ಮಮತಾ ಬ್ಯಾನರ್ಜಿಯವರು ಮುಖ್ಯಮಂತ್ರಿಯಾಗಿ ಇರುವವರೆಗೂ ನಾನು ಬಂಗಾಳಕ್ಕೆ ಹೋಗುವುದಿಲ್ಲ! – ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಹೇಳಿಕೆ Pandit Dhirendra Shastri Permission Denied

ಹಿಂದುದ್ವೇಷಿ ಬಂಗಾಳ ಸರಕಾರವು ಕಥೆಗೆ ಅನುಮತಿ ನಿರಾಕರಿಸಿದ ನಂತರ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯವರ ನಿಲುವು

ರಾಯಪುರ (ಛತ್ತೀಸ್‌ಗಢ) – ಮಮತಾ ಬ್ಯಾನರ್ಜಿ ಅವರು ಬಂಗಾಳದ ಮುಖ್ಯಮಂತ್ರಿಯಾಗಿ ಇರುವವರೆಗೂ ನಾನು ಬಂಗಾಳ ರಾಜ್ಯದಲ್ಲಿ ಕಥೆ ಮಾಡುವುದಿಲ್ಲ. ನಾನು ಇತ್ತೀಚೆಗೆ ಬಂಗಾಳಕ್ಕೆ ಹೋಗಲು ಸಿದ್ಧನಾಗಿದ್ದೆ; ಆದರೆ ದೀದಿ (ಮಮತಾ ಬ್ಯಾನರ್ಜಿ) ಅದಕ್ಕೆ ಅನುಮತಿ ನಿರಾಕರಿಸಿದರು. ದೀದಿ ಇಲ್ಲಿರುವವರೆಗೂ ನಾನು ಹೋಗುವುದಿಲ್ಲ. ದಾದಾ ಬಂದ ಮೇಲೆ ನಾನು ಹೋಗುತ್ತೇನೆ ಎಂದು ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ನಿಲುವು ವ್ಯಕ್ತಪಡಿಸಿದರು. ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಹನುಮಾನ್ ಕಥೆಯು ಅಕ್ಟೋಬರ್ ೧೦, ೧೧ ಮತ್ತು ೧೨ ರಂದು ಕೋಲಕಾತಾದಲ್ಲಿ ನಡೆಯಬೇಕಿತ್ತು; ಆದರೆ ಮಳೆಯ ಕಾರಣ ನೀಡಿ ಅನುಮತಿಯನ್ನು ನಿರಾಕರಿಸಲಾಯಿತು.

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಮಂಡಿಸಿದ ಪ್ರಮುಖ ಅಂಶಗಳು!

೧. ನಾನು ಬಂಗಾಳಕ್ಕೆ ಹೋಗಲು ಸಿದ್ಧನಾಗಿದ್ದೆ, ಆದರೆ ದೀದಿ ನಿರಾಕರಿಸಿದರು. ಬಂಗಾಳದಲ್ಲಿ ನನಗೆ ಎಲ್ಲಿ ಅನುಮತಿ ಸಿಕ್ಕಿತ್ತೋ; ಅಲ್ಲಿ ಪ್ರವಾಹ ಬಂದಿದೆ ಎಂದು ನನಗೆ ಹೇಳಲಾಯಿತು.

೨. ದೇವರ ಇಚ್ಛೆಯಿದ್ದರೆ, ದೀದಿ (ಮುಖ್ಯಮಂತ್ರಿ ಸ್ಥಾನದಲ್ಲಿ) ಇರುತ್ತಾರೆ. ನಮಗೆ ಅವರಿಂದ ಯಾವುದೇ ತೊಂದರೆ ಇಲ್ಲ; ಆದರೆ ಧರ್ಮದ ವಿರುದ್ಧ ಹೋಗಬೇಡಿ.

೩. ನಾವು ಯಾವುದೇ ರಾಜಕೀಯದ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ನಾವು ಸನಾತನ ಧರ್ಮದ ಪರವಾಗಿದ್ದೇವೆ. ನಾವು ಯಾವಾಗಲೂ ಹಿಂದೂತ್ವದ ಪರವಾಗಿದ್ದೆವು ಮತ್ತು ಇರುತ್ತೇವೆ.

೪. ಧರ್ಮ ಎಂದರೆ ಕೇವಲ ಗಂಟೆ ಬಾರಿಸುವುದು, ಪ್ರಾರ್ಥನೆ ಮಾಡುವುದು ಮತ್ತು ತಿಲಕ ಹಚ್ಚುವುದು ಮಾತ್ರವಲ್ಲ, ಅನೀತಿಯ ವಿರುದ್ಧ ಧ್ವನಿ ಎತ್ತುವುದು ಕೂಡ ಧರ್ಮವಾಗಿದೆ.

೫. ಇಡೀ ಭಾರತದ ಧರ್ಮ ವಿರೋಧಿಗಳು ನನ್ನ ಹಿಂದೆ ಬಿದ್ದಿದ್ದಾರೆ; ಆದರೆ ನಾನು ಜೀವಂತ ಇರುವವರೆಗೂ ಹಿಂದೂತ್ವಕ್ಕಾಗಿ ಬದುಕಲು ಪ್ರತಿಜ್ಞೆ ಮಾಡುತ್ತೇನೆ.

ಸಂಪಾದಕೀಯ ನಿಲುವು

ಬಂಗಾಳದ ಹಿಂದೂಗಳೇ, ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯವರಂತಹ ತೇಜಸ್ವಿ ಸಂತರ ಸತ್ಸಂಗ ಪಡೆಯಲು ಬಂಗಾಳ ಸರಕಾರಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ!