
ವಾಶಿಂಗ್ಟನ್ (ಅಮೇರಿಕಾ)ನ ‘ಸೆಪಿಯನ್ ಲ್ಯಾಬ್ಸ್’ ಎಂಬ ಸಂಸ್ಥೆಯು ಒಂದು ಮಹತ್ವದ ಸಂಶೋಧನೆಯನ್ನು ನಡೆಸಿತು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಕೈಗೆ ‘ಸ್ಮಾರ್ಟ್‌ಫೋನ್’ ಕೊಟ್ಟರೆ ಅವರು ದೊಡ್ಡವರಾದ ಮೇಲೆ ಗಂಭೀರ ಮಾನಸಿಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಅದರಲ್ಲಿಯೂ ಪುರುಷರಿಗಿಂತ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಇದರ ಪರಿಣಾಮ ಹೆಚ್ಚಾಗುತ್ತದೆ ಎಂದು ಈ ಸಂಶೋಧನೆಯಿಂದ ತಿಳಿದು ಬಂದಿದೆ.
೧. ಸಂಶೋಧನೆಗನುಸಾರ ಮಕ್ಕಳಿಗೆ ಎಷ್ಟು ತಡವಾಗಿ ಸ್ಮಾರ್ಟ್‌ಫೋನ್ ಸಿಕ್ಕಿದೆಯೋ, ಅಷ್ಟೇ ಅವರ ಆತ್ಮವಿಶ್ವಾಸ ಮತ್ತು ಇತರರೊಂದಿಗೆ ಸಕಾರಾತ್ಮಕ ಸಂಬಂಧಗಳನ್ನು ಇಟ್ಟುಕೊಳ್ಳುವ ಅವರ ಸಾಮರ್ಥ್ಯ ಹೆಚ್ಚಾಗಿರುವುದು ಕಂಡು ಬಂದಿತು. ಹಾಗೆಯೇ ಯಾವ ಹೆಣ್ಣು ಮಕ್ಕಳಿಗೆ ತಡವಾಗಿ ಸ್ಮಾರ್ಟ್‌ಫೋನ್ ಸಿಕ್ಕಿದೆಯೋ ಅವರ ದೃಷ್ಟಿಕೋನದಲ್ಲಿ ಅನುಕೂಲತೆ ಮತ್ತು ಹೊಂದಾಣಿಕೆಯ ಗುಣಗಳು ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ.
೨. ಮಕ್ಕಳಿಗೆ ಅತಿ ಚಿಕ್ಕ ವಯಸ್ಸಿನಲ್ಲಿ ಸ್ಮಾರ್ಟ್‌ಫೋನ್ ಬಳಸಲು ಸಿಕ್ಕಿದರೆ, ಅವರಲ್ಲಿ ಆತ್ಮಹತ್ಯೆಯ ವಿಚಾರಗಳು, ಇತರರ ಬಗ್ಗೆ ಆಕ್ರಮಣಕಾರಿ ಭಾವನೆ, ವಾಸ್ತವದಿಂದ ದೂರವಿರುವುದು ಮುಂತಾದ ಅನೇಕ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬಂದವು.
ಈ ಸಂಶೋಧನೆಯು, ತಂತ್ರಜ್ಞಾನದ ಅತಿಯಾದ ಬಳಕೆಯು ಮಕ್ಕಳು ಮತ್ತು ಯುವಕರ ಮಾನಸಿಕ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ? ಎಂಬುದನ್ನು ತೋರಿಸುತ್ತದೆ.
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು