ವಿಶ್ವಸಂಸ್ಥೆಯನ್ನು ಟೀಕಿಸಿದ ವಿದೇಶಾಂಗ ಸಚಿವ ಜೈಶಂಕರ್

ನವದೆಹಲಿ – ವಿಶ್ವಸಂಸ್ಥೆಯು ಇನ್ನೂ ೧೯೪೫ರ ಕಾಲದ ಪ್ರತಿಬಿಂಬವನ್ನು ತೋರಿಸುತ್ತಿದೆ. ಅಭಿವೃದ್ಧಿಶೀಲ ದೇಶಗಳ ಧ್ವನಿಯನ್ನು ಉನ್ನತೀಕರಿಸುವುದು, ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯ ನಿಜವಾದ ಅಳತೆಗೋಲಾಗಿದೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಇಲ್ಲಿ ಮಾತನಾಡುವಾಗ ಸ್ಪಷ್ಟಪಡಿಸಿದರು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗಾಗಿ ಸೈನಿಕರನ್ನು ಕಳುಹಿಸುವ ದೇಶಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ವಿಶ್ವಸಂಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ತರುವಂತೆ ವಿದೇಶಾಂಗ ಸಚಿವರು ಮತ್ತೊಮ್ಮೆ ಆಗ್ರಹಿಸಿದರು.
🌍 “UN Needs an Update, Not a Tribute to 1945” – S. Jaishankar 🇮🇳
At the UN Peacekeeping Conference in Delhi, EAM @DrSJaishankar said:
🗣️ The UN is still stuck in 1945; it must evolve to reflect today’s world.
🌏 Its credibility depends on amplifying voices of developing… pic.twitter.com/1udYUbBFqP
— Sanatan Prabhat (@SanatanPrabhat) October 16, 2025
ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಮಾತನಾಡಿ,
೧. ಕಾಲಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ತರಲು ಸಾಧ್ಯವಾಗದ ಸಂಸ್ಥೆಗಳು ಅಳಿದು ಹೋಗುವ ಅಪಾಯವಿರುತ್ತದೆ. ವಿಶ್ವಸಂಸ್ಥೆ ಪರಿಣಾಮಕಾರಿ ಆಗಬೇಕಾದರೆ, ಅದರಲ್ಲಿ ಸುಧಾರಣೆಗಳನ್ನು ಮಾಡಬೇಕಾಗುವುದು. ವಿಶ್ವಸಂಸ್ಥೆಯನ್ನು ಹೆಚ್ಚು ಅಂತರ್ಗತ, ಪ್ರಜಾಪ್ರಭುತ್ವದ ಮತ್ತು ಇಂದಿನ ಜಗತ್ತನ್ನು ಪ್ರತಿನಿಧಿಸುವಂತೆ ಮಾಡಬೇಕಾಗಿದೆ.
೨. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಸಹ ಬದಲಾವಣೆಯನ್ನು ನಿರೀಕ್ಷಿಸುತ್ತಿವೆ. ಭದ್ರತಾ ಮಂಡಳಿಯ ವಿಸ್ತರಣೆ ಆಗುವುದು ಸಹ ಅತ್ಯಗತ್ಯವಾಗಿದೆ.
೩. ನಮ್ಮ ಶಾಂತಿಪಾಲಕ ಪಡೆ ಬಲಿಷ್ಠ ಪಡೆಯಾಗಿದೆ. ಮಾನವೀಯ ನೆರವು ನೀಡಲು ಈ ಧೈರ್ಯಶಾಲಿ ಪುತ್ರರು ಮತ್ತು ಪುತ್ರಿಯರು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ. ಇಂದು ನಾನು ಆ ೪ ಸಾವಿರಕ್ಕೂ ಹೆಚ್ಚು ಶಾಂತಿಪಾಲಕ ಸೈನಿಕರನ್ನು ಸ್ಮರಿಸುತ್ತೇನೆ, ಅವರು ಅತ್ಯುನ್ನತ ತ್ಯಾಗವನ್ನು ಮಾಡಿದ್ದಾರೆ ಎಂದರು.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !