ಪ್ರಧಾನಿ ಮೋದಿ ಅವರು ‘ಐ.ಎನ್.ಎಸ್. (ಇಂಡಿಯನ್ ನೇವಲ್ ಶಿಪ್) ವಿಕ್ರಾಂತ್’ನಲ್ಲಿ ದೀಪಾವಳಿ ಆಚರಣೆ ವೇಳೆ ನೀಡಿದ ಮಾಹಿತಿ!

ವಾಸ್ಕೋ (ಗೋವಾ) – ಇಂದು ದೇಶವು ನಕ್ಸಲ್ ಭಯೋತ್ಪಾದನೆಯಿಂದ ಮುಕ್ತವಾಗುವ ಹಾದಿಯಲ್ಲಿದೆ. ೨೦೧೪ ರ ಮೊದಲು ದೇಶಾದ್ಯಂತ ೧೨೫ ಜಿಲ್ಲೆಗಳು ಮಾವೋವಾದಿ ಹಿಂಸಾಚಾರದಿಂದ ಪ್ರಭಾವಿತವಾಗಿದ್ದವು. ೧೧ ವರ್ಷಗಳ ಕಠಿಣ ಪರಿಶ್ರಮದ ನಂತರ ಈ ಸಂಖ್ಯೆ ಕಡಿಮೆಯಾಗಿದೆ. ಈಗ ಕೇವಲ ೧೧ ಜಿಲ್ಲೆಗಳು ‘ಮಾವೋವಾದ ಮುಕ್ತ’ವಾಗುವುದರಿಂದ ಉಳಿದಿವೆ. ೧೦೦ ಕ್ಕೂ ಹೆಚ್ಚು ಜಿಲ್ಲೆಗಳು ‘ಮಾವೋವಾದ ಮುಕ್ತ’ ದೀಪಾವಳಿಯನ್ನು ಆಚರಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೌಕಾಪಡೆಯೊಂದಿಗೆ ಅರಬ್ಬೀ ಸಮುದ್ರದಲ್ಲಿರುವ ಭಾರತೀಯ ವಿಮಾನವಾಹಕ ಯುದ್ಧನೌಕೆ ‘ಐ.ಎನ್.ಎಸ್. (ಇಂಡಿಯನ್ ನೇವಲ್ ಶಿಪ್) ವಿಕ್ರಾಂತ್’ನಲ್ಲಿ ದೀಪಾವಳಿ ಆಚರಿಸುವಾಗ ಮಾಹಿತಿ ನೀಡಿದರು. ಪ್ರಧಾನಿ ಅವರು ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿರುವುದು ಇದು ೧೨ ನೇ ಬಾರಿಯಾಗಿದೆ.
Celebrating Diwali with our brave Navy personnel on board the INS Vikrant. https://t.co/5J9XNHwznH
— Narendra Modi (@narendramodi) October 20, 2025
ಪ್ರಧಾನಿ ಮೋದಿ ಅವರು ಮಂಡಿಸಿದ ಅಂಶಗಳು
‘ವಿಕ್ರಾಂತ್’ ಪಾಕಿಸ್ತಾನದ ರಾತ್ರಿ ನಿದ್ರೆ ಕೆಡಿಸಿತು!
ಸ್ವದೇಶಿ ನಿರ್ಮಿತ ‘ಐ.ಎನ್.ಎಸ್. ವಿಕ್ರಾಂತ್’ ದೇಶಕ್ಕೆ ದೊರೆತ ದಿನ, ನೌಕಾಪಡೆಯು ಗುಲಾಮಗಿರಿಯ ಒಂದು ಪ್ರಮುಖ ಸಂಕೇತವನ್ನು ಕೈಬಿಟ್ಟಿತು ಎಂದು ನಿಮಗೆ ನೆನಪಿರಬಹುದು. ಛತ್ರಪತಿ ಶಿವಾಜಿ ಮಹಾರಾಜರ ಪ್ರೇರಣೆಯಿಂದ ನೌಕಾಪಡೆಯು ಹೊಸ ಧ್ವಜವನ್ನು ಅಳವಡಿಸಿಕೊಂಡಿತು. ಇಂದು ನಮ್ಮ ಯುದ್ಧನೌಕೆ ‘ವಿಕ್ರಾಂತ್’ ಆತ್ಮನಿರ್ಭರ ಭಾರತ ಮತ್ತು ‘ಮೇಡ್ ಇನ್ ಇಂಡಿಯಾ’ದ ಪ್ರಮುಖ ಸಂಕೇತವಾಗಿದೆ. ವಿಕ್ರಾಂತ್ ಇತ್ತೀಚೆಗೆ ಪಾಕಿಸ್ತಾನದ ರಾತ್ರಿಯ ನಿದ್ರೆಯನ್ನು ಕೆಡಿಸಿತು. ‘ಐ.ಎನ್.ಎಸ್. ವಿಕ್ರಾಂತ್’ ಎಂಬುದು ಶತ್ರುವಿನ ಶಾಂತಿಯನ್ನು ಕಸಿದುಕೊಳ್ಳುವ ಸಾಮರ್ಥ್ಯವುಳ್ಳ ಹೆಸರಾಗಿದೆ.
ಪ್ರತಿ ೪೦ ದಿನಗಳಿಗೊಮ್ಮೆ ನೌಕಾಪಡೆಗೆ ಸ್ವದೇಶಿ ಯುದ್ಧನೌಕೆ ಸೇರ್ಪಡೆ!
ದೇಶವಾಸಿಗಳೇ, ನೀವು ಎಲ್ಲಿ ಕೇಳುತ್ತಿದ್ದೀರೋ ಅಲ್ಲಿ ಈ ಅಂಕಿಅಂಶವನ್ನು ನೆನಪಿನಲ್ಲಿಡಿ. ಇಂದು ನಮ್ಮ ಸಾಮರ್ಥ್ಯ ಏನು? ಸರಾಸರಿ ಪ್ರತಿ ೪೦ ದಿನಗಳಿಗೊಮ್ಮೆ ಒಂದು ಸ್ವದೇಶಿ ಯುದ್ಧನೌಕೆ ಅಥವಾ ಜಲಾಂತರ್ಗಾಮಿ ನೌಕೆಯು ನೌಕಾಪಡೆಗೆ ಸೇರಿಸಲ್ಪಡುತ್ತಿದೆ. ನಮ್ಮ ಸ್ವದೇಶಿ ‘ಬ್ರಹ್ಮೋಸ್’ ಮತ್ತು ‘ಆಕಾಶ್’ ಕ್ಷಿಪಣಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ‘ಬ್ರಹ್ಮೋಸ್’ ಎಂಬ ಹೆಸರು ಕೇಳಿದರೆ ಅನೇಕ ಜನರು ಚಿಂತೆಗೊಳಗಾಗುತ್ತಾರೆ. ಅನೇಕ ದೇಶಗಳು ಈ ಕ್ಷಿಪಣಿಗಳನ್ನು ಖರೀದಿಸಲು ಬಯಸುತ್ತವೆ. ಭಾರತವು ಮೂರೂ ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ರಫ್ತು ಮಾಡುವ ಸಾಮರ್ಥ್ಯವನ್ನು ನಿರ್ಮಿಸುತ್ತಿದೆ. ನಾವು ಪ್ರಮುಖ ರಫ್ತುದಾರ ದೇಶಗಳಲ್ಲಿ ಒಂದಾಗಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ರಕ್ಷಣಾ ರಫ್ತು ೩೦ ಪಟ್ಟು ಹೆಚ್ಚಾಗಿದೆ, ಎಂದು ಹೇಳಿದರು.
ನನ್ನ ಪ್ರೀತಿಪಾತ್ರರೊಂದಿಗೆ ದೀಪಾವಳಿ ಆಚರಿಸುವ ಅಭ್ಯಾಸ!

ದೀಪಾವಳಿಯ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ದೀಪಾವಳಿ ಆಚರಿಸಲು ಬಯಸುತ್ತಾರೆ. ನನಗೂ ನನ್ನ ಕುಟುಂಬದಲ್ಲಿ ದೀಪಾವಳಿ ಆಚರಿಸುವ ಅಭ್ಯಾಸವಾಗಿದೆ. ಅದಕ್ಕಾಗಿಯೇ ನಾನು ನಿಮ್ಮ ಮಧ್ಯೆ ದೀಪಾವಳಿ ಆಚರಿಸಲು ಬರುತ್ತೇನೆ. ಈ ಬಾರಿ ನಾನು ನಿಮ್ಮೊಂದಿಗಿದ್ದೇನೆ. ‘ಐ.ಎನ್.ಎಸ್. ವಿಕ್ರಾಂತ್’ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತಿದ್ದಾಗ, ನಾನು ಹೇಳಿದ್ದೆ, ‘ವಿಕ್ರಾಂತ್’ ‘ವಿರಾಟ್’, ಇದು ಅಸಾಧಾರಣವಾಗಿದೆ. ಅವು ಕೇವಲ ಯುದ್ಧನೌಕೆಗಳಲ್ಲ, ಬದಲಿಗೆ ೨೧ ನೇ ಶತಮಾನದ ಭಾರತದ ಕಠಿಣ ಪರಿಶ್ರಮ ಮತ್ತು ಪ್ರಭಾವದ ಫಲಿತಾಂಶವಾಗಿದೆ, ಎಂದು ಹೇಳಿದರು.
ನಾನು ಸೈನಿಕರಿಂದ ಬಹಳಷ್ಟು ಕಲಿತಿದ್ದೇನೆ!
ನಾನು ನಿನ್ನೆಯಿಂದ ನಿಮ್ಮೊಂದಿಗಿದ್ದೇನೆ. ನಾನು ನಿಮ್ಮ ಪ್ರತಿಯೊಬ್ಬರಿಂದಲೂ ಏನನ್ನಾದರೂ ಕಲಿತಿದ್ದೇನೆ. ನಿಮ್ಮ ತಪಸ್ಸು, ನಿಮ್ಮ ಭಕ್ತಿ, ನಿಮ್ಮ ಸಮರ್ಪಣೆ ಎಷ್ಟು ಉನ್ನತವಾಗಿದೆ ಎಂದರೆ, ನಾನು ಅದನ್ನು ಜೀವಿಸಲು ಸಾಧ್ಯವಾಗಲಿಲ್ಲ; ಆದರೆ ನಾನು ಅದನ್ನು ಅರ್ಥಮಾಡಿಕೊಂಡಿದ್ದೇನೆ. ಅದನ್ನು ಜೀವಿಸುವುದು ಎಷ್ಟು ಕಷ್ಟಕರ ಎಂದು ನಾನು ಊಹಿಸಬಲ್ಲೆ. ನಿಮ್ಮ ಹತ್ತಿರ ಇರುವುದರಿಂದ ನಾನು ನಿಮ್ಮ ಉಸಿರನ್ನು ಅನುಭವಿಸಬಹುದು, ನಿಮ್ಮ ಕಣ್ಣುಗಳಲ್ಲಿನ ಹೊಳಪನ್ನು ನೋಡಬಹುದು, ಎಂದು ಹೇಳಿದರು.
ನೌಕಾಪಡೆಯೊಂದಿಗೆ ದೀಪಾವಳಿ ಆಚರಿಸುವುದು ನನ್ನ ಸೌಭಾಗ್ಯ!
ಒಂದೆಡೆ ವಿಶಾಲ ಮಹಾಸಾಗರವಿದೆ ಮತ್ತು ಇನ್ನೊಂದೆಡೆ ಭಾರತ ಮಾತೆಯ ವೀರ ಸೈನಿಕರ ಅಪಾರ ಶಕ್ತಿ ಇದೆ. ಒಂದು ಕಡೆ ಅನಂತ ಆಕಾಶವಿದೆ ಮತ್ತು ಇನ್ನೊಂದು ಕಡೆ ಅನಂತ ಶಕ್ತಿಯ ಮೂರ್ತ ರೂಪವಾದ ‘ಐ.ಎನ್.ಎಸ್. ವಿಕ್ರಾಂತ್’ ಎಂಬ ನಮ್ಮ ದಿವ್ಯ ದೀಪಗಳ ದೀಪಮಾಲೆ ಇದೆ. ಈ ಬಾರಿ ನಾನು ನೌಕಾಪಡೆಯ ನಿಮ್ಮೆಲ್ಲಾ ವೀರ ಸೈನಿಕರ ಮಧ್ಯೆ ದೀಪಾವಳಿಯ ಪವಿತ್ರ ಹಬ್ಬವನ್ನು ಆಚರಿಸುತ್ತಿದ್ದೇನೆ, ಎಂದು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”