
| ಆರೋಗ್ಯಪೂರ್ಣ ಜೀವನಕ್ಕಾಗಿ ವ್ಯಾಯಾಮ – ಭಾಗ ೨೭ |
ಆಧುನಿಕ ಜೀವನಶೈಲಿಯಿಂದ ಉಂಟಾಗುವ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ ಒಂದು ಪರಿಣಾಮಕಾರಿ ಪರಿಹಾರ ವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ತ್ವಗಳು ಇಂದಿಗೂ ಅಷ್ಟೇ ಉಪಯುಕ್ತ ವಾಗಿದ್ದು, ನಾವು ಅವುಗಳಿಂದ ಪ್ರೇರಣೆ ಪಡೆಯಬಹುದು. ಈ ಲೇಖನಮಾಲೆಯಲ್ಲಿ ನಾವು ವ್ಯಾಯಾಮದ ಮಹತ್ವ, ವ್ಯಾಯಾಮದ ಬಗ್ಗೆ ಇರುವ ಸಂದೇಹ ನಿವಾರಣೆ, ‘ಎರ್ಗೊನಾಮಿಕ್ಸ್’ ತತ್ವ ಮತ್ತು ಕಾಯಿಲೆಗಳಿಗೆ ಅನುಗುಣವಾದ ಸರಿಯಾದ ವ್ಯಾಯಾಮದ ಮಾಹಿತಿಯನ್ನು ನೀಡುತ್ತೇವೆ.

ಹಿಂದಿನ ಲೇಖನದಲ್ಲಿ ನಾವು ಪ್ರತಿದಿನ ನಡೆಯುವುದರಿಂದಾಗುವ ಲಾಭಗಳು ಮತ್ತು ನಡೆಯುವ ಅವಶ್ಯಕತೆಯ ಬಗ್ಗೆ ಓದಿದ್ದೇವೆ. ಇಂದು ನಾವು ನಡೆಯುವ ಸರಿಯಾದ ಮತ್ತು ತಪ್ಪು ವಿಧಾನಗಳು ಮತ್ತು ಅವುಗಳಿಂದಾಗುವ ಲಾಭ ಹಾಗೂ ಹಾನಿಗಳನ್ನು ಅರ್ಥಮಾಡಿಕೊಳ್ಳೋಣ.
೧. ನಡೆಯುವಾಗ ದೇಹದ ರಚನೆ ಹೇಗಿರಬೇಕು ?
‘ವೇಗವಾಗಿ ನಡೆಯುವುದರಿಂದ ಲಾಭವಾಗುವುದಂತೂ ನಿಜ; ಆದರೆ ಆ ಸಮಯದಲ್ಲಿ ‘ದೇಹರಚನೆಯ ಮೇಲೆ ಅದರ ಪರಿಣಾಮವು ಅವಲಂಬಿಸಿರುತ್ತದೆ. ನಮ್ಮ ಕೀಲುಗಳ ಮೇಲೆ ಯಾವ ರೀತಿ ಭಾರ ಅಥವಾ ಒತ್ತಡ ಬೀಳುತ್ತದೆ, ಎಂಬುದರ ಮೇಲೆ ಅವರ ಆಯುಷ್ಯವು ಅವಲಂಬಿಸಿರುತ್ತದೆ. ಆದ್ದರಿಂದ ನಡೆಯುವಾಗ ದೇಹದ ಸ್ಥಿತಿಯನ್ನು ಯೋಗ್ಯವಾಗಿ ಇಡುವುದು ಮತ್ತು ನಡೆಯುವ ಪದ್ಧತಿಯೂ ಯೋಗ್ಯವಾಗಿರುವುದು ಅತ್ಯಾವಶ್ಯಕವಾಗಿದೆ.
೨. ಅಯೋಗ್ಯ ಪದ್ಧತಿಯ ನಡಿಗೆಯಿಂದಾಗುವ ಹಾನಿ
ಸದ್ಯ ಗಣಕಯಂತ್ರದ ಕೆಲಸಗಳಿಂದ ಹೆಚ್ಚಿನವರಿಗೆ ತಿಳಿಯದೇ ಬಾಗಿ ಕುಳಿತುಕೊಳ್ಳುವುದು, ಹಾಗೆಯೇ ಕೆಲವರಿಗೆ ಸ್ವಲ್ಪ ಬಾಗಿ ನಡೆಯುವ ಅಭ್ಯಾಸವಾಗಿರುತ್ತದೆ. ಆದ್ದರಿಂದ ಉಸಿರಾಟ, ಜೀರ್ಣಕ್ರಿಯೆ ಇತ್ಯಾದಿಗಳ ಮೇಲೆ ದುಷ್ಪರಿಣಾಮವಂತೂ ಆಗುತ್ತದೆ ಮತ್ತು ಅದರೊಂದಿಗೆ ಅನೇಕ ರೀತಿಯ ನೋವುಗಳೂ ಉದ್ಭವಿಸುತ್ತವೆ.
೩. ಯೋಗ್ಯ ರೀತಿಯಲ್ಲಿ ನಡೆಯುವುದರಿಂದಾಗುವ ಲಾಭ
ಅ. ಜೀರ್ಣಶಕ್ತಿ ಸುಧಾರಿಸುತ್ತದೆ, ಹಾಗೆಯೇ ಯಕೃತ್ತು ಮತ್ತು ಕರಳುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಆದ್ದರಿಂದ ಮಲಬದ್ಧತೆ, ಗ್ಯಾಸ್, ತಲೆನೋವು, ಶೀತ, ನೆಗಡಿ, ದಮ್ಮುಗಳಂತಹ ಅನೇಕ ರೋಗಗಳು ವಾಸಿಯಾಗಲು ಸಹಾಯವಾಗುತ್ತದೆ.
ಆ. ಬೆಳಗ್ಗೆ ಅಥವಾ ಸಾಯಂಕಾಲ ವಾಯುವಿಹಾರದಲ್ಲಿ ನಡೆಯುವುದರಿಂದ ಹೊಸ ಚೈತನ್ಯ, ಸ್ಪೂರ್ತಿ, ಉತ್ಸಾಹ ಮತ್ತು ಆರೋಗ್ಯ ದೊರಕುತ್ತದೆ.
೪. ನಡೆಯುವ ಯೋಗ್ಯ ಪದ್ಧತಿ
ಅ. ನಡೆಯುವಾಗ ಬೆನ್ನು ನೇರ ಮಾಡಿ ಮತ್ತು ಭುಜಗಳು ಹಿಂದಕ್ಕೆ ಇರಬೇಕು. (‘ತಲೆಗೆ ಒಂದು ಹಗ್ಗ ಕಟ್ಟಿ ಅದು ನಮ್ಮನ್ನು ಮೇಲಕ್ಕೆ ಎಳೆಯುತ್ತಿದೆ’ ಎಂದು ಕಲ್ಪಿಸಿಕೊಂಡರೆ ನೇರವಾಗಲು ಸುಲಭವಾಗುತ್ತದೆ.)
ಆ. ನಡೆಯುವಾಗ ಕೈಗಳ ಚಲನೆ ಸ್ವಾಭಾವಿಕವಾಗಿರುವುದು ಆವಶ್ಯಕವಾಗಿದೆ. ಇದರಿಂದ ನಡೆಯಲು ವೇಗ ಸಿಗುವುದರ ಜೊತೆಗೆ, ಸಂಪೂರ್ಣ ದೇಹಕ್ಕೂ ವ್ಯಾಯಾಮವಾಗುತ್ತದೆ, ಇಲ್ಲದಿದ್ದರೆ ಕೇವಲ ಕಾಲುಗಳಿಗೆ ಮಾತ್ರ ಕಸರತ್ತು ಆಗುತ್ತದೆ.
ಇ. ಕಾಲು ಮುಂದೆ ಇಡುವಾಗ ಕಾಲಿನ ಹಿಮ್ಮಡಿ ಮೊದಲು ನೆಲಕ್ಕೆ ತಾಗಬೇಕು ಮತ್ತು ನಂತರ ಆ ಕಾಲಿನ ಅಂಗಾಲು ನೆಲಕ್ಕೆ ತಾಗಬೇಕು, ಈ ರೀತಿಯಲ್ಲಿ ಕಾಲುಗಳನ್ನು ಇಡಬೇಕು. ಸುಲಭವಾಗಿ ಇಡಲು ಸಾಧ್ಯವಾಗುವಷ್ಟು ದೂರದಲ್ಲಿ ಕಾಲುಗಳನ್ನು ಇಡಬೇಕು.
ಈ. ಹೊಟ್ಟೆಯ ಸ್ನಾಯುಗಳು ಮತ್ತು ಅಂಗಾಂಗಗಳಿಗಾಗಿ ತೊಡೆಯನ್ನು ಮೇಲೆತ್ತಿ ಕಾಲು ಮುಂದಿಡುವುದು ಅತ್ಯಂತ ಮಹತ್ವದ್ದಾಗಿದೆ, ಹಾಗೆಯೇ ದೇಹದ ಮೇಲೆ ಸರಿಯಾದ ಒತ್ತಡ ಬೀಳುವುದೂ ಆವಶ್ಯಕವಾಗಿದೆ.
ಉ. ಸಾಧ್ಯವಿದ್ದರೆ ಬರಿಗಾಲಿನಲ್ಲಿ ನಡೆಯಬೇಕು ಮತ್ತು ಬಟ್ಟೆಗಳನ್ನು ಸಡಿಲವಾಗಿ ಧರಿಸಬೇಕು.
೫. ನಡೆಯುವುದಕ್ಕೆ ತಿನ್ನುವುದು-ಕುಡಿಯುವುದು, ಋತು-ಕಾಲ ಅಥವಾ ಸಮಯದ ಯಾವುದೇ ನಿರ್ಬಂಧವಿಲ್ಲ.
(ಸೌಜನ್ಯ : ಮಾಸಿಕ ‘ವ್ಯಾಯಾಮ’, ಶಂ. ಧೋ. ವಿದ್ವಾಂಸ, ಸಂಪಾದಕ, ೧೫.೨.೧೯೫೭)
೬. ಕೆಲವು ಅಯೋಗ್ಯ ಕೃತಿಗಳು
‘ಸದ್ಯ ಬಹಳಷ್ಟು ಜನರು ನಡೆಯುವಾಗ ಕಾಲುಗಳನ್ನು ನೆಲಕ್ಕೆ ಉಜ್ಜುತ್ತ ಅಥವಾ ಕೇವಲ ಮೊಣಕಾಲುಗಳನ್ನು ಬಾಗಿಸಿ ನಡೆಯುತ್ತಾರೆ. ತೊಡೆಗಳನ್ನು ಮೇಲೆ ಎತ್ತಿ ಹಾಕಲು ಬೇಸರವಾಗುತ್ತದೆ ಅಥವಾ ಅದರ ಅರಿವೇ ಇಲ್ಲದಿರುವುದರಿಂದ ಅವರ ಗಮನಕ್ಕೆ ಬರುವುದಿಲ್ಲ.
೭. ಪರಿಹಾರ
ಪ್ರತಿದಿನ ಸಾಕಷ್ಟು ಸಮಯ ಸಿಗುತ್ತಿದ್ದರೆ, ಸಾಧ್ಯವಾದಷ್ಟು ಅಲ್ಲಿ ವಾಹನವನ್ನು ಬಳಸಬಾರದು, ಉದಾ. ಹತ್ತಿರದ ಅಂಗಡಿಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುವ ಬದಲು ನಡೆದುಕೊಂಡು ಹೋಗುವುದು ಮತ್ತು ರಜೆಯ ದಿನಗಳಲ್ಲಿ ಹೆಚ್ಚು ನಡೆಯುವುದು (ಉದಾ. ಪ್ರತಿದಿನ ೩-೪ ಕಿ.ಮೀ. ನಡೆದರೆ ರಜೆಯಲ್ಲಿ ೧೦-೧೨ ಕಿ.ಮೀ. ನಡೆಯಬೇಕು), ವಾರವಿಡೀ ಅದರ ಲಾಭವಾಗುತ್ತದೆ.
೮. ಮಹತ್ವದ ಸೂಚನೆ
ಯಾರಾದರೊಬ್ಬರಿಗೆ ಉಸಿರಾಟ, ಹೃದಯಕ್ಕೆ ಸಂಬಂಧಿಸಿದ ಅಥವಾ ಇತರ ಯಾವುದೇ ಗಂಭೀರ ರೋಗಗಳಿದ್ದರೆ ಅವರು ವೈದ್ಯಕೀಯ ಸಲಹೆ ಪಡೆದೇ ನಡೆಯಲು ಪ್ರಾರಂಭಿಸಬೇಕು.
– ಸೌ. ಅಕ್ಷತಾ ರೆಡಕರ, ಭೌತಿಕೋಪಚಾರ ತಜ್ಞರು, ಫೋಂಡಾ, ಗೋವಾ. (೪.೧೧.೨೦೨೪)
‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (‘ಪಿ.ಸಿ.ಒ.ಡಿ.’) ಅಥವಾ ‘ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (‘ಪಿ.ಸಿ.ಓ.ಸಿ.’) ಮತ್ತು ಆಯುರ್ವೇದ !
ಏಕಾಗ್ರತೆ ಮತ್ತು ಸಕಾರಾತ್ಮಕವಿದ್ದು ಮಾಡಲಾಗುವ ವ್ಯಾಯಾಮವು ಹೆಚ್ಚು ಗುಣಾತ್ಮಕವಾಗುತ್ತದೆ !
ಶರೀರದ ‘ಪರಿವರ್ತನೆ’ಯ ನಿಯಮ !
ಮನುಷ್ಯ, ಮನಸ್ಸು ಹಾಗೂ ಆಹಾರ
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !