
‘ಸದ್ಯದ ಕಾಲದಲ್ಲಿ ಕೆಲವು ಸಾಧಕರು ಸಾಧನೆಯನ್ನು ಬಿಟ್ಟು ಪುನಃ ವ್ಯವಹಾರಕ್ಕೆ ಹೋಗುತ್ತಿದ್ದಾರೆ. ಇದರ ಮುಖ್ಯ ೨ ಕಾರಣಗಳೆಂದರೆ ೧. ಕಾಲಮಹಾತ್ಮೆ ಮತ್ತು ೨. ಸಾಧನೆ ಯೋಗ್ಯ ರೀತಿಯಲ್ಲಿ ಆಗದಿರುವುದು.
೧. ಕಾಲಮಹಾತ್ಮೆ
ಮನೆಯಲ್ಲಿ ಆರ್ಥಿಕ ಅಡಚಣೆಗಳು ಬರುವುದು ಅಥವಾ ತಂದೆ-ತಾಯಂದಿರು ಅಥವಾ ಮನೆಯ ಇತರರು ಅನಾರೋಗ್ಯ ಪೀಡಿತರಾಗುವುದು, ಇಂತಹ ಸಾಧನೆಗೆ ಬಾಧಕವಾಗುವಂತಹ ತೊಂದರೆಗಳು ಕಾಲಮಹಾತ್ಮೆಯಿಂದಾಗಿ ಬರುತ್ತವೆ; ಆದರೆ ಇಂತಹ ಪರಿಸ್ಥಿತಿಯಲ್ಲಿ ಆ ಸಾಧಕನು ತನ್ನ ಸಾಧನೆಯನ್ನು ಮುಂದುವರೆಸಿಕೊಂಡು ಹೋಗಬಹುದು.
೨. ಸಾಧನೆ ಯೋಗ್ಯ ರೀತಿಯಲ್ಲಿ ಆಗದಿರುವುದು
ಸಾಧನೆ ಮಾಡುವಾಗ ಅಂತರ್ಮುಖರಾಗಿ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಇರುವ ಪ್ರಯತ್ನಗಳು ಕಡಿಮೆಯಾದ ಕಾರಣ ಸಾಧಕರಿಗೆ ಪರಿಸ್ಥಿತಿಗೆ ಅನುಗುಣವಾಗಿ ಸಾಧನೆಯ ಯೋಗ್ಯ ದೃಷ್ಟಿಕೋನ ಗಮನಕ್ಕೆ ಬರುವುದಿಲ್ಲ. ಆದುದರಿಂದ ಅವರಿಗೆ ವಿಕಲ್ಪಗಳು ಉಂಟಾಗಿ ಅವರು ಸಾಧನೆ ಮಾಡುವುದನ್ನು ನಿಲ್ಲಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಧಕರು ಸಾಧನೆಯನ್ನು ಬಿಡಲು ಇದೇ ಕಾರಣವಾಗಿರುತ್ತದೆ. ಇಂತಹ ಸಾಧಕರು ಮುಂದೆ ಮಾಯೆಯಲ್ಲಿ ಸಿಲುಕಿದರೆ, ಅವರಿಗೆ ಪುನಃ ಸಾಧನೆಯನ್ನು ಆರಂಭಿಸುವುದು ಕಠಿಣವಾಗುತ್ತದೆ.
ಆದ್ದರಿಂದ ಸಾಧಕರೇ, ಅಂತರ್ಮುಖರಾಗಿ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯ ಪ್ರಯತ್ನಗಳನ್ನು ಮಾಡಿ ಮತ್ತು ನಿಮಗೆ ಯೋಗ್ಯ ದೃಷ್ಟಿಕೋನ ಗಮನಕ್ಕೆ ಬರದಿದ್ದರೆ ತಕ್ಷಣ ಜವಾಬ್ದಾರ ಸಾಧಕರ ಮಾರ್ಗದರ್ಶನವನ್ನು ಪಡೆಯಿರಿ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ