಿದರು. ಅವರು, ಕೆಲವು ವಿದೇಶಿ ಶಕ್ತಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ‘ಲಿವ್-ಇನ್ ರಿಲೇಶನ್’ (ವಿವಾಹವಾಗದೆ ಗಂಡು ಮತ್ತು ಹೆಣ್ಣು ಒಟ್ಟಿಗೆ ವಾಸಿಸುವುದು) ಮತ್ತು ಅಶ್ಲೀಲತೆಗೆ ಒಗ್ಗಿಕೊಳ್ಳುವಂತೆ ಮಾಡಿ ಭಾರತೀಯ ಯುವಕರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿವೆ. ಭಾರತದಲ್ಲಿ ಯುವಕರ ಸರಾಸರಿ ವಯಸ್ಸು ೨೯ ಆಗಿದೆ ಮತ್ತು ದೇಶದಲ್ಲಿ ೯೦ ಕೋಟಿ ಯುವ ಜನಸಂಖ್ಯೆ ಇದೆ. ಆದ್ದರಿಂದ, ಭಾರತೀಯ ವಿಚಾರಧಾರೆ ಆಧಾರಿತ ಸ್ವದೇಶಿ ಸಾಮಾಜಿಕ ಮಾಧ್ಯಮಗಳ ನಿರ್ಮಾಣವು ಕಾಲದ ಅವಶ್ಯಕತೆಯಾಗಿದೆ.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!