ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ

ನವದೆಹಲಿ – “ಇದು ನನ್ನ ವೈಯಕ್ತಿಕ ಅಭಿಪ್ರಾಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಷೇಧ ಹೇರಬೇಕು; ಏಕೆಂದರೆ ದೇಶದಲ್ಲಿನ ಹೆಚ್ಚಿನ ಸಮಸ್ಯೆಗಳು ಮತ್ತು ಅಸ್ಥಿರತೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರಣವಾಗಿದೆ,” ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.
🗣️ Mallikarjun Kharge: “In my personal opinion, RSS should be banned — most national problems are linked to BJP and RSS.”
⚡ Critics fire back: “If Kharge wants RSS banned, then Congress — responsible for Partition — should be banned first!”
🇮🇳 The remark came while replying to… pic.twitter.com/HKSQ9AuaIM
— Sanatan Prabhat (@SanatanPrabhat) October 31, 2025
(ದೇಶದಲ್ಲಿನ ಹೆಚ್ಚಿನ ಸಮಸ್ಯೆಗಳಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರಣವಲ್ಲ, ಕಾಂಗ್ರೆಸ್ ಕಾರಣವಾಗಿದೆ; ಏಕೆಂದರೆ ಕಾಂಗ್ರೆಸ್ 55 ವರ್ಷಗಳ ಕಾಲ ಆಡಳಿತ ನಡೆಸಿದೆ. ಈ ಆಡಳಿತದ ವೇಳೆ ಭಾರತದಲ್ಲಿ ನಕ್ಸಲಿಸಂ, ಭಯೋತ್ಪಾದನೆ ಸೇರಿದಂತೆ ಅನೇಕ ಸಮಸ್ಯೆಗಳು ಸೃಷ್ಟಿಯಾಗಿವೆ. ಹಾಗಾಗಿ ಕಾಂಗ್ರೆಸ್ ಮೇಲೆ ನಿಷೇಧ ಹೇರಬೇಕು! – ಸಂಪಾದಕರು) ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ನಿಮಿತ್ತ ಮಾತನಾಡಿದ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಅನ್ನು ಟೀಕಿಸಿದ್ದರು. ಆ ಟೀಕೆಗೆ ಪ್ರತ್ಯುತ್ತರ ನೀಡುತ್ತಾ ಖರ್ಗೆ ಮಾತನಾಡುತ್ತಿದ್ದರು. ಮೋಹನ್‌ದಾಸ್ ಗಾಂಧಿ ಅವರ ಹತ್ಯೆಯ ನಂತರ ಆರ್‌ಎಸ್‌ಎಸ್ ಅನ್ನು ಕಠಿಣ ಪದಗಳಲ್ಲಿ ಟೀಕಿಸಿದ್ದ ಸರ್ದಾರ್ ಪಟೇಲ್ ಅವರ ಐತಿಹಾಸಿಕ ಹೇಳಿಕೆಯನ್ನು ಖರ್ಗೆ ಉಲ್ಲೇಖಿಸಿದರು. ಶ್ಯಾಮಪ್ರಸಾದ್ ಮುಖರ್ಜಿ ಅವರಿಗೆ ಸರ್ದಾರ್ ಪಟೇಲ್ ಅವರು ಬರೆದಿದ್ದ ಒಂದು ಪತ್ರವನ್ನು ಉಲ್ಲೇಖಿಸಿ ಖರ್ಗೆ ಈ ಟೀಕೆ ಮಾಡಿದರು.
मैं आपको सरदार पटेल जी की बात याद दिलाना चाहता हूँ – सरदार पटेल जी ने 4 फरवरी 1948 में एक पत्र में लिखा था —
“गाँधी जी की मृत्यु पर RSS वालों ने जो हर्ष प्रकट किया और मिठाई बांटी, उससे ये विरोध और भी बढ़ गया। इन हालातों में, सरकार के पास RSS के खिलाफ क़दम उठाने के अलावा कोई और… pic.twitter.com/1KB6pdIkHg
— Mallikarjun Kharge (@kharge) October 31, 2025
ನೆಹರೂ ಮತ್ತು ಪಟೇಲ್ ನಡುವೆ ಭಿನ್ನಾಭಿಪ್ರಾಯ ಇರಲಿಲ್ಲ! – ಖರ್ಗೆ
ಬಿಜೆಪಿ ಯಾವಾಗಲೂ ನೆಹರೂ ಮತ್ತು ಪಟೇಲ್ ನಡುವೆ ಭಿನ್ನಾಭಿಪ್ರಾಯಗಳಿದ್ದವು ಎಂದು ತೋರಿಸಲು ಪ್ರಯತ್ನಿಸುತ್ತದೆ; ಆದರೆ ವಾಸ್ತವವಾಗಿ, ಅವರಿಬ್ಬರ ನಡುವೆ ಪರಸ್ಪರ ಗೌರವದ ಸಂಬಂಧವಿತ್ತು ಎಂದು ಖರ್ಗೆ ಹೇಳಿದರು. ನೆಹರೂ ಅವರು ದೇಶದ ಏಕತೆಗಾಗಿ ಪಟೇಲ್ ಅವರ ಪಾತ್ರವನ್ನು ಪ್ರಶಂಸಿಸಿದ್ದರು ಮತ್ತು ಪಟೇಲ್ ಅವರು ನೆಹರೂ ಅವರನ್ನು ರಾಷ್ಟ್ರದ ಆದರ್ಶ ನಾಯಕತ್ವವೆಂದು ಪರಿಗಣಿಸಿದ್ದರು ಎಂದು ಖರ್ಗೆ ಹೇಳಿದರು.
ಸಂಪಾದಕೀಯ ನಿಲುವುಒಂದು ವೇಳೆ ಖರ್ಗೆ ಅವರಿಗೆ ಹೀಗೆ ಅನಿಸಿದರೆ, ‘ಭಾರತದ ವಿಭಜನೆಗೆ ಕಾರಣವಾದ ಕಾಂಗ್ರೆಸ್ ಪಕ್ಷವನ್ನು ಕೂಡ ನಿಷೇಧಿಸಬೇಕು’ ಎಂದು ದೇಶದ ಪ್ರತಿಯೊಬ್ಬ ರಾಷ್ಟ್ರಾಭಿಮಾನಿ ಒತ್ತಾಯಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!