ಹಲವೆಡೆ ದಾಳಿ ಮತ್ತು ಬೆಂಕಿ; ‘ಬಿ.ಎನ್.ಪಿ.’ ಅಭ್ಯರ್ಥಿಯ ಮೇಲೆ ಗುಂಡಿನ ದಾಳಿ

ಢಾಕಾ – ಬಾಂಗ್ಲಾದೇಶದಲ್ಲಿ ಫೆಬ್ರವರಿ 2026 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಪ್ರಚಾರ ಆರಂಭವಾಗಿದೆ. ಚುನಾವಣಾ ಪ್ರಚಾರದ ಪ್ರಾರಂಭದಲ್ಲೇ ಹಲವು ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಚಿತ್ತಗಾಂವದಲ್ಲಿ ವಿರೋಧ ಪಕ್ಷವಾದ ‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ’ (‘ಬಿ.ಎನ್.ಪಿ.’) ಅಭ್ಯರ್ಥಿ ಎರ್ಶಾದ್ ಉಲ್ಲಾ ಅವರಿಗೆ ಗುಂಡು ತಗುಲಿ ಅವರು ಗಾಯಗೊಂಡಿದ್ದಾರೆ. ಮತ್ತೊಂದೆಡೆ, ಕುಮಿಲ್ಲಾ ಜಿಲ್ಲೆಯಲ್ಲಿ ಗಲಭೆಕೋರರು ‘ಬಿ.ಎನ್.ಪಿ.’ ಯ ಇನ್ನೊಬ್ಬ ಅಭ್ಯರ್ಥಿಯ ಮನೆಗೆ ಬೆಂಕಿ ಹಚ್ಚಿದ್ದಾರೆ. ಬಾಂಗ್ಲಾದೇಶದ ಮಧ್ಯಂತರ ಸರಕಾರವು ಈ ಘಟನೆಗಳನ್ನು ತೀವ್ರವಾಗಿ ಖಂಡಿಸಿದ್ದು, ‘ಪ್ರಜಾಪ್ರಭುತ್ವ ಪ್ರಕ್ರಿಯೆಯ ವೇಳೆ ಯಾವುದೇ ರೀತಿಯ ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ. ಆರೋಪಿಗಳ ಮೇಲೆ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಚಿತ್ತಗಾಂವ ಪೊಲೀಸರಿಗೆ ಆದೇಶ ನೀಡಲಾಗಿದೆ. ಸರಕಾರವು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಬೆಂಬಲಿಗರಿಗೆ ಶಾಂತಿ ಕಾಪಾಡುವಂತೆ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಗೌರವಯುತವಾಗಿ ಹಾಗೂ ಶಾಂತಿಯುತವಾಗಿ ನಡೆಸುವಂತೆ ಮನವಿ ಮಾಡಿದೆ.
🇧🇩 Gunfire at BNP candidate in Chittagong amid fresh election violence in Bangladesh
🔥 Attacks & arson reported across several areas
⚖️ Interim Govt condemns violence, orders strict police action
💥 BNP blames Jamaat-e-Islami, hints at foreign hand in the unrest… pic.twitter.com/H8ScwSDkCe
— Sanatan Prabhat (@SanatanPrabhat) November 6, 2025
‘ಜಮಾತ್-ಎ-ಇಸ್ಲಾಮಿ’ ಮೇಲೆ ‘ಬಿ.ಎನ್.ಪಿ.’ ಆರೋಪ
ಚುನಾವಣಾ ವಾತಾವರಣವನ್ನು ‘ಜಮಾತ್-ಎ-ಇಸ್ಲಾಮಿ’ ಹಾಳು ಮಾಡುತ್ತಿದೆ ಎಂದು ‘ಬಿ.ಎನ್.ಪಿ.’ ಪಕ್ಷ ಆರೋಪಿಸಿದೆ. ‘ಬಿ.ಎನ್.ಪಿ.’ ಅಭ್ಯರ್ಥಿ ಅನ್ವಾರುಲ್ ಹಕ್ ಅವರು, ‘ಜಮಾತ್-ಎ-ಇಸ್ಲಾಮಿ’ ಮತ್ತು ಕೆಲವು ಸರಕಾರಿ ಸಲಹೆಗಾರರು ದೇಶದ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ ಎಂದಿದ್ದಾರೆ. ಕೆಲವು ವಿದೇಶಿ ಶಕ್ತಿಗಳು ಈ ಹಿಂಸಾಚಾರದಲ್ಲಿ ಭಾಗಿಯಾಗಿರಬಹುದೆಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!