|

ಮಾಲದಾ (ಬಂಗಾಳ) – ಇಲ್ಲಿನ ಭಾಜಪ ಶಾಸಕ ಶಂಕರ್ ಘೋಷ್ ಮತ್ತು ಸಂಸದ ಖಗೇನ್ ಮುರ್ಮು ಅವರ ಮೇಲೆ ಗುಂಪು ನಡೆಸಿದ ದಾಳಿಯಲ್ಲಿ ಅವರು ಗಾಯಗೊಂಡಿದ್ದಾರೆ. ಘೋಷ್ ಮತ್ತು ಮುರ್ಮು ಅವರು ನಾಗರಾಕಾಟೆಯ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಹೋಗಿದ್ದರು. ಆ ಸಮಯದಲ್ಲಿ ಈ ಘಟನೆ ನಡೆದಿದೆ. ಮುರ್ಮು ಅವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಗುಂಪು ಅವರ ವಾಹನವನ್ನು ಸಹ ಧ್ವಂಸಗೊಳಿಸಿದೆ. ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯ ಹಿಂದೆ ತೃಣಮೂಲ ಕಾಂಗ್ರೆಸ್ ಕೈವಾಡವಿದೆ ಎಂದು ಭಾಜಪ ಆರೋಪಿಸಿದೆ.
🚨 Deadly Attack in Bengal!
Mob brutally attacked BJP MP & MLA while they were on their way to help flood victims 🌊🤝
🗣️ “Until the Bengal govt is dissolved, no one is safe. Those who claim to be protectors of democracy are its biggest destroyers!” 🧨⚠️
Video Courtesy:… pic.twitter.com/dovhAdBvPs
— Sanatan Prabhat (@SanatanPrabhat) October 7, 2025
ತೃಣಮೂಲ ಕಾಂಗ್ರೆಸ್‌ನ ಪ್ರಚೋದನೆಯ ಮೇರೆಗೆ ಬಾಂಗ್ಲಾದೇಶಿ ಮುಸಲ್ಮಾನರು ದಾಳಿ ಮಾಡಿದ್ದಾರೆ! – ಕೇಂದ್ರ ಸಚಿವರ ಆರೋಪ
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು ಮತ್ತು ಭಾಜಪ ನಾಯಕ ಸುಕಾಂತ್ ಮಜುಮದಾರ್ ಅವರು, ‘ನಮ್ಮ ಸಂಸದರು, ಶಾಸಕರು ಮತ್ತು ರಾಜ್ಯದ ನಾಯಕರ ಮೇಲೆ ನಡೆದ ಆಕ್ರಮಣವು ಬಂಗಾಳದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇಂದಿಗೂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಹೋದ ಭಾಜಪ ತಂಡದ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ತೃಣಮೂಲವು ಬಾಂಗ್ಲಾದೇಶಿ ಒಳನುಸುಳುವ ಮುಸಲ್ಮಾನರು ಮತ್ತು ರಾಜ್ಯದ ಮುಸಲ್ಮಾನರನ್ನು ಮುಂದಿಟ್ಟುಕೊಂಡು ನಮ್ಮ ಸಂಸದರ ಮೇಲೆ ಆಕ್ರಮಣ ಮಾಡಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಯಂಕರ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ. ಈ ದಾಳಿಯ ಹಿಂದೆ ಪಿತೂರಿ ಇದೆ ಮತ್ತು ಅದರ ಬಗ್ಗೆ ಮಮತಾ ಬ್ಯಾನರ್ಜಿ ಅವರಿಗೆ ಮಾಹಿತಿ ಇತ್ತು ಎಂದು ನಾನು ಭಾವಿಸುತ್ತೇನೆ. ಉತ್ತರ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡಬೇಕಾಗುತ್ತದೆ.
ರಾಜ್ಯವು ನೆರೆ ಸಂತ್ರಸ್ತವಾಗಿರುವಾಗ ಮಮತಾ ಬ್ಯಾನರ್ಜಿ ‘ಕಾರ್ನಿವಲ್’ನಲ್ಲಿ (ಆನಂದೋತ್ಸವದಲ್ಲಿ) ಮಗ್ನರಾಗಿದ್ದಾರೆ! – ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ
ಭಾಜಪ ನಾಯಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು, ಉತ್ತರ ಬಂಗಾಳವು ನೆರೆ ಮತ್ತು ಭೂಕುಸಿತಗಳಿಂದ ತತ್ತರಿಸುತ್ತಿರುವಾಗ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ಕೋಲಕಾತಾ ಕಾರ್ನಿವಲ್’ನಲ್ಲಿ ಖ್ಯಾತನಾಮರ (ಸೆಲೆಬ್ರಿಟಿ) ಜೊತೆ ನೃತ್ಯ ಮಾಡುತ್ತಿದ್ದರು. ಅವರ ಈ ಅಮಾನವೀಯ ವರ್ತನೆಯಿಂದ ಜನತೆ ಅಸಮಾಧಾನಗೊಂಡಿದ್ದಾರೆ. ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಸಾಧ್ಯವಾಗದಂತೆ, ಅವರು ಮುಸಲ್ಮಾನ ಗೂಂಡಾಗಳಿಗೆ ನಮ್ಮ ಸಂಸದರ ಮೇಲೆ ಆಕ್ರಮಣ ಮಾಡಲು ಪ್ರಚೋದನೆ ನೀಡಿದ್ದಾರೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ