ಪಾಕಿಸ್ತಾನ ಸರಕಾರವು ಜನರಿಗೆ ವಿದ್ಯುತ್ ವ್ಯವಸ್ಥೆ, ಆರೋಗ್ಯ ಸೌಲಭ್ಯಗಳು, ಉತ್ತಮ ಶಿಕ್ಷಣ ಇತ್ಯಾದಿಗಳನ್ನು ಒದಗಿಸಲಿದೆ!

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ ಸರಕಾರ ಮತ್ತು ‘ಜಮ್ಮು-ಕಾಶ್ಮೀರ ಸಂಯುಕ್ತ ಅವಾಮಿ ಕೃತಿ ಸಮಿತಿ’ ನಡುವೆ ಕೊನೆಗೆ ಒಪ್ಪಂದ ಏರ್ಪಟ್ಟಿದೆ. ಇದರ ನಂತರ ಕಳೆದ ೫ ದಿನಗಳಿಂದ ಹೊತ್ತಿ ಉರಿಯುತ್ತಿದ್ದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಶಾಂತವಾಗಿದೆ. ಸಮಿತಿಯ ೩೮ ಬೇಡಿಕೆಗಳಲ್ಲಿ ೨೧ ಬೇಡಿಕೆಗಳನ್ನು ಒಪ್ಪಿದ ನಂತರ ಹಿಂಸಾಚಾರ ನಿಂತಿತು. ಈ ಹಿಂಸಾಚಾರದಲ್ಲಿ ೧೦ ಜನರ ಸಾವನ್ನಪ್ಪಿದ್ದರು ಮತ್ತು ೧೦೦ಕ್ಕೂ ಹೆಚ್ಚು ಜನರು ಗಾಯಗೊಂಡರು.
ಒಪ್ಪಿದ ಪ್ರಮುಖ ಬೇಡಿಕೆಗಳು!
ಆಂದೋಲನದಿಂದ ಆಗುತ್ತಿದ್ದ ಹಿಂಸಾಚಾರವನ್ನು ನೋಡಿ ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಅವರು ಮಾಜಿ ಪ್ರಧಾನಮಂತ್ರಿ ರಾಜಾ ಪರ್ವೇಜ್ ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ಒಂದು ನಿಯೋಗವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಫ್ಫರಾಬಾದ್‌ಗೆ ಕಳುಹಿಸಿದರು. ಈ ನಿಯೋಗವು ಆಂದೋಲನಕಾರರ ೨೧ ಬೇಡಿಕೆಗಳನ್ನು ಒಪ್ಪಿಕೊಂಡಿತು. ಅವುಗಳಲ್ಲಿ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ
೧. ಶಿಕ್ಷಣ ಸುಧಾರಿಸಲು ಶಾಲಾ ಮಂಡಳಿಗಳನ್ನು ರಚಿಸಲಾಗುವುದು.
೨. ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ‘ಎಂ.ಆರ್.ಐ.’ ಮತ್ತು ‘ಸಿಟಿ ಸ್ಕ್ಯಾನ್’ ಯಂತ್ರಗಳನ್ನು ಅಳವಡಿಸಲಾಗುವುದು.
೩. ವಿದ್ಯುತ್ ವ್ಯವಸ್ಥೆಯನ್ನು ಸುಧಾರಿಸಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ೧೦ ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು ನೀಡಲಾಗುವುದು.
೪. ನೀಲಂ ಕಣಿವೆಯಲ್ಲಿ ೨ ಹೊಸ ಸುರಂಗ ಮಾರ್ಗಗಳನ್ನು ನಿರ್ಮಿಸಲು ಅಧ್ಯಯನ ಪ್ರಾರಂಭಿಸಲಾಗುವುದು.
೫. ಮೀರ್‌ಪುರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ರೂಪಿಸಲಾಗುವುದು.
ಸಂಪಾದಕೀಯ ನಿಲುವುಹಸಿವಿನಿಂದ ಕಂಗೆಟ್ಟಿರುವ ಮತ್ತು ಆದರೂ ಭಾರತ ದ್ವೇಷಕ್ಕಾಗಿ ರಕ್ಷಣಾ ವ್ಯವಸ್ಥೆಗೆ ನೀರು ಸುರಿದಂತೆ ಹಣ ಖರ್ಚು ಮಾಡುವ ಪಾಕಿಸ್ತಾನ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರಿಗೆ ಮೂಲಸೌಕರ್ಯಗಳನ್ನು ನೀಡುವುದಾಗಿ ಹೇಳಿದೆ. ನಿಜವಾಗಿ ಪಾಕಿಸ್ತಾನ ಅಲ್ಲಿನ ಜನರ ಬಾಯಿಗೆ ಕೇವಲ ಸುಳ್ಳು ಭರವಸೆಗಳನ್ನು ನೀಡಿದೆ. ಪಾಕಿಸ್ತಾನ ಎಂದಿಗೂ ನೀಡಿದ ಭರವಸೆಯನ್ನು ಪೂರೈಸುವುದಿಲ್ಲ ಮತ್ತು ಮುಂದಿನ ದಿನಗಳಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮತ್ತಷ್ಟು ಆಂದೋಲನಗಳು ನಡೆಯಲಿವೆ ಎಂಬುದು ವಾಸ್ತವ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ಪಾಕಿಸ್ತಾನ ಆಕ್ರಮಿತ ಕಾಶ್ಮೀರ: ಪ್ರತಿಭಟನಾಕಾರರ ಮೇಲೆ ಪಾಕ್ ಸೈನಿಕರಿಂದ ಗುಂಡಿನ ದಾಳಿ : ೧೨ ಸಾವು, ೩೮ ಜನರಿಗೆ ಗಾಯ : POK Protest
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump