
ಢಾಕಾ (ಬಾಂಗ್ಲಾದೇಶ) – ‘ಆರ್ಗನೈಸರ್’ ನಿಯತಕಾಲಿಕೆಯ ವರದಿಯ ಪ್ರಕಾರ, ಆಗಸ್ಟ್ 31 ರಂದು ಅಲ್ಲಿನ ಹೋಟೆಲ್ ಕೋಣೆಯೊಂದರಲ್ಲಿ ಅಮೇರಿಕಾದ ವಿಶೇಷ ಪಡೆಗಳ ಅಧಿಕಾರಿ ಟೆರೆನ್ಸ್ ಅರ್ವೆಲ್ ಜಾಕ್ಸನ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಭಾರತದ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸುವ ಸಲುವಾಗಿ ಈ ಅಮೇರಿಕನ್ ಅಧಿಕಾರಿಯನ್ನು ಢಾಕಾದಲ್ಲಿ ನಿಯೋಜಿಸಲಾಗಿತ್ತು ಎಂದು ‘ಆರ್ಗನೈಸರ್’ ವರದಿ ಹೇಳಿದೆ. ಇದು ಪ್ರಧಾನಿ ಮೋದಿ ಅವರ ಹತ್ಯೆಯ ಯೋಜನೆಯಾಗಿರಬಹುದು, ಅದನ್ನು ಭಾರತ ಮತ್ತು ರಷ್ಯಾದ ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ವಿಫಲಗೊಳಿಸಿವೆ ಎಂದು ವರದಿಯು ತಜ್ಞರನ್ನು ಉಲ್ಲೇಖಿಸಿ ಹೇಳಿದೆ.
ಘಟನೆಯ ವಿವರ
ಬಾಂಗ್ಲಾದೇಶದ ಸೈನ್ಯಕ್ಕೆ ತರಬೇತಿ ನೀಡಲು ಟೆರೆನ್ಸ್ ಅರ್ವೆಲ್ ಜಾಕ್ಸನ್ ಅವರನ್ನು ಕಳುಹಿಸಲಾಗಿತ್ತು. ಅದೇ ದಿನ ಪ್ರಧಾನಿ ಮೋದಿ ಅವರು ‘ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆ’ಗಾಗಿ ಚೀನಾದ ಟಿಯಾಂಜಿನ್ ನಲ್ಲಿದ್ದರು. ಶೃಂಗಸಭೆಯ ನಂತರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕಾರಿನಲ್ಲಿ 45 ನಿಮಿಷಗಳ ಕಾಲ ಖಾಸಗಿ ಚರ್ಚೆ ನಡೆಸಿದರು. ಈ ಖಾಸಗಿ ಚರ್ಚೆ ಮತ್ತು ಢಾಕಾದಲ್ಲಿ ಜಾಕ್ಸನ್ ಸಾವಿನ ನಡುವೆ ಸಂಬಂಧವಿರಬಹುದು ಎಂದು ವರದಿ ಹೇಳಿದೆ. ‘ಈ ಅಧಿಕಾರಿ ಪ್ರಧಾನಿ ಮೋದಿ ಅವರ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದ’ ಎಂದು ಇದರಲ್ಲಿ ಹೇಳಲಾಗಿದೆ.
ಸೆಪ್ಟೆಂಬರ್ 2 ರಂದು ಭಾರತದಲ್ಲಿ ನಡೆದ ‘ಸೆಮಿಕಾನ್ ಶೃಂಗಸಭೆ’ಯಲ್ಲಿ ಪ್ರಧಾನಿ ಮೋದಿ ಅವರು ಮಾಡಿದ ಭಾಷಣವನ್ನು ‘ಆರ್ಗನೈಸರ್’ ನಿಯತಕಾಲಿಕೆ ಉಲ್ಲೇಖಿಸಿದೆ. ಆಗ ಮೋದಿ ಅವರು ತಮ್ಮ ಭಾಷದಲ್ಲಿ ‘ನೀವು ಏಕೆ ಚಪ್ಪಾಳೆ ತಟ್ಟುತ್ತಿದ್ದೀರಿ? ನಾನು ಚೀನಾಕ್ಕೆ ಹೋಗಿ ಹಿಂತಿರುಗಿ ಬಂದೆ ಎಂಬ ಕಾರಣಕ್ಕಾಗಿಯೇ?’ ಎಂದು ಕೇಳಿದ್ದರು. ವಿಶ್ಲೇಷಕರ ಪ್ರಕಾರ, ಈ ನಿಗೂಢ ಹೇಳಿಕೆ ಅವರ ಜೀವಕ್ಕೆ ಅಪಾಯವಿರುವ ಸಂದೇಶವಾಗಿದೆ.
ಭಾರತವನ್ನು ಅಸ್ಥಿರಗೊಳಿಸಲು ಅಮೇರಿಕಾದ ಸಂಚು?
ಕಳೆದ ಕೆಲವು ತಿಂಗಳಿಂದ ಅಮೇರಿಕಾದ ಅಧ್ಯಕ್ಷ ಟ್ರಂಪ್ ಅವರು ನಿರಂತರವಾಗಿ ಭಾರತ ವಿರೋಧಿ ನಿಲುವು ತೆಗೆದುಕೊಳ್ಳುತ್ತಿದ್ದಾರೆ, ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ ಮತ್ತು ಪ್ರಧಾನಿ ಮೋದಿ ಅವರಿಗಾಗಿ ಕಠಿಣ ರಾಜಕೀಯ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಭಾರತದ ನೆರೆಯ ದೇಶಗಳಿಗೆ ತೊಂದರೆ ನೀಡಿದ ನಂತರ, ಈಗ ಅಮೇರಿಕಾ ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation