ಬಾಂಗ್ಲಾದೇಶದಲ್ಲಿ ಹಿಂದೂ ಯುವತಿಯ ಅಪಹರಣದ ಆರೋಪಿಗಳಿಗೆ ಜಾಮೀನು : Bangladesh Hindu Women

ಪೊಲೀಸರು ಅಪರಾಧದ ಆರೋಪಿಗಳ ಮೇಲೆ ನಿರೀಕ್ಷಿತ ಸೆಕ್ಷನ್‌ಗಳನ್ನು (ಕಲಮುಗಳನ್ನು) ಹಾಕಿಲ್ಲ ಎಂದು ಬಾಂಗ್ಲಾದೇಶ ಮೈನಾರಿಟಿ ವಾಚ್ ಸಂಘಟನೆಯಿಂದ ಅಸಮಾಧಾನ ವ್ಯಕ್ತ

ಢಾಕಾ (ಬಾಂಗ್ಲಾದೇಶ) – ಹಿಂದೂ ಯುವತಿಯ ಅಪಹರಣ ಪ್ರಕರಣದಲ್ಲಿ ಪೊಲೀಸರು ದಾಖಲಿಸಿರುವ ದೂರು ಕಾನೂನು ಮತ್ತು ನ್ಯಾಯ ಪ್ರಕ್ರಿಯೆಗೆ ವಿರುದ್ಧವಾಗಿದೆ ಎಂದು ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಸಂಘಟನೆ ಟೀಕಿಸಿದೆ. ಸಂಘಟನೆಯ ಪ್ರಕಾರ, ಈ ಪ್ರಕರಣವನ್ನು ‘ನಾರಿ ಓ ಶಿಶು ನಿರ್ಜಾತನ್ ದಮನ್ ಅಧಿನಿಯಮ ೨೦೦೧’ (ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ತಡೆ ಕಾಯ್ದೆ ೨೦೦೧) ಅಡಿಯಲ್ಲಿ ದಾಖಲಿಸಬೇಕಿತ್ತು; ಆದರೆ ಪೊಲೀಸರು ತಪ್ಪಾದ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

. ಸಂಘಟನೆಯು, ಅಪರಾಧದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಅಂಶಗಳು ಸ್ಪಷ್ಟವಾಗಿ ಕಂಡುಬಂದರೂ, ಪೊಲೀಸರು ದೂರು ದಾಖಲಿಸುವಾಗ ಸೂಕ್ತ ಸೆಕ್ಷನ್‌ಗಳನ್ನು ಸೇರಿಸಿಲ್ಲ. ಪರಿಣಾಮವಾಗಿ, ಆರೋಪಿಗಳಿಗೆ ಸುಲಭವಾಗಿ ಜಾಮೀನು ದೊರೆತಿದೆ, ಇದು ಅನ್ಯಾಯ ಮತ್ತು ಸ್ವೀಕಾರಾರ್ಹವಲ್ಲ.

. ಸಂಘಟನೆಯು ಈ ಘಟನೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ ಮತ್ತು ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರೆಯುವ ಸಲುವಾಗಿ ಅಪರಾಧದಲ್ಲಿ ಸೂಕ್ತ ಕಾನೂನಿನ ಸೆಕ್ಷನ್‌ಗಳನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.

. ಸರಕಾರ ಮತ್ತು ಪೊಲೀಸರಿಗೆ ಸಂಘಟನೆಯು, ಕಾನೂನು ಪ್ರಕ್ರಿಯೆ ಮತ್ತು ನ್ಯಾಯದ ಕುರಿತು ಪೊಲೀಸರಿಗೆ ಸಾಕಷ್ಟು ತರಬೇತಿ ನೀಡಬೇಕು ಎಂದು ಸಲಹೆ ನೀಡಿದೆ. ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಯಾವುದೇ ತಾರತಮ್ಯವು ಮಾನವ ಹಕ್ಕುಗಳ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅದು ಉಲ್ಲೇಖಿಸಿದೆ.

ಅಲ್ಪಸಂಖ್ಯಾತರ ರಕ್ಷಣೆ ಮತ್ತು ದೇಶದಲ್ಲಿ ಶಾಂತಿ ಕಾಪಾಡಲು ಸಹಿಷ್ಣುತೆಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯ ಎಂದು ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ತನ್ನ ಮನವಿಯಲ್ಲಿ ಸ್ಪಷ್ಟಪಡಿಸಿದೆ.

ಸಂಪಾದಕೀಯ ನಿಲುವು

  • ಮುಸ್ಲಿಮರು ಬಹುಸಂಖ್ಯಾತರಾಗಿರುವ ಬಾಂಗ್ಲಾದೇಶದಲ್ಲಿ ಸರಕಾರ, ಪೊಲೀಸ್, ಆಡಳಿತ, ರಾಜಕೀಯ ಪಕ್ಷಗಳು ಮತ್ತು ಇಸ್ಲಾಮಿಕ್ ಸಂಘಟನೆಗಳು ಹಿಂದೂಗಳಿಗೆ ಸಹಾಯ ಮಾಡುವ ಬದಲು ಅವರನ್ನು ಹಿಂಸಿಸುತ್ತವೆ ಎಂಬುದು ಇಂತಹ ಘಟನೆಗಳಿಂದ ಮತ್ತೆ ಮತ್ತೆ ಬಹಿರಂಗಗೊಳ್ಳುತ್ತಿದೆ!
  • ಇಸ್ಲಾಮಿಕ್ ರಾಷ್ಟ್ರದಲ್ಲಿ ಹಿಂದೂಗಳ ಸ್ಥಿತಿ ಹೀಗಿದ್ದರೆ, ತಥಾಕಥಿತ ಜಾತ್ಯತೀತ ಭಾರತದಲ್ಲಿಯೂ ಮತಾಂಧ ಮುಸ್ಲಿಮರು ಬಹುಸಂಖ್ಯಾತ ಹಿಂದೂಗಳನ್ನು ಹಿಂಸಿಸುತ್ತಾರೆ ಎಂಬುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!