ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಹೇಳಿಕೆ

ಮಿಸ್ಸಿಸ್ಸಿಪ್ಪಿ (ಅಮೆರಿಕ) – ಉಷಾ ಅವರು ಅನೇಕ ಬಾರಿ ನನ್ನೊಂದಿಗೆ ಚರ್ಚ್‌ಗೆ ಬರುತ್ತಾರೆ. ನಾನು ಹೇಗೆ ಚರ್ಚ್‌ನ ಬೋಧನೆಗಳಿಂದ ಪ್ರಭಾವಿತನಾಗಿ ನಂತರ ಕ್ಯಾಥೋಲಿಕ್ ಧರ್ಮವನ್ನು ಸ್ವೀಕರಿಸಿದೆನೋ, ಅದೇ ರೀತಿ ಒಂದು ದಿನ ಅವರಿಗೂ ಆಗುತ್ತದೆ, ಎಂದು ಭಾವಿಸುತ್ತೇನೆ. ನನ್ನ ನಂಬಿಕೆ ಕ್ರೈಸ್ತ ಧರ್ಮದಲ್ಲಿದೆ, ಹಾಗಾಗಿ ಅವರು ಸಹ ಅದೇ ರೀತಿ ಯೋಚಿಸಬೇಕು ಎಂದು ನಾನು ಮನಃಪೂರ್ವಕವಾಗಿ ಬಯಸುತ್ತೇನೆ. ಉಷಾ ಅವರು ಹಾಗೆ ಮಾಡದಿದ್ದರೂ, ದೇವರು ಪ್ರತಿಯೊಬ್ಬರಿಗೂ ಸ್ವತಂತ್ರ ಇಚ್ಛಾಶಕ್ತಿಯನ್ನು ನೀಡಿದ್ದಾನೆ, ಆದ್ದರಿಂದ ನನಗೆ ಯಾವುದೇ ತೊಂದರೆ ಇಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ವಿದ್ಯಾರ್ಥಿಗಳ ಕಾರ್ಯಕ್ರಮವೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಒಬ್ಬ ವಿದ್ಯಾರ್ಥಿ ಉಷಾ ಅವರ ನಂಬಿಕೆಯ ಬಗ್ಗೆ ವಿಚಾರಣೆ ಮಾಡಿದ್ದರು. ಈ ಹೇಳಿಕೆಯಿಂದಾಗಿ ಅಮೆರಿಕನ್ ಭಾರತೀಯ ಸಮುದಾಯದಲ್ಲಿ ಆಕ್ರೋಶದ ಅಲೆ ಎದ್ದಿದ್ದು, ಅನೇಕರು ಇದನ್ನು ಅವಿವೇಕದ ಮತ್ತು ಕಪಟದ ಹೇಳಿಕೆ ಎಂದು ಕರೆದಿದ್ದಾರೆ.
ನಾನು ಮತಾಂತರಗೊಳ್ಳುವ ವಿಚಾರವನ್ನು ಹೊಂದಿಲ್ಲ! – ಉಷಾ ವ್ಯಾನ್ಸ್ ಅವರ ನಿಲುವು
ಭಾರತೀಯ ಮೂಲದ ಉಷಾ ವ್ಯಾನ್ಸ್ ಅವರು ಈ ಹಿಂದೆ ಜೂನ್ ತಿಂಗಳಲ್ಲಿ ನೀಡಿದ ಸಂದರ್ಶನದಲ್ಲಿ, ತಾವು ಧರ್ಮ ಬದಲಾಯಿಸುವ ಯಾವುದೇ ಉದ್ದೇಶ ಹೊಂದಿಲ್ಲ, ನನ್ನ ಶ್ರದ್ಧೆ ಹಿಂದೂ ಧರ್ಮದ ಮೇಲೆಯೇ ಇದೆ ಮತ್ತು ಅದು ಹಾಗೆಯೇ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದರು.

ಸಂಪಾದಕೀಯ ನಿಲುವುವ್ಯಾನ್ಸ್ ಅವರು ತಮ್ಮ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸಿರುವುದರಿಂದ ಮತ್ತು ಈ ದಂಪತಿಗಳಲ್ಲಿ ಪರಸ್ಪರ ಅರ್ಥಮಾಡಿಕೊಡಿರುವುದರಿಂದ ಅವರು ಸಾರ್ವಜನಿಕ ವೇದಿಕೆಯಲ್ಲಿ ಹೀಗೆ ಮಾತನಾಡಲು ಸಾಧ್ಯವಾಗಿದೆ ಎಂಬುದನ್ನು ಗಮನಿಸಬೇಕು! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ