
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಈರುಳ್ಳಿಯ ಪ್ರಸ್ತುತ ದಾಸ್ತಾನು ಬಹುತೇಕ ಮುಗಿದಿದೆ. ಇದೇ ಸಮಯದಲ್ಲಿ ಭಾರತದಿಂದ ದೇಶೀಯ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಲಾಯಿತು. ಇದರ ನೇರ ಮತ್ತು ದೊಡ್ಡ ಪರಿಣಾಮ ಬಾಂಗ್ಲಾದೇಶದ ಮಾರುಕಟ್ಟೆಗಳ ಮೇಲೆ ಆಯಿತು. ಕೇವಲ ಕೆಲವು ದಿನಗಳಲ್ಲಿ ಈರುಳ್ಳಿ ಬೆಲೆಗಳು ದುಪ್ಪಟ್ಟಾಗಿವೆ. ರಾಜಧಾನಿ ಢಾಕಾ ಸಹಿತ ಚಿತ್ತಗಾಂಗ್, ರಾಜ್‌ಶಾಹಿ ಮತ್ತು ಖುಲ್ನಾ ಇಂತಹ ಪ್ರಮುಖ ನಗರಗಳಲ್ಲಿ ಈರುಳ್ಳಿ 110 ರಿಂದ 120 ಟಕಾ (ಸುಮಾರು 80 ರಿಂದ 86 ರೂಪಾಯಿಗಳು) ಪ್ರತಿ ಕೆ.ಜಿ. ದರದಲ್ಲಿ ಮಾರಾಟ ಆಗುತ್ತಿದೆ. ಕೆಲವು ದಿನಗಳ ಹಿಂದೆ ಇದೇ ಈರುಳ್ಳಿಯ ಬೆಲೆ 60 ಟಕಾ ಪ್ರತಿ ಕೆ.ಜಿ. ಇತ್ತು.
‘ಭಾರತದಿಂದ ಪುನಃ ಈರುಳ್ಳಿ ಆಮದು ಪ್ರಾರಂಭವಾಗುವ ವರೆಗೆ ಅಥವಾ ಬಾಂಗ್ಲಾದೇಶದಲ್ಲಿನ ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೆ ಈರುಳ್ಳಿ ಬೆಲೆಗಳು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆಯೆಂದು ಚಿತ್ತಗಾಂಗ್ ಮತ್ತು ರಾಜಶಾಹಿ ಇಲ್ಲಿನ ಆಮದುದಾರರ ಹೇಳಿಕೆಯಾಗಿದೆ.
ವ್ಯಾಪಾರಿಗಳಿಂದ ಕೃತಕ ಕೊರತೆಯ ಪ್ರಯತ್ನ?
ಮತ್ತೊಂದೆಡೆ ‘ಕನ್ಸ್ಯೂಮರ್ ಅಸೋಸಿಯೇಷನ್ ಆಫ್ ಬಾಂಗ್ಲಾದೇಶ’ ಈ ಗ್ರಾಹಕ ಸಂಘಟನೆಯು ಮಾತ್ರ ಈ ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ಅನ್ಯಾಯಕಾರಿಯಾಗಿದೆ ಎಂದು ಹೇಳಿದೆ. ಕೆಲವು ವ್ಯಾಪಾರಿಗಳು ಕೃತಕ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಕೊರತೆ ತೋರಿಸಿ ಬೆಲೆ ಹೆಚ್ಚಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಈ ಸಂಘಟನೆ ಮಾಡಿದೆ.
ಸಂಪಾದಕೀಯ ನಿಲುವುಭಾರತದಿಂದ ಇಂತಹ ಚಿಕ್ಕ-ಪುಟ್ಟ ವಿಷಯಗಳ ಸಹಿತ ಬಾಂಗ್ಲಾದೇಶಕ್ಕೆ ದೊಡ್ಡ ಆಘಾತವನ್ನೂ ನೀಡುವುದು ಅವಶ್ಯಕ ಇದೆ ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara