ಸರಕಾರದ ಮೇಲೆ ‘ಅವಾಮಿ ಲೀಗ್’ ಆರೋಪ

ಬಾಂಗ್ಲಾದೇಶ – ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಿರಂತರವಾಗಿ ಹೆಚ್ಚುತ್ತಿದೆ. ಇತ್ತೀಚೆಗೆ, ನರೈಲ್ ಜಿಲ್ಲೆಯ ಮೌಲಿ ಪ್ರದೇಶದ ನಿವಾಸಿ ಕಿಂಕೋರ್ ದಾಸ್ ಅವರನ್ನು ಅಪಹರಿಸಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
೧. ಕಿಂಕೋರ್ ದಾಸ್ ಅಪಹರಣವಾದ ಮರುದಿನ ಪತ್ತೆಯಾದರು; ಆದರೆ ಅವರ ದೇಹದ ಮೇಲೆ ಹಲ್ಲೆಯ ಗಂಭೀರ ಗಾಯಗಳಿದ್ದವು. ಅವರ ದ್ವಿಚಕ್ರ ವಾಹನ, ಚಿನ್ನದ ಸರ ಮತ್ತು ಉಂಗುರವನ್ನು ಕಳವು ಮಾಡಲಾಗಿತ್ತು.
೨. ಈ ಘಟನೆಗೆ ಪ್ರತಿಕ್ರಿಯಿಸಿದ ‘ಅವಾಮಿ ಲೀಗ್’ನ ನಾಯಕರೊಬ್ಬರು, ‘‘ಕಿಂಕೋರ್ ದಾಸ್ ಅವರ ಘಟನೆ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯವು ಭಯಭೀತರಾಗಿರುವುದನ್ನು ತೋರಿಸುತ್ತದೆ. ಕಿಂಕೋರ್ ದಾಸ್ ಅವರನ್ನು ಅಪಹರಿಸಲಾಯಿತು, ಹಿಂಸಿಸಲಾಯಿತು ಮತ್ತು ಲೂಟಿ ಮಾಡಲಾಯಿತು. ಇದು ಕೇವಲ ಒಂದು ಘಟನೆಯಲ್ಲ; ಇದು ದೇಶದ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದೌರ್ಜನ್ಯದ ಭಯಾನಕ ಪ್ರತಿಬಿಂಬವಾಗಿದೆ” ಎಂದರು.
೩. ದೇಶದ ಹಂಗಾಮಿ ಸರಕಾರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ‘ಅವಾಮಿ ಲೀಗ್’ , ಜಮಾತ್-ಎ-ಇಸ್ಲಾಮಿ ಬೆಂಬಲಿತ ಮೊಹಮ್ಮದ್ ಯುನೂಸ್ ಅವರ ಕಾನೂನುಬಾಹಿರ ಆಡಳಿತದಲ್ಲಿ ದೇವಸ್ಥಾನಗಳನ್ನು ಅಪವಿತ್ರಗೊಳಿಸುವುದು, ವಿಗ್ರಹಗಳನ್ನು ಒಡೆಯುವುದು ಮತ್ತು ಉದ್ದೇಶಪೂರ್ವಕ ಹಿಂಸಾಚಾರ ನಡೆಸುವುದು ಸಾಮಾನ್ಯವಾಗಿದೆ. ಇಲ್ಲಿ ‘ನ್ಯಾಯ’ ಎಂಬ ಪದವನ್ನೇ ಮರೆತಂತೆ ಕಾಣುತ್ತಿದೆ. ಇದೆಂತಹ ಅಧಿಕಾರ, ಅಲ್ಪಸಂಖ್ಯಾತರಾಗಿರುವುದೇ ಅಪರಾಧವೇ? ಎಂದು ಪಕ್ಷ ಪ್ರಶ್ನಿಸಿದೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮೌನವಾಗಿವೆ! ಅವರ ಪಾಲಿಗೆ ಹಿಂದೂಗಳು ಮನುಷ್ಯರಲ್ಲವೇ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara