|

ವಾಷಿಂಗ್ಟನ್ ಡಿ.ಸಿ. (ಅಮೇರಿಕಾ) – ‘ಪಾಕಿಸ್ತಾನದ ಬಳಿ ಅಣುಬಾಂಬ್ ಗಳಿವೆ ಮತ್ತು ಅದು ಯಾವುದೇ ಸಮಯದಲ್ಲಿ ಭಾರತದ ಮೇಲೆ ದಾಳಿ ಮಾಡಬಹುದು’ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪಾಕ್ ನ ರಹಸ್ಯವನ್ನು ಅಮೇರಿಕಾದ ಗುಪ್ತಚರ ಸಂಸ್ಥೆಯ ಮಾಜಿ ಅಧಿಕಾರಿಯೊಬ್ಬರು ಬಯಲು ಮಾಡಿದ್ದಾರೆ. ಸಿಐಎ (ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ – ಕೇಂದ್ರ ಗುಪ್ತಚರ ಸಂಸ್ಥೆ) ಮಾಜಿ ಅಧಿಕಾರಿ ಜಾನ್ ಕಿರಿಯಾಕೂ ಅವರು, ಅಮೇರಿಕಾ ಲಕ್ಷಾಂತರ ಡಾಲರ್ ಗಳನ್ನು ನೀಡಿ ಅಂದಿನ ರಾಷ್ಟ್ರಪತಿ ಪರ್ವೇಜ್ ಮುಷರಫ್ ಅವರನ್ನು ಖರೀದಿಸಿತ್ತು ಎಂದು ಹೇಳಿದರು. ಮುಷರಫ್ ಅವರ ಅಧಿಕಾರಾವಧಿಯಲ್ಲಿ, ಅಮೇರಿಕಾಗೆ ಪಾಕಿಸ್ತಾನದ ಭದ್ರತೆ ಮತ್ತು ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಪೂರ್ಣ ಪ್ರವೇಶವಿತ್ತು. ಅವರು ದೇಶದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಅಮೇರಿಕಾಗೆ ನೀಡಿದ್ದರು. ಅವರು ನಮಗೆ ಬೇಕಾದುದನ್ನು ಮಾಡಲು ಅನುಮತಿ ನೀಡಿದರು. ಈ ಮೂಲಕ, ಪಾಕ್ ನ ಅಣುಬಾಂಬ್ ಗಳು ಅಮೇರಿಕಾದ ನಿಯಂತ್ರಣದಲ್ಲಿದ್ದವು ಎಂಬ ವಿಷಯವನ್ನು ಅವರು ಬಹಿರಂಗಪಡಿಸಿದರು. ಜಾನ್ ಕಿರಿಯಾಕೂ ಅವರು ಸಿಐಎನಲ್ಲಿ 15 ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಭಯೋತ್ಪಾದನೆ ವಿರೋಧಿ ಅನೇಕ ಕಾರ್ಯಾಚರಣೆಗಳಲ್ಲಿ ಅವರು ನೇರವಾಗಿ ಭಾಗಿಯಾಗಿದ್ದರು.
ಅಮೇರಿಕಾದ ಜೊತೆ ದ್ವಿಮುಖ ಆಟವಾಡಿದ ಮುಷರಫ್.
ಕಿರಿಯಾಕೂ ಅವರು ಮುಷರಫ್ ದ್ವಿಮುಖ ಆಟವಾಡಿದ್ದರು ಎಂದು ಸ್ಪಷ್ಟಪಡಿಸಿದರು. ಒಂದೆಡೆ ಅಮೇರಿಕಾದೊಂದಿಗೆ ಸ್ನೇಹಪರ ಪಾತ್ರ ನಿರ್ವಹಿಸುತ್ತಿದ್ದ ಅವರು, ಮತ್ತೊಂದೆಡೆ ಅಮೇರಿಕಾ ನೀಡಿದ ಮಿಲಿಟರಿ ನೆರವನ್ನು ಭಾರತದ ವಿರುದ್ಧ ಬಳಸಿದರು. ಪಾಕಿಸ್ತಾನದ ಸೈನ್ಯ ಮತ್ತು ಭಯೋತ್ಪಾದಕರಿಗೆ ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರಿಸಲು ಅವಕಾಶ ನೀಡಿದರು.
2002 ರಲ್ಲಿ ಭಾರತ-ಪಾಕಿಸ್ತಾನ ಯುದ್ಧವಾಗಬೇಕಿತ್ತು.
ಸಂಸತ್ತಿನ ಮೇಲಿನ ದಾಳಿಯ ನಂತರ 2002 ರಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧದ ಅಂಚಿನಲ್ಲಿದ್ದವು ಎಂದು ಕಿರಿಯಾಕೂ ತಿಳಿಸಿದರು. ನಾವು ಅಮೇರಿಕಾದ ಅಧಿಕಾರಿಗಳ ಕುಟುಂಬಗಳನ್ನು ಇಸ್ಲಾಮಾಬಾದ್ ನಿಂದ ಹೊರಗೆ ಹೋಗುವಂತೆ ಸೂಚಿಸಿದ್ದೆವು. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭುಗಿಲೇಳಬಹುದು ಎಂದು ನಾವು ಭಾವಿಸಿದ್ದೆವು. ಸಂಸತ್ತಿನ ಮೇಲಿನ ದಾಳಿ ಮತ್ತು 2008 ರ ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ನಂತರ ಭಾರತ ಸಂಯಮ ತೋರಿಸಿತ್ತು. ಮುಂಬಯಿ ದಾಳಿಯ ಹಿಂದೆ ಪಾಕಿಸ್ತಾನದ ಬೆಂಬಲಿತ ಭಯೋತ್ಪಾದಕ ಗುಂಪುಗಳಿವೆ ಎಂದು ನಮಗೆ ಯಾವಾಗಲೂ ಅನಿಸುತ್ತಿತ್ತು, ಮತ್ತು ಅದು ಸಾಬೀತಾಯಿತು. ನಿಜವಾದ ಕಥೆ ಏನೆಂದರೆ, ಪಾಕಿಸ್ತಾನವು ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿತ್ತು ಮತ್ತು ಅದನ್ನು ತಡೆಯಲು ಯಾರೂ ಏನೂ ಮಾಡಲಿಲ್ಲ.
ಭಾರತ ಈಗ ಪ್ರತ್ಯುತ್ತರ ನೀಡುತ್ತಿದೆ!
ಕಿರಿಯಾಕೂ ಅವರು, ಈಗ ಭಾರತವು ತನ್ನ ಕಾರ್ಯತಂತ್ರದ ಸಂಯಮವನ್ನು ದೌರ್ಬಲ್ಯವೆಂದು ಪರಿಗಣಿಸಲಾಗುತ್ತಿದೆಯೆಂದು ತಿಳಿದಿದ್ದು, ಆದ್ದರಿಂದ ಅದು ಪ್ರತ್ಯುತ್ತರ ನೀಡುತ್ತಿದೆ’ ಎಂದು ಹೇಳಿದರು.
ಅಬ್ದುಲ್ ಖಾದಿರ್ ಖಾನ್ ನನ್ನು ಅಮೇರಿಕಾ ಕೊಲ್ಲುತ್ತಿತ್ತು.
ಪಾಕಿಸ್ತಾನದ ಅಣುಬಾಂಬ್ ನ ಜನಕ ಅಬ್ದುಲ್ ಖಾದಿರ್ ಖಾನ್ ರನ್ನು ಸೌದಿ ಸರಕಾರದ ನೇರ ಹಸ್ತಕ್ಷೇಪದ ನಂತರ ಅಮೇರಿಕಾ ಗುರಿಯಾಗಿಸಲಿಲ್ಲ ಎಂದು ಕಿರಿಯಾಕೂ ತಿಳಿಸಿದರು. ನನ್ನ ಸಹೋದ್ಯೋಗಿಯೊಬ್ಬರು ಖಾನ್ ಗೆ ಸಂಬಂಧಿಸಿದ್ದರು. ನಾವು ಇಸ್ರೇಲ್ ಮಾರ್ಗವನ್ನು ಅನುಸರಿಸಿದ್ದರೆ, ಖಾನ್ ರನ್ನು ಕೊಲ್ಲಬಹುದಿತ್ತು. ಅವರನ್ನು ಪತ್ತೆಹಚ್ಚುವುದು ಬಹಳ ಸುಲಭವಾಗಿತ್ತು ಮತ್ತು ನಮ್ಮ ಬಳಿ ಅವರ ವಿಳಾಸವಿತ್ತು.
ಲಾಡೆನ್ ಬುರ್ಖಾ ಧರಿಸಿ ಪರಾರಿಯಾದನು.
ಕೇಂದ್ರ ಕಮಾಂಡ್ ನ ನಮ್ಮ ಅನುವಾದಕರೇ ಅಲ್-ಖೈದಾ ಸಂಘಟನೆಯ ರಹಸ್ಯ ಸದಸ್ಯರಾಗಿದ್ದರು ಮತ್ತು ಅವರು ಅಮೇರಿಕಾ ಸೈನ್ಯವನ್ನು ಪ್ರವೇಶಿಸಿದ್ದರು ಎಂಬುದು ನಮಗೆ ತಿಳಿದಿರಲಿಲ್ಲ ಎಂದು ಕಿರಿಯಾಕೂ ಹೇಳಿದರು. ಲಾಡೆನ್ ಸುತ್ತುವರಿದಿದ್ದಾನೆ ಎಂದು ನಮಗೆ ತಿಳಿದಾಗ, ನಾವು ಆ ಅನುವಾದಕನನ್ನು ಬಳಸಿಕೊಂಡು ಅವನೊಂದಿಗೆ ಸಂವಹನ ನಡೆಸಿದೆವು ಮತ್ತು ಬೆಟ್ಟದಿಂದ ಕೆಳಗೆ ಬರುವಂತೆ ಹೇಳಿದೆವು. ಅದಕ್ಕೆ ಪ್ರತಿಯಾಗಿ, ಅಲ್-ಖೈದಾದಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿ ಹೊರಹೋಗಲು ಅವಕಾಶ ನೀಡಬೇಕು ಮತ್ತು ಶರಣಾಗತಿಗಾಗಿ ಬೆಳಗಿನವರೆಗೆ ಸಮಯ ನೀಡಬೇಕೆಂಬ ಬೇಡಿಕೆ ಬಂದಿತು. ಆ ಅನುವಾದಕ ನಮ್ಮ ಕಮಾಂಡರ್ ನನ್ನು ಈ ಬೇಡಿಕೆಗೆ ಒಪ್ಪಿಸಿದನು; ಆದರೆ ಲಾಡೆನ್ ಕತ್ತಲೆಯ ಲಾಭ ಪಡೆದು ಬುರ್ಖಾ ಧರಿಸಿ ಅಲ್ಲಿಂದ ಪರಾರಿಯಾಗಿ ಪಾಕಿಸ್ತಾನ ತಲುಪಿದನು.
ಅಮೇರಿಕಾ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸ್ವಾರ್ಥ ಸಾಧಿಸುತ್ತದೆ.
ಕಿರಿಯಾಕೂ ಅವರು ಅಮೇರಿಕಾದ ವಿದೇಶಾಂಗ ನೀತಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ ಮತ್ತು ಅಮೇರಿಕಾ ಪ್ರಜಾಪ್ರಭುತ್ವ ಎಂದು ನಟಿಸುತ್ತದೆ; ಆದರೆ ವಾಸ್ತವದಲ್ಲಿ ತನ್ನ ಸ್ವಾರ್ಥದ ಪ್ರಕಾರ ವರ್ತಿಸುತ್ತದೆ ಎಂದು ಹೇಳಿದರು. ಸೌದಿ ಅರೇಬಿಯಾ ಮತ್ತು ಅಮೇರಿಕಾದ ಸಂಬಂಧಗಳು ಸಂಪೂರ್ಣವಾಗಿ ವ್ಯವಹಾರವನ್ನು ಆಧರಿಸಿವೆ. ಅಮೇರಿಕಾ ತೈಲವನ್ನು ಖರೀದಿಸುತ್ತದೆ ಮತ್ತು ಸೌದಿ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತದೆ. ಜಾಗತಿಕ ಶಕ್ತಿಯ ಸಮತೋಲನವು ಬದಲಾಗುತ್ತಿದೆ ಮತ್ತು ಸೌದಿ ಅರೇಬಿಯಾ, ಚೀನಾ ಮತ್ತು ಭಾರತ ತಮ್ಮ ಕಾರ್ಯತಂತ್ರದ ಸ್ಥಾನಗಳನ್ನು ರೂಪಿಸುತ್ತಿವೆ ಎಂದು ಹೇಳಿದರು.
ಸಂಪಾದಕೀಯ ನಿಲುವುಭಯೋತ್ಪಾದನೆಯನ್ನು ಹರಡುವ ಮೂಲಕ ತನ್ನ ಜಾಗತಿಕ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಸಲುವಾಗಿಯೇ ಅಮೇರಿಕಾ ಕಳೆದ ಅನೇಕ ವರ್ಷಗಳಿಂದ ಪಾಕ್ ಗೆ ಆರ್ಥಿಕ ಸಹಾಯ ಮಾಡುತ್ತಿತ್ತು ಎಂಬುದು ಈಗ ಬಹಿರಂಗಗೊಂಡಿದೆ. ಈ ಬಗ್ಗೆ ಅಮೇರಿಕಾ ಏನು ಹೇಳುತ್ತದೆ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation