
೧. ದಿನಕ್ಕೆ ೫ ರಿಂದ ೧೦ ಕಪ್‌ಗಳಷ್ಟು ಅತಿಯಾಗಿ ಕುದಿಸಿದ ಚಹಾವನ್ನು ಕುಡಿಯುವವರ ಜೀರ್ಣಶಕ್ತಿ ಕೆಟ್ಟು, ಆಮ್ಲಪಿತ್ತ, ಹೊಟ್ಟೆಯಲ್ಲಿ ಅಲ್ಸರ್, ಕೀಲುನೋವು, ಮೈಕೈನೋವು, ಮಲಬದ್ಧತೆಯಂತಹ ಅನೇಕ ರೋಗಗಳು ಬರುತ್ತವೆ.
೨. ಭಾರತೀಯರಲ್ಲಿ ಚಹಾದಲ್ಲಿ ಸಕ್ಕರೆಯನ್ನು ಹಾಕುವ ಪ್ರಮಾಣ ಜಗತ್ತಿನಲ್ಲಿಯೇ ಹೆಚ್ಚಿದೆ. ಆದುದರಿಂದ ಕುಳಿತುಕೊಂಡು ಕೆಲಸ ಮಾಡುವ ವ್ಯಕ್ತಿಗಳಿಗೆ ಮಧುಮೇಹ, ಕೊಲೆಸ್ಟ್ರಾಲ್, ಹೃದ್ರೋಗ, ಬೊಜ್ಜು ಮುಂತಾದ ಕಾಯಿಲೆಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ.
೩. ಹಾಲು-ಸಕ್ಕರೆ ಇಲ್ಲದ ಚಹಾವನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೂ, ಅದರ ಹೆಚ್ಚಿನ ಒಗರು ರುಚಿಯ ಪ್ರಮಾಣದಿಂದಾಗಿ ಮಲಬದ್ಧತೆ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಇವುಗಳಂತಹ ರೋಗಗಳು ಮತ್ತು ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಇಂತಹ ಕಾಯಿಲೆಗಳು ಹೆಚ್ಚಾಗುತ್ತವೆ.
೪. ಹಾಲು, ಸಕ್ಕರೆ ಮತ್ತು ಚಹಾಪುಡಿಯನ್ನು ಸೇರಿಸಿ ಕುದಿಸಿದ ಚಹಾವು ಕಫ, ಪಿತ್ತ ಮತ್ತು ವಾತವನ್ನು ಹೆಚ್ಚಿಸುವ, ಹಾಗೆಯೇ ಅದು ಉಷ್ಣ ಗುಣದ್ದಾಗಿದೆ.
೫. ಹೋಟೇಲಗಳಲ್ಲಿ ಮತ್ತು ಟೀ ಸ್ಟಾಲ್‌ಗಳಲ್ಲಿ ಚಹಾವನ್ನು ಅಲ್ಯೂಮಿನಿಯಮ್ ಪಾತ್ರೆಗಳಲ್ಲಿ ಕುದಿಸಲಾಗುತ್ತದೆ. ಅಲ್ಯುಮಿನಿಯಮ್ ಧಾತುವಿನಿಂದ ಖಾದ್ಯ ಪದಾರ್ಥಗಳಿಗಾಗುವ ದೀರ್ಘಕಾಲಿನ ಸಂಪರ್ಕದಿಂದಾಗಿ ‘ಸ್ಮೃತಿನಾಶ’ದಂತಹ ತೀವ್ರ ರೋಗಗಳು ಉದ್ಭವಿಸುತ್ತದೆ.
೬. ಚಹಾವನ್ನು ದಿನಕ್ಕೆ ೨ ಬಾರಿ ಕುಡಿದರೆ (೧೦ ರೂಪಾಯಿಗಳ ಒಂದು ಚಹಾ) ವರ್ಷಕ್ಕೆ ೭,೩೦೦ ರೂಪಾಯಿಗಳಾಗುತ್ತವೆ. ಅಷ್ಟು ರೂಪಾಯಿಗಳ ಹಾನಿ ಮಾಡಿದಂತಾಗುತ್ತದೆ.
೭. ಭಾರತದಂತಹ ಸಮಶೀತೋಷ್ಣ ದೇಶದಲ್ಲಿ ಚಹಾವು ಯಾವಾಗಲೂ, ಯಾವುದೇ ಸಮಯದಲ್ಲಿ ಹೆಚ್ಚು ಕುಡಿಯಲು ಯೋಗ್ಯವಾದ ಪಾನೀಯವಲ್ಲ.
೮. ಚಹಾದ ರುಚಿ ಒಗರು ಇರುವುದರಿಂದ ಅದು ಮಲಬದ್ಧತೆಯನ್ನು ನಿರ್ಮಿಸುತ್ತದೆ. ಕೆಲವರಿಗೆ ಚಹಾ ಕುಡಿಯದಿದ್ದರೆ ಹೊಟ್ಟೆ ಸ್ವಚ್ಛವಾಗುವುದಿಲ್ಲ, ಇದು ಅಭ್ಯಾಸದಿಂದಾಗಿ ಆಗುತ್ತದೆ. ಮಲವಿಸರ್ಜನೆಯ ವೇಗವನ್ನು ಹೆಚ್ಚಿಸುವುದು ಚಹಾದ ಕೆಲಸವಲ್ಲ. ಚಹಾ ರಕ್ತದಲ್ಲಿನ ಆಮ್ಲತೆಯನ್ನು ಹೆಚ್ಚಿಸುತ್ತದೆ.
೯. ನಿಯಮಿತವಾಗಿ ಚಹಾ ಕುಡಿಯುವುದರಿಂದ ಮೂಳೆಗಳು ದುರ್ಬಲವಾಗುತ್ತವೆ, ರಕ್ತನಾಳಗಳು ಸಂಕುಚಿತಗೊಂಡು ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ಆಮ್ಲಪಿತ್ತದ ತೊಂದರೆ ಹೆಚ್ಚಾಗುತ್ತದೆ.
೧೦. ಚಹಾದೊಂದಿಗೆ ನಾವು ಕೆಲವು ತಿಂಡಿಗಳನ್ನು ತಿನ್ನುತ್ತೇವೆ. ಆ ತಿಂಡಿಗಳಲ್ಲಿ ಉಪ್ಪು ಇದ್ದರೆ ಚಹಾದಲ್ಲಿನ ಸಕ್ಕರೆ ಮತ್ತು ಹಾಲಿಗೆ ಉಪ್ಪಿನ ಸಂಪರ್ಕ ಬರುವುದರಿಂದ ಚಹಾ ಶರೀರಕ್ಕೆ ಮಾರಕವಾಗುತ್ತದೆ.
೧೧. ಚಹಾವು ಸರಾಯಿಯಷ್ಟೇ ಅಪಾಯಕಾರಿಯಾಗಿದೆ ಮತ್ತು ಅದರ ಗಂಭೀರ ಪರಿಣಾಮಗಳು ಸರಾಯಿಯಷ್ಟೇ ದೇಹಕ್ಕೆ ಅಪಾಯಕಾರಿಯಾಗಿವೆ.
– ವೈದ್ಯೆ (ಸೌ.) ಮುಕ್ತಾ ಲೋಟಲೀಕರ, ಪಂಚಮ ಆಯುರ್ವೇದ, ಪುಣೆ. (೨೪.೯.೨೦೨೫)
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !