ಪಿಂಪ್ರಿ (ಪುಣೆ ಜಿಲ್ಲೆ)ಇಲ್ಲಿ 2 ಕೋಟಿ ಲಂಚ ಕೇಳಿದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಬಂಧನ!

ಆರೋಪಿಗೆ ಜಾಮೀನು ಕೊಡಿಸುವುದಾಗಿ ಆಮಿಷ ಒಡ್ಡಿದ್ದ!

ಪಿಂಪ್ರಿ (ಪುಣೆ ಜಿಲ್ಲೆ) – ಆರೋಪಿಗೆ ಜಾಮೀನು ಕೊಡಿಸಲು, ಪಿಂಪ್ರಿ-ಚಿಂಚವಡ್ ಪೊಲೀಸ್ ಆಯುಕ್ತಾಲಯದ ಆರ್ಥಿಕ ಅಪರಾಧ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಪ್ರಮೋದ ಚಿಂತಾಮಣಿಯವರು 2 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ ಮೊದಲ ಕಂತಿನ 46 ಲಕ್ಷದ 50 ಸಾವಿರ ಪಡೆಯುವಾಗ, ಭ್ರಷ್ಟಾಚಾರ ನಿಗ್ರಹ ದಳವು ಚಿಂತಾಮಣಿ ಅವರನ್ನು ರೆಡ್ ಹ್ಯಾಂಡಾಗಿ ಬಂಧಿಸಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ೨ ಕೋಟಿ ಲಂಚದ ಮೊತ್ತ ಕೇಳಿ ದೂರುದಾರ ನ್ಯಾಯವಾದಿಗಳು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. (ಲಂಚಕೋರರ ಮೇಲೆ ಸಮಯಕ್ಕೆ ಸರಿಯಾಗಿ ಕಠಿಣ ಕ್ರಮ ಕೈಗೊಳ್ಳದಿದ್ದರ ಗಂಭೀರ ಪರಿಣಾಮವಿದು! ಲಂಚಗುಳಿತನದಿಂದ ತುಂಬಿ ತುಳುಕುತ್ತಿರುವ ಪೊಲೀಸ್ ವ್ಯವಸ್ಥೆ ಯಾವಾಗ ಸುಧಾರಿಸುವುದು? ಲಂಚಕೋರರಿಗೆ ಕಠಿಣ ಶಿಕ್ಷೆ ನೀಡಿದಾಗ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳುತ್ತದೆ! – ಸಂಪಾದಕರು)

1. ದೂರುದಾರ ನ್ಯಾಯವಾದಿಯು ಒಬ್ಬ ಆರೋಪಿಯ ಪರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸುತ್ತಿದ್ದಾರೆ. ಆ ಆರೋಪಿಯ ವಿರುದ್ಧ ಬಾವಧನ್ ಪೊಲೀಸ್ ಠಾಣೆಯಲ್ಲಿ ಆರ್ಥಿಕ ವಂಚನೆ ಮತ್ತು ದಾಖಲೆಗಳ ಅದಲುಬದಲು ಮುಂತಾದ ಅಪರಾಧಗಳು ದಾಖಲಾಗಿವೆ.

2. ಈ ಅಪರಾಧಗಳ ತನಿಖೆಯನ್ನು ಪಿಂಪ್ರಿ-ಚಿಂಚ್‌ವಡ್ ಪೊಲೀಸರ ಆರ್ಥಿಕ ಅಪರಾಧ ಶಾಖೆಯು ಮಾಡುತ್ತಿದ್ದು, ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಪ್ರಮೋದ ಅದರ ತನಿಖೆ ನಡೆಸುತ್ತಿದ್ದರು.

3. ಆರೋಪಿಗೆ ಜಾಮೀನು ಕೊಡಿಸಲು ಮತ್ತು ಅವರ ಅರ್ಜಿಯ ಕುರಿತು ಹೇಳಿಕೆ ಸಲ್ಲಿಸಲು ಅವರು ೨ ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ 1 ಕೋಟಿ ರೂಪಾಯಿ ತನಗೆ ಮತ್ತು 1 ಕೋಟಿ ರೂಪಾಯಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೀಡಬೇಕಾಗುತ್ತದೆ ಎಂದು ಹೇಳಿದ್ದರು.

4. ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಪ್ರಮೋದ ಅವರು ಮೊದಲು 2 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು. ನಂತರ ಆರೋಪಿಯ ಬ್ಯಾಂಕಿನಲ್ಲಿ ಉಳಿದಿರುವ ಮೊತ್ತ ಮತ್ತು ನ್ಯಾಯವಾದಿಗಳ ಶುಲ್ಕವನ್ನು ನೋಡಿ, 2 ಲಕ್ಷ ರೂಪಾಯಿ ಬದಲಿಗೆ 2 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟರು.

5. ಮೊದಲ ಕಂತಾಗಿ ನವೆಂಬರ್ 3 ರಂದು 46 ಲಕ್ಷದ 50 ಸಾವಿರ ರೂಪಾಯಿ ನೀಡಲು ನಿರ್ಧರಿಸಲಾಗಿತ್ತು. ಈ ಮೊತ್ತವನ್ನು ಪಡೆಯುತ್ತಿದ್ದಾಗ ಆರೋಪಿಯನ್ನು ಹಿಡಿಯಲಾಯಿತು. 46 ಲಕ್ಷದ 50 ಸಾವಿರ ರೂಪಾಯಿಗಳಲ್ಲಿ ಒಂದೂವರೆ ಲಕ್ಷದ ನಿಜವಾದ ನೋಟುಗಳು ಮತ್ತು 45 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಸಂಪಾದಕೀಯ ನಿಲುವು

  • ಭ್ರಷ್ಟಾಚಾರದಿಂದ ತುಂಬಿರುವ ಪೊಲೀಸ್ ವ್ಯವಸ್ಥೆ! ಇಂತಹ ಪೊಲೀಸರನ್ನು ವಜಾ ಮಾಡಲೇಬೇಕು!