|

ನವ ದೆಹಲಿ – ಬೀದಿ ನಾಯಿಗಳ ಸಮಸ್ಯೆ ಬಗ್ಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಕಳುಹಿಸಲಾಗಿತ್ತು. ಆದಾಗ್ಯೂ ಪ್ರಮಾಣಪತ್ರವನ್ನು ಸಲ್ಲಿಸಲಾಗಿಲ್ಲ. ನಿಮ್ಮ ಅಧಿಕಾರಿಗಳು ವೃತ್ತಪತ್ರಿಕೆಗಳನ್ನು ಓದುವುದಿಲ್ಲವೇ ಅಥವಾ ಸಾಮಾಜಿಕ ಮಾಧ್ಯಮಗಳನ್ನು ನೋಡುವುದಿಲ್ಲವೇ? ಎಲ್ಲೆಡೆ ಈ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿತ್ತು. ವಿಶ್ವದಲ್ಲಿ ಭಾರತದ ಘನತೆಗೆ ಧಕ್ಕೆಯಾಗುತ್ತಿದೆ. ಈ ವಿಷಯ ಅಧಿಕಾರಿಗಳಿಗೆ ತಿಳಿದಿದ್ದರೂ ಅವರು ಮುಂದಾಳತ್ವ ವಹಿಸಲಿಲ್ಲ. ಈಗ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ನವೆಂಬರ್ ೩ ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು, ಇಲ್ಲದಿದ್ದರೆ ನಾವೇ ನ್ಯಾಯಾಲಯವನ್ನು ವಿಧಾನಸಭೆ ಸಭಾಂಗಣದಲ್ಲಿ ನಡೆಸುತ್ತೇವೆ, ಎಂದು ಸರ್ವೋಚ್ಚ ನ್ಯಾಯಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ತರಾಟೆಗೆ ತೆಗೆದುಕೊಂಡಿತು. ಬೀದಿ ನಾಯಿಗಳ ಪ್ರಕರಣದಲ್ಲಿ ರಾಜ್ಯಗಳಿಂದ ಇನ್ನೂ ಪ್ರಮಾಣಪತ್ರ ಸಲ್ಲಿಸದ ಕಾರಣ ಸರ್ವೋಚ್ಚ ನ್ಯಾಯಾಲಯವು ಈ ರೀತಿ ಅಸಮಾಧಾನ ವ್ಯಕ್ತಪಡಿಸಿತು. ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ಪ್ರಮಾಣಪತ್ರ ಸಲ್ಲಿಸಿರುವುದರಿಂದ ಆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಜರಾಗಬೇಕಾಗಿಲ್ಲ. ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಎಲ್ಲ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿತ್ತು. ಅದೇ ವೇಳೆ ದೆಹಲಿ-ಎನ್‌ಸಿಆರ್‌ನಲ್ಲಿ (ನ್ಯಾಷನಲ್ ಕ್ಯಾಪಿಟಲ್ ರೀಜನ್ – ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ) ಬೀದಿ ನಾಯಿಗಳನ್ನು ಹಿಡಿದು ಅವುಗಳ ಸಂತಾನಹರಣ ಮತ್ತು ಲಸಿಕೆ ನೀಡಿ ಪುನಃ ಬಿಡುವಂತೆ ನಿರ್ದೇಶನ ನೀಡಿತ್ತು.
.. ಇಲ್ಲದಿದ್ದರೆ ದಂಡ ವಿಧಿಸಲಾಗುವುದು!
ನ್ಯಾಯಮೂರ್ತಿಗಳು ವಿಶೇಷವಾಗಿ ದೆಹಲಿ ಸರಕಾರವನ್ನು ಪ್ರಶ್ನಿಸಿದರು. ದೆಹಲಿ ಇನ್ನೂ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಏಕೆ? ಮುಖ್ಯ ಕಾರ್ಯದರ್ಶಿ ಇದಕ್ಕೆ ಸ್ಪಷ್ಟನೆ ನೀಡಬೇಕು, ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ನ್ಯಾಯಮೂರ್ತಿಗಳು ಖಡಕ್ ಆಗಿ ಹೇಳಿದರು.
ನಾಯಿಗಳ ದಾಳಿ ದೇಶದ ಘನತೆಗೆ ಧಕ್ಕೆ ತರುತ್ತವೆ!
ಆಗಸ್ಟ್ ನಲ್ಲಿ ನೀಡಿದ ಆದೇಶದ ನಂತರ ದೇಶಾದ್ಯಂತ ಬೀದಿ ನಾಯಿಗಳ ದಾಳಿಯ ಹಲವು ಘಟನೆಗಳು ನಡೆದಿವೆ. ಚಿಕ್ಕ ಮಕ್ಕಳ ಮೇಲಾಗುತ್ತಿರುವ ದಾಳಿಗಳು ಆತಂಕಕಾರಿಯಾಗಿವೆ. ಇತ್ತೀಚೆಗೆ ಪುಣೆಯಲ್ಲಿ ಒಬ್ಬ ಹುಡುಗನ ಮೇಲೆ ನಾಯಿ ದಾಳಿ ಮಾಡಿದೆ, ಅದಕ್ಕೂ ಮೊದಲು ಒಬ್ಬ ಹುಡುಗಿಯ ಮೇಲೂ ಇದೇ ರೀತಿ ದಾಳಿ ನಡೆದಿತ್ತು ಮತ್ತು ಕೆಲ ದಿನಗಳ ಹಿಂದೆ ಭಂಡಾರಾ ಜಿಲ್ಲೆಯಲ್ಲಿ ೨೦ ನಾಯಿಗಳು ದಾಳಿ ಮಾಡಿರುವುದು ವರದಿಯಾಗಿದೆ. ಈ ಘಟನೆಗಳಿಂದ ದೇಶದ ಅಂತಾರಾಷ್ಟ್ರೀಯ ಘನತೆ ಮಲೀನವಾಗುತ್ತಿದೆ. ಇನ್ನೂ ರಾಜ್ಯ ಸರಕಾರಗಳಿಂದ ಪ್ರಮಾಣಪತ್ರ ಸಲ್ಲಿಕೆಯಾಗಿಲ್ಲ. ೨ ತಿಂಗಳು ಕಳೆದರೂ ಉತ್ತರ ನೀಡಿಲ್ಲ ಎಂದು ಈ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!