
‘ಬಾಲಸಂಸ್ಕಾರ’ದ ವಿಷಯ ಬಂದಾಗ, ಅವರನ್ನು ರಾಷ್ಟ್ರದ ಭಾವಿ ಪ್ರಜೆಗಳು ಎಂದು ನೋಡಲಾಗುತ್ತದೆ. ‘ಬಾಲಕ-ಯುವಕರು ಸಕ್ಷಮ, ರಾಷ್ಟ್ರ ಸಕ್ಷಮ’ ಹೀಗೆ ನೇರ ಸಂಬಂಧವಿದೆ. ಛತ್ರಪತಿ ಶಿವಾಜಿ ಮಹಾರಾಜರ ಬಾಲ್ಯದಲ್ಲಿ, ಅವರ ವೀರಮಾತೆ ಜೀಜಾಬಾಯಿಯವರು ಅವರಿಗೆ ರಾಮಾಯಣ-ಮಹಾಭಾರತದ ಕಥೆಗಳನ್ನು ಹೇಳುವ ಮೂಲಕ ಅವರಲ್ಲಿ ಒಳ್ಳೆಯ ಸಂಸ್ಕಾರಗಳನ್ನು ಮಾಡಿದರು. ತಮ್ಮ ಯುವಾವಸ್ಥೆಯಲ್ಲಿ, ಅವರು ಹಿಂದವಿ ಸ್ವರಾಜ್ಯವನ್ನು ನಿರ್ಮಿಸುವ ದೊಡ್ಡ ಧ್ಯೇಯವನ್ನಿಟ್ಟರು ಮತ್ತು ಅದನ್ನು
ಪೂರ್ಣಗೊಳಿಸಿದರು. ಸ್ವಾತಂತ್ರ್ಯವೀರ ಸಾವರಕರÀರು ತಮ್ಮ ಬಾಲ್ಯದಲ್ಲಿಯೇ ಒಂದು ಸಾರ್ವಜನಿಕ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ, ಓಜಸ್ವಿ ಮತ್ತು ವೀರರಸಭರಿತ ಭಾಷಣ ಮಾಡಿ ಪ್ರಥಮ ಸ್ಥಾನ ಗಳಿಸಿದರು. ಅವರ ಬಾಲ್ಯದಲ್ಲಿಯೇ ಅವರಲ್ಲಿ ಬೆಳೆದ ರಾಷ್ಟ್ರಕಾರ್ಯವನ್ನು ಮಾಡುವ ಆಸಕ್ತಿಯು ಯೌವನದಲ್ಲಿ ವಿಕಸನಗೊಂಡಿತು. ಯೌವನದಲ್ಲಿ ಅವರು ಆಂಗ್ಲರ ವಿರುದ್ಧ ಸಶಸ್ತ್ರ ಕ್ರಾಂತಿಯ ಚಳುವಳಿಯನ್ನು ಹುಟ್ಟುಹಾಕುವ ಗುರಿಯನ್ನು ಇಟ್ಟುಕೊಂಡು ಅದನ್ನು ಪೂರ್ಣ ಗೊಳಿಸಿದರು. ಈ ರಾಷ್ಟ್ರಪುರುಷರು ತಮ್ಮ ಬಾಲ್ಯದಲ್ಲಿ ಆದ ಸಂಸ್ಕಾರಗಳ ಅನುಗುಣವಾಗಿ ಯೌವನದಲ್ಲಿ ದೊಡ್ಡ ರಾಷ್ಟ್ರೀಯ ಗುರಿಯನ್ನು ಇಟ್ಟುಕೊಂಡು, ಅದಕ್ಕಾಗಿ ಪ್ರಯತ್ನಗಳ ಪರಾಕಾಷ್ಠೆ ಮಾಡಿದರು. ಈ ಮಾರ್ಗಕ್ರಮಣದಲ್ಲಿ ಅವರಿಗೆ ಅನೇಕ ದುಃಖ, ಮಾನಹಾನಿ, ಅವಮಾನದ ಪ್ರಸಂಗಗಳು ಬಂದವು, ಸಂಕಟಗಳು ಎದುರಾದವು, ದೊಡ್ಡ ಸಮಸ್ಯೆಗಳು ಬಂದರೂ ಅವರು ವಿಚಲಿತರಾಗಲಿಲ್ಲ. ಅವರ ಅದ್ವಿತೀಯವಾದ ಗುರಿ ನಿಷ್ಠೆ, ಧ್ಯೇಯಕ್ಕಾಗಿ ಏನೇ ತ್ಯಾಗ ಮಾಡಲು ಇರುವ ಸಿದ್ಧತೆ ಮತ್ತು ಪ್ರಚಂಡ ಮನೋಬಲದ ಈ ಬಲದಿಂದ ಅವರು ಕಾರ್ಯನಿರತರಾಗಿದ್ದರು ಮತ್ತು ಅಸಾಮಾನ್ಯ ಪರಾಕ್ರಮದಿಂದ ತಮ್ಮ ಗುರಿಯನ್ನು ಪೂರ್ಣಗೊಳಿಸಿದರು.

ಸ್ವಾಮಿ ವಿವೇಕಾನಂದರು, ”ನನಗೆ ಧ್ಯೇಯದಿಂದ ಪ್ರೇರಿತರಾದ ೧೦೦ ರಾಷ್ಟ್ರಾಭಿಮಾನಿ ಯುವಕರ ಅವಶ್ಯಕತೆ ಇದೆ. ಈ ಯುವಕರಿಂದ ನಾನು ಭಾರತದಲ್ಲಿ ಅದ್ಭುತ ಬದಲಾವಣೆ ಮಾಡುತ್ತೇನೆ !’ ಎಂದು ಹೇಳುತ್ತಿದ್ದರು. ಇಂತಹ ರಾಷ್ಟ್ರೀಯ ಚಾರಿತ್ರ್ಯದ ಮಹಾಪುರುಷರು ಜನಿಸಿದ ದೇಶದಲ್ಲಿ ಯಾವ ಕೊರತೆ ಇದೆ ?
ಭಾರತದಂತಹ ವೈವಿಧ್ಯತೆಯಿಂದ ಕೂಡಿದ ದೇಶದಲ್ಲಿ ಉನ್ನತ ಚಾರಿತ್ರ್ಯದ ಮಹಾಪುರುಷರು ಜನಿಸಿದ್ದರೂ, ಇಂದಿನ ಭಾರತದಲ್ಲಿ ಬಹುಸಂಖ್ಯಾತ ಬಾಲಕರ ಮತ್ತು ಯುವಕರ ಸ್ಥಿತಿ ಮಾತ್ರ ವಿಭಿನ್ನವಾಗಿದೆ. ಅವರಲ್ಲಿ ನಿಶಕ್ತರು, ನಿಸ್ತೇಜರು, ದುರ್ಬಲರು, ಸ್ವಾರ್ಥಿಗಳು, ಸಂಕುಚಿತ ವೃತ್ತಿಯವರಾಗಿ ರುವುದು ಕಂಡುಬರುತ್ತದೆ. ನೈತಿಕತೆ ಕುಸಿದು ಸ್ವತ್ವವನ್ನೂ ಕಳೆದು ಕೊಂಡಿರುವುದರಿಮದ ಚಿಕ್ಕ ಚಿಕ್ಕ ಸಮಸ್ಯೆಗಳಿಗೆ, ಅಡಚಣೆಗಳ ಮುಂದೆ ಅವರು ಶರಣಾಗುತ್ತಿದ್ದಾರೆ. ಚಿಕ್ಕಂದಿನಿಂದಲೇ ಅವರ ಕೈಯಲ್ಲಿ ಸಂಚಾರವಾಣಿ ಬಂದು ಅವರು ಅನಗತ್ಯ, ನಿರರ್ಥಕ ವಿಡಿಯೋಗಳನ್ನು ನೋಡಿ ಅವರು ದಾರಿ ತಪ್ಪುತ್ತಿದ್ದಾರೆ. ಹೆಚ್ಚೆಚ್ಚು ಸಂಕುಚಿತ ಆಗುತ್ತಿದ್ದಾರೆ. ಚಿಕ್ಕ ಚಿಕ್ಕ ವಿಷಯಗಳಿಗಾಗಿ ಪಾಲಕರ ಬಳಿ ಹಟ ಮಾಡುವುದು, ಅವರು ಹೇಳಿದ್ದನ್ನು ಕೇಳದಿರುವುದು ಮುಂತಾದವುಗಳನ್ನು ಮಾಡುತ್ತಾರೆ; ಆದರೆ ಕೆಲವು ಮಕ್ಕಳು ತಮ್ಮತನವನ್ನು ಕಾಪಾಡಿಕೊಂಡು ತಮ್ಮಲ್ಲಿನ ಸಂಸ್ಕಾರವನ್ನು ಹೆಚ್ಚಿಸುತ್ತಿದ್ದಾರೆ. ಚಿಕ್ಕಂದಿನಿಂದಲೇ ಧ್ಯೇಯವನ್ನಿಟ್ಟು ಪ್ರಯತ್ನಶೀಲರಾಗುತ್ತಿದ್ದಾರೆ. ಇದಕ್ಕಾಗಿ ಪಾಲಕರ ಸಂಸ್ಕಾರ ಮತ್ತು ಮಕ್ಕಳ ಮೇಲೆ ಸತತವಾಗಿ ಗಮನವನ್ನಿಟ್ಟು ಅವರನ್ನು ತಿದ್ದುತ್ತಾ, ಮಾರ್ಗವನ್ನು ತೋರಿಸುವುದು ಆವಶ್ಯಕವಾಗಿದೆ, ಹೀಗಾದರೆ ಮಾತ್ರ ಖಂಡಿತವಾಗಿಯೂ ಇಂದಿನ ಈ ಬಾಲಕರು ಛತ್ರಪತಿ ಶಿವಾಜಿ ಮಹಾರಾಜರು, ಸ್ವಾತಂತ್ರ್ಯವೀರ ಸಾವರಕರ, ಸ್ವಾಮಿ ವಿವೇಕಾನಂದರು ಮುಂತಾದ ರಾಷ್ಟ್ರಪುರುಷರ ಆದರ್ಶವನ್ನು ಇಟ್ಟು ತಮ್ಮ ಯುವ ಜೀವನವನ್ನು ಉತ್ತಮವಾಗಿ ಕಳೆದು ರಾಷ್ಟ್ರದ ಸಕ್ಷಮ ನಾಗರಿಕರಾಗುವರು, ಇದರಲ್ಲಿ ಸಂದೇಹವೇ ಇಲ್ಲ.
– ಶ್ರೀ. ಯಜ್ಞೇಶ ಸಾವಂತ, ಸನಾತನ ಆಶ್ರಮ, ದೇವದ, ಪನವೇಲ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು