ಜಮ್ಮು-ಕಾಶ್ಮೀರದಲ್ಲಿರುವ ಮುಸಲ್ಮಾನ ಸಂಘಟನೆಯ ವಿರೋಧ : Vande Mataram

  • ವಂದೇ ಮಾತರಂ’ ಈ ರಾಷ್ಟ್ರೀಯ ಗೀತೆಯ 150 ನೇ ವರ್ಷದ ನಿಮಿತ್ತದಿಂದ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳ ಆಯೋಜನೆ !

  • ಜಮ್ಮು-ಕಾಶ್ಮೀರದಲ್ಲಿರುವ ಮುಸಲ್ಮಾನ ಸಂಘಟನೆಯ ವಿರೋಧ

ನವ ದೆಹಲಿ – ಯಾವ ಗೀತೆ ಕೇಳಿ ಭಾರತೀಯರ ಮನಸ್ಸಿನಲ್ಲಿ ದೇಶಭಕ್ತಿಯ ಉತ್ಸಾಹಭರಿತ ಭಾವನೆ ನಿರ್ಮಾಣವಾಗುತ್ತದೆಯೋ, ಆ ‘ವಂದೇ ಮಾತರಂ’ ಗೀತೆಗೆ 150 ವರ್ಷಗಳು ಪೂರ್ಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿರುವ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸುವಂತೆ ಸರಕಾರ ಆದೇಶಿಸಿದೆ. ಆದರೂ ಈ ನಿರ್ಣಯಕ್ಕೆ ಜಮ್ಮು-ಕಾಶ್ಮೀರದಲ್ಲಿರುವ ಒಂದು ಮುಸಲ್ಮಾನ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

1. ಜಮ್ಮು-ಕಾಶ್ಮೀರದಲ್ಲಿ ‘ಮುತ್ತಾಹಿದಾ ಮಜಲಿಸ್-ಎ-ಉಲೇಮಾ’ (ಎಂ.ಎಂ.ಯು.) ಈ ಸಂಘಟನೆಯು ಆಯೋಜನೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದೆ. ರಾಜ್ಯಾಡಳಿತವು ಒಂದು ಆದೇಶದ ಮೂಲಕ ನವೆಂಬರ್ 7 ರಂದು ರಾಜ್ಯದಲ್ಲಿರುವ ಎಲ್ಲ ಶಾಲೆಗಳಿಗೆ ‘ವಂದೇ ಮಾತರಂ’ನ 150 ನೇ ವರ್ಷದ ನಿಮಿತ್ತದಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲು ಹೇಳಿದೆ; ಆದರೆ ‘ಎಂ.ಎಂ.ಯು.’ನಿಂದ ಈ ಆದೇಶಕ್ಕೆ ತೀವ್ರ ವಿರೋಧ ಇದೆ.

2. ‘ಎಂ.ಎಂ.ಯು.’ನ ನಾಯಕ ಮೀರವಾಯಿಜ್ ಉಮರ್ ಫಾರೂಕ್ ಅವರು, ‘ವಂದೇ ಮಾತರಂ’ನ ಗಾಯನ ಅಥವಾ ಪಠಣ ಇಸ್ಲಾಂನ ಬೋಧನೆಯ ಪ್ರಕಾರ ಅದು ಇಸ್ಲಾಮಿ ಅಲ್ಲ. ಆಡಳಿತದ ಇಂತಹ ಆದೇಶದಿಂದ ಮುಸಲ್ಮಾನ ಸಮಾಜದ ಧಾರ್ಮಿಕ ಭಾವನೆಗಳು ನೋಯುತ್ತಿವೆ.

3. ‘ಎಂ.ಎಂ.ಯು.’ನಿಂದ ಜಮ್ಮು-ಕಾಶ್ಮೀರದ ರಾಜ್ಯಪಾಲ ಮನೋಜ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಿಗೆ ಪತ್ರ ಬರೆದು ಈ ಆದೇಶವನ್ನು ಹಿಂದೆ ತೆಗೆದುಕೊಳ್ಳುವಂತೆ ಬೇಡಿಕೆ ಇಡಲಾಗಿದೆ. ಸಂಘಟನೆಯು, ಒಂದು ವೇಳೆ ಆದೇಶವನ್ನು ಹಿಂದೆ ತೆಗೆದುಕೊಳ್ಳದಿದ್ದರೆ, ರಾಜ್ಯದಲ್ಲಿರುವ ಎಲ್ಲ ಧಾರ್ಮಿಕ ನಾಯಕರು ಒಟ್ಟಿಗೆ ಬಂದು ಮುಂದಿನ ಧೋರಣೆ ನಿರ್ಧರಿಸುತ್ತಾರೆ, ಎಂದು ಎಚ್ಚರಿಕೆ ನೀಡಿದೆ.

4. ‘ಎಂ.ಎಂ.ಯು.’, ಆಡಳಿತವು ಮುಸಲ್ಮಾನ-ಬಹುಸಂಖ್ಯಾತ ಭಾಗಗಳಲ್ಲಿ ಹಿಂದೂ ಪ್ರೇರಿತ ವಿಚಾರಧಾರೆ ಹೇರಲು ಪ್ರಯತ್ನಿಸುತ್ತಿದೆ, ಎಂದು ಆರೋಪಿಸಿದೆ. (‘ವಂದೇ ಮಾತರಂ’ ಇದು ರಾಷ್ಟ್ರಕ್ಕೆ ಸಂಬಂಧಿಸಿದ ಗೀತೆಯಾಗಿದೆ. ಅದಕ್ಕೆ ಧಾರ್ಮಿಕ ಬಣ್ಣ ನೀಡುವ ಮುಸಲ್ಮಾನರ ಮಾನಸಿಕತೆ ಇದರಿಂದ ಕಂಡು ಬರುತ್ತದೆ! – ಸಂಪಾದಕರು)

5. ಕೇಂದ್ರ ಸರಕಾರದಿಂದ ಅಕ್ಟೋಬರ್ 1ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿರುವ ಮಂತ್ರಿಮಂಡಳ ಸಭೆಯಲ್ಲಿ ‘ವಂದೇ ಮಾತರಂ’ನ 150 ನೇ ವರ್ಷದ ನಿಮಿತ್ತದಿಂದ ದೇಶಾದ್ಯಂತ ಉತ್ಸವ ಆಚರಿಸುವ ನಿರ್ಣಯ ತೆಗೆದುಕೊಂಡಿದ್ದರು. ಭಾಜಪ ಈ ಉಪಕ್ರಮಕ್ಕೆ ‘ರಾಷ್ಟ್ರ ಏಕತಾ ಉತ್ಸವ’ ಎಂದು ಹೆಸರಿಸಿದೆ.

ಸಂಪಾದಕೀಯ ನಿಲುವು

  • ಯಾವ ರಾಷ್ಟ್ರಗೀತೆಯಿಂದ ಸ್ವಾತಂತ್ರ್ಯ ಸೈನಿಕರಲ್ಲಿ ಸ್ವಾತಂತ್ರ್ಯ ಹೋರಾಟದ ನವಚೇತನ ಮೂಡಿತೋ, ಯಾವ ಗೀತೆಯಿಂದ ದೇಶದ ಅಖಂಡತ್ವ ಕಾಪಾಡಲು ನಾಗರಿಕರಿಗೆ ಪ್ರೇರಣೆ ನೀಡಿತೋ, ಯಾವ ‘ವಂದೇ ಮಾತರಂ’ನ ಘೋಷಣೆಯ ಬಲದಿಂದ ಸ್ವಾತಂತ್ರ್ಯ ಸೇನಾನಿಗಳು ಬ್ರಿಟಿಷರಿಗೆ ಸದೆಬಡಿದರೋ, ಆ ‘ವಂದೇ ಮಾತರಂ’ ಗೀತೆಯನ್ನು ವಿರೋಧಿಸುವವರನ್ನು ರಾಷ್ಟ್ರಘಾತುಕರು ಎಂದು ನಿರ್ಧರಿಸಿ ಜೈಲಿಗೆ ಕಳುಹಿಸಬೇಕು, ಎಂದು ರಾಷ್ಟ್ರಾಭಿಮಾನಿ ನಾಗರಿಕರಿಗೆ ಅನಿಸಿದರೆ ತಪ್ಪೇನು?
  • ಕೇಂದ್ರ ಸರ್ಕಾರವು ಹಿಂದುಗಳ ತೆರಿಗೆಯಿಂದ ಬರುವ ಹಣದಲ್ಲಿ ಜಮ್ಮು-ಕಾಶ್ಮೀರದ ಮೇಲೆ ಹೆಚ್ಚು ಹಣವನ್ನು ಖರ್ಚು ಮಾಡುತ್ತದೆ ಮತ್ತು ಅದಕ್ಕೆ ಪ್ರತಿಯಾಗಿ ಬಹುಸಂಖ್ಯಾತ ಹಿಂದುಗಳ ದೇಶಕ್ಕೆ ಏನು ದೊರೆಯುತ್ತದೆ? ಈ ರಾಜ್ಯಗಳ ಮೇಲೆ ಅತಿಯಾದ ಹಣವನ್ನು ಖರ್ಚು ಮಾಡುವುದನ್ನು ಹಿಂದುಗಳು ಈಗ ವಿರೋಧಿಸಬೇಕು!
  • ಜಮ್ಮು-ಕಾಶ್ಮೀರದಲ್ಲಿ ಈವರೆಗೆ ಜಿಹಾದಿ ಭಯೋತ್ಪಾದನೆಯು ನಾಶವಾಗದಿರುವುದಕ್ಕೆ ಇದೇ ಮನಸ್ಥಿತಿ ಕಾರಣವಾಗಿದೆ ಎಂಬುದನ್ನು ಗಮನಿಸಿ!