ಅಭ್ಯಂಗಸ್ನಾನ !

೧. ದೀಪಾವಳಿಯಲ್ಲಿ ‘ಅಭ್ಯಂಗ’ವನ್ನು ಯಾವುದರಿಂದ ಮತ್ತು ಏಕೆ ಮಾಡಬೇಕು ?

ದೀಪಾವಳಿಯಲ್ಲಿ ಮೊದಲ ಸ್ನಾನ, ಅಂದರೆ ಅಭ್ಯಂಗಸ್ನಾನಕ್ಕಾಗಿ ನಾವು ವಿವಿಧ ಉಟಣೆ ಅಥವಾ ಜಾಹೀರಾತುಗಳಲ್ಲಿ ಬರುವ ಸಾಬೂನು, ಸುಗಂಧಭರಿತ ತೈಲ ಮತ್ತು ಸುಗಂಧದ್ರವ್ಯವನ್ನು (ಅತ್ತರು) ಖರೀದಿಸುತ್ತೇವೆ. ಆದರೆ ಶಾಸ್ತ್ರಕ್ಕನುಸಾರ ಸುಗಂಧಯುಕ್ತ ಮತ್ತು ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸಿದ ಉಟಣೆಯನ್ನು ಬಳಸುವುದೇ ಹೆಚ್ಚು ಹಿತಕರವಾಗಿದೆ.

೨. ‘ಅಭ್ಯಂಗ’ಕ್ಕೆ ಮಾರುಕಟ್ಟೆಯಲ್ಲಿನ ಸುಗಂಧಯುಕ್ತ ತೈಲವನ್ನು ಬಳಸಬೇಡಿ !

ಉಟಣೆಯೇ ‘ಅಭ್ಯಂಗ’ಕ್ಕೆ ಉತ್ತಮ. ಮಾರುಕಟ್ಟೆಯಲ್ಲಿ ಲಭ್ಯವಿರುವ ಉಟಣೆಗೆ ಪರ್ಯಾಯವಾಗಿ ಮನೆಯಲ್ಲಿ ತಯಾರಿಸಿದ ಸುಗಂಧಯುಕ್ತ ತೈಲವನ್ನು ಬಳಸಬಹುದು. ಆದರೆ ಅದರ ಬದಲಾಗಿ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಿದ ಸುಗಂಧಯುಕ್ತ ತೈಲವನ್ನು ಬಳಸಲೇಬಾರದು; ಏಕೆಂದರೆ ಅದರಲ್ಲಿ ‘ಪ್ಯಾರಾಫಿನ್’ ಅಂದರೆ ‘ಕ್ರೂಡ್‌ ಆಯಿಲ್’ (ಕಚ್ಚಾ ತೈಲ) ಇರುತ್ತದೆ. ಬದಲಿಗೆ, ಸರಳವಾದ ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಭೀಮಸೇನಿ ಕರ್ಪೂರ, ಲಾವಂಚ ಬೇರು, ಗುಲಾಬಿ ದಳಗಳನ್ನು ಸೇರಿಸಿ ಕಾಯಿಸಿ, ಅದನ್ನು ದೇಹಕ್ಕೆ ‘ಅಭ್ಯಂಗ’ ಮಾಡಬಹುದು. ಕೇವಲ ಎಳ್ಳೆಣ್ಣೆಯನ್ನು ಹಚ್ಚಿದರೂ ಸಾಕಾಗುತ್ತದೆ. ದೇಹದ ಮೇಲಿನ ಎಣ್ಣೆಯ ಅಂಶವನ್ನು ತೆಗೆಯಲು ತೆಂಗಿನಹಾಲಿನಲ್ಲಿ ಕಲಸಿದ ಅಥವಾ ಸರಳವಾದ ಉಟಣೆಯನ್ನು ಹಚ್ಚಿ ದೇಹವನ್ನು ಚೆನ್ನಾಗಿ ಉಜ್ಜಬೇಕು.

೩. ಅಭ್ಯಂಗಸ್ನಾನದ ಲಾಭಗಳು

ಶರೀರದ ಕಾಂತಿಯನ್ನು ಹೆಚ್ಚಿಸಲು, ಸ್ನಾಯುಗಳು ಬಲಿμಠ್Àವಾಗಲು ಮತ್ತು ದಷ್ಟಪುಷ್ಟವಾಗಲು ಈ ಸ್ನಾನವನ್ನು ಮಾಡಲಾಗುತ್ತದೆ. ಅಭ್ಯಂಗಸ್ನಾನದಿಂದ ರಕ್ತ ಪರಿಚಲನೆ ಉತ್ತಮವಾಗುತ್ತದೆ. ‘ಆರೋಗ್ಯದ ಕಾಳಜಿ’ ಇದರ ಪ್ರಮುಖ ಉದ್ದೇಶವಾಗಿದೆ. ‘ಅಭ್ಯಂಗಸ್ನಾನವನ್ನು ಕೇವಲ ದೀಪಾವಳಿಯಂದು ಮಾತ್ರ ಮಾಡಬಾರದು, ಬದಲಿಗೆ ಆ ದಿನದಿಂದ ಪ್ರಾರಂಭಿಸಿ ವμರ್Àವಿಡೀ ಪ್ರತಿದಿನ ಮಾಡಬೇಕು’ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

೪. ಉಟಣೆ ಹಚ್ಚಿದ ನಂತರ ಸಾಬೂನು ಬಳಸಬಾರದು

ಉಟಣೆ ಹಚ್ಚಿದ ನಂತರ ಸಾಬೂನು ಬಳಸಬಾರದು. ಶಾಸ್ತ್ರಗಳಲ್ಲಿ ‘ತಿಲಾಮಲಕಕಲ್ಕ’ ಎಂಬ ಉಲ್ಲೇಖವಿದೆ. ಅಂದರೆ, ಕಪ್ಪು ಎಳ್ಳು ಮತ್ತು ನೆಲ್ಲಿಕಾಯಿಯನ್ನು ಒಟ್ಟಿಗೆ ಅರೆದು ತಯಾರಿಸಿದ ಲೇಪವನ್ನು ದೇಹಕ್ಕೆ ಚೆನ್ನಾಗಿ ಹಚ್ಚಿ ಮಸಾಜ್‌ ಮಾಡಬೇಕು. ದೀಪಾವಳಿಯ ಸಮಯದಲ್ಲಿ ಚಳಿ ಆರಂಭವಾಗುತ್ತದೆ. ಈ ಸಮಯದಲ್ಲಿ ಚರ್ಮವು ಒಣಗುತ್ತದೆ. ಅದಕ್ಕಾಗಿಯೇ ಕಪ್ಪು ಎಳ್ಳು, ನೆಲ್ಲಿಕಾಯಿ, ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆ, ಹಾಲು ಮುಂತಾದ ನೈಸರ್ಗಿಕ ಪದಾರ್ಥಗಳನ್ನು ಬಳಸಲು ಸಲಹೆ ನೀಡಲಾಗಿದೆ. ಏಕೆಂದರೆ ಈ ನೈಸರ್ಗಿಕ ಅಂಶಗಳು ಚರ್ಮಕ್ಕೆ ಬಹಳ ಉಪಯುಕ್ತವಾಗಿವೆ. – ಶ್ರೀ. ಸಾಗರ ದಾಬಕೆ, ಪೇಣ, ರಾಯಗಡ ಜಿಲ್ಲೆ, ಮಹಾರಾಷ್ಟ್ರ (ಸೌಜನ್ಯ: ದೈನಿಕ ‘ಲೋಕಮತ’)