ಶಬರಿಮಲೆ ದೇವಸ್ಥಾನದಿಂದ ಚಿನ್ನ ನಾಪತ್ತೆಯಾದ ಪ್ರಕರಣದ ಕುರಿತು ಕೇರಳ ಹೈಕೋರ್ಟ್ ನ ಅಭಿಪ್ರಾಯ

ತಿರುವನಂತಪುರಂ (ಕೇರಳ) – ಕೇರಳದ ಪ್ರಸಿದ್ಧ ಶಬರಿಮಲೆ ದೇವಾಲಯದ ೨ ದ್ವಾರಪಾಲಕರ ವಿಗ್ರಹಗಳ ಮೇಲಿದ್ದ ೪ ಕೆ.ಜಿ. ಚಿನ್ನ ನಾಪತ್ತೆಯಾದ ಪ್ರಕರಣದ ಬಗ್ಗೆ ಕೇರಳ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು, ನಾಪತ್ತೆಯಾದ ೪ ಕೆ.ಜಿ. ಚಿನ್ನವನ್ನು ಒಂದು ಮದುವೆಗೆ ಬಳಸಲು ಉದ್ದೇಶಿಸಲಾಗಿತ್ತು ಮತ್ತು ಇದರ ಮಾಹಿತಿ ದೇವಾಲಯವನ್ನು ನಿಯಂತ್ರಿಸುವ ತಿರುವಾಂಕೂರು ದೇವಸ್ವಂ ಮಂಡಳಿಗೆ ಇತ್ತು ಎಂದು ಹೇಳಿದೆ. ಇದು ಕಳವಳಕಾರಿ ಘಟನೆಯಾಗಿದ್ದು ಭಕ್ತರನ್ನು ವಂಚಿಸುತ್ತಿದೆ. ಈ ಪ್ರಕರಣದ ಮುಖ್ಯ ಆರೋಪಿ ಉಣ್ಣಿಕೃಷ್ಣನ್ ಪೋಟ್ಟಿ ಅವರು ತಿರುವಾಂಕೂರು ದೇವಸ್ವಂ ಮಂಡಳಿಗೆ ಕಳುಹಿಸಿದ ಇ-ಮೇಲ್‌ನಿಂದ ಈ ಮಂಡಳಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಕಂಡುಬರುತ್ತದೆ.

೧. ವಿಚಾರಣೆಯ ಸಮಯದಲ್ಲಿ ಉಚ್ಚ ನ್ಯಾಯಾಲಯವು, ಚಿನ್ನದ ಲೇಪನ ತಜ್ಞರಾದ ಪೋಟ್ಟಿ ಅವರು ಮಂಡಳಿಯ ಅಧ್ಯಕ್ಷರಿಗೆ ಕಳುಹಿಸಿದ ಇ-ಮೇಲ್ ಅನ್ನು ಉಲ್ಲೇಖಿಸಿತು. ಅದರಲ್ಲಿ, ಶ್ರೀಕೋವಿಲ್‌ನ (ಗರ್ಭಗುಡಿಯ) ಮುಖ್ಯ ದ್ವಾರದಲ್ಲಿರುವ ದ್ವಾರಪಾಲಕರ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡಿದ ನಂತರ, ತಮ್ಮ ಬಳಿ ಸ್ವಲ್ಪ ಚಿನ್ನ ಉಳಿದಿತ್ತು, ಅದನ್ನು ಮಂಡಳಿಯ ಸಹಾಯದಿಂದ ಒಬ್ಬ ಬಡ ಯುವತಿಯ ಮದುವೆಗೆ ಬಳಸಲು ಬಯಸಿದ್ದರು ಎಂದು ತಿಳಿಸಲಾಗಿತ್ತು.
೨. ನ್ಯಾಯಾಲಯವು ಈ ಪ್ರಕರಣದ ತನಿಖೆಗಾಗಿ ಒಂದು ವಿಶೇಷ ತನಿಖಾ ದಳವನ್ನು ರಚಿಸಿದೆ. ಈ ದಳವು ೬ ವಾರಗಳೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ.
ಸಂಪಾದಕೀಯ ನಿಲುವುದೇವಾಲಯದ ಸರಕಾರೀಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ! |
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಶ್ರೀರಾಮನ ಮೇಲಿನ ಆಘಾತ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam