10 ವರ್ಷಗಳಲ್ಲಿ 100 ಕೋಟಿ ರೂ.ಸಂಪಾದಿಸಿದ ಪೊಲೀಸ್ ಅಧಿಕಾರಿ; ವಜಾ!

ಕಾನ್ಪುರ (ಉತ್ತರಪ್ರದೇಶ) – ನಗರದ ಪೊಲೀಸ್ ಉಪಾಧೀಕ್ಷಕ (ಡಿವೈಎಸ್ಪಿ) ಋಷಿಕಾಂತ್ ಶುಕ್ಲಾ ಅವರನ್ನು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಪ್ರಕರಣದಲ್ಲಿ ವಜಾ ಮಾಡಲಾಗಿದೆ. ಅವರು ಕೇವಲ 10 ವರ್ಷಗಳಲ್ಲಿ 100 ಕೋಟಿ ರೂಪಾಯಿಗಳ ಆಸ್ತಿಯನ್ನು ಸಂಗ್ರಹಿಸಿದ್ದರು. ಈ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದ್ದು, ಶುಕ್ಲಾ ಅವರ ಆಸ್ತಿ 200 ರಿಂದ 300 ಕೋಟಿ ರೂಪಾಯಿಗಳಷ್ಟಿರಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಶುಕ್ಲಾ ಅವರ ತನಿಖೆಗಾಗಿ ವಿಶೇಷ ತನಿಖಾ ದಳವನ್ನು (SIT) ಸ್ಥಾಪಿಸಲಾಗಿದೆ.

ಋಷಿಕಾಂತ್ ಶುಕ್ಲಾ ಅವರು 1998 ರಿಂದ 2009 ರ ಅವಧಿಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ (ಪಿಎಸ್‌ಐ) ಕಾರ್ಯನಿರ್ವಹಿಸಿದ್ದರು. ವಿಶೇಷವಾಗಿ ಅವರು ಕಾನ್ಪುರದಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಅವರು ಭ್ರಷ್ಟಾಚಾರದ ಮೂಲಕ ಆಸ್ತಿ ಗಳಿಸಿದ್ದರು. ಈ ಆಸ್ತಿಯು ಅವರ ಹೆಸರಿನಲ್ಲಿ, ಕುಟುಂಬ ಸದಸ್ಯರ ಹೆಸರಿನಲ್ಲಿ, ಆಪ್ತರು ಮತ್ತು ಪಾಲುದಾರರ ಹೆಸರಿನಲ್ಲಿದೆ. (ಇವರೆಲ್ಲರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಅವರಿಗೆ ಜೀವಾವಧಿ ಶಿಕ್ಷೆಯಾಗಿ ಜೈಲಿನಲ್ಲಿ ಕಲ್ಲು ಒಡೆಯುವ ಶಿಕ್ಷೆ ವಿಧಿಸಬೇಕು! – ಸಂಪಾದಕರು) ಶುಕ್ಲಾ ಅವರಿಗೆ ಅಖಿಲೇಶ್ ದುಬೆ ಎಂಬ ಅಪರಾಧಿಯೊಂದಿಗೆ ಸಂಬಂಧವಿರುವುದು ಸಹ ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ.

ಸಂಪಾದಕೀಯ ನಿಲುವು

ಇಂತಹವರನ್ನು ವಜಾ ಮಾಡಿ ಏನು ಪ್ರಯೋಜನ, ಇಂತವರಿಗೆ ಗಲ್ಲು ಶಿಕ್ಷೆಯಾಗಬೇಕು!