ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸೈನಿಕರ ಗುಂಡಿನ ದಾಳಿಯಲ್ಲಿ 10 ಪ್ರತಿಭಟನಾಕಾರರ ಸಾವು: 1೦೦ ಜನರಿಗೆ ಗಾಯ

ಪ್ರತಿಭಟನಾಕಾರರು 25 ಸೈನಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ !

ಮುಜಫರಾಬಾದ್ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ಸ್ಥಳೀಯ ಜನರಿಂದ ಪ್ರತಿಭಟನೆ ನಡೆಯುತ್ತಿದೆ. ಇಲ್ಲಿನ ನಾಗರಿಕರ ಮೂಲಭೂತ ಅಗತ್ಯಗಳ ಮೇಲಿನ ಸಬ್ಸಿಡಿಯನ್ನು ಪಾಕಿಸ್ತಾನ ಸರಕಾರ ಕಡಿತಗೊಳಿಸಿದ್ದರಿಂದ ಈ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯ ವೇಳೆ ಪಾಕಿಸ್ತಾನದ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಇಲ್ಲಿಯವರೆಗೆ 1೦ ಜನರು ಮೃತಪಟ್ಟಿದ್ದು, 1೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಪಾಕಿಸ್ತಾನದ 25 ಸೈನಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಈ ಸೈನಿಕರನ್ನು ಮಾನವ ಗುರಾಣಿಗಳಾಗಿ ಬಳಸಲಾಗುತ್ತಿದ್ದು, ಇದು ಪಾಕಿಸ್ತಾನ ಸೇನೆಗೆ ಯಾವುದೇ ನೇರ ಕ್ರಮ ಕೈಗೊಳ್ಳಲು ಕಷ್ಟಕರವಾಗಿದೆ.

1. ಪ್ರತಿಭಟನೆಯನ್ನು ಹತ್ತಿಕ್ಕಲು ಗುಪ್ತಚರ ಸಂಸ್ಥೆಗಳು ಗುಪ್ತ ದಾಳಿಗಳನ್ನು ನಡೆಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಸಾಮಾನ್ಯ ಉಡುಪಿನಲ್ಲಿರುವ ಅಪರಿಚಿತ ವ್ಯಕ್ತಿಗಳು ನಾಯಕರನ್ನು ಗುರಿಯಾಗಿಸಿಕೊಂಡು ಜನಸಂದಣಿಯಲ್ಲಿ ಭೀತಿಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

2. ಜಮ್ಮು-ಕಾಶ್ಮೀರ ಜಂಟಿ ಆಕ್ಷನ್ ಕಮಿಟಿ (ಕಾಶ್ಮೀರ ಸಂಯುಕ್ತ ಅವಾಮಿ ಕೃತಿ ಸಮಿತಿ )(JKJAAC) ಯ ಆದೇಶದ ಮೇರೆಗೆ ಈ ಆಂದೋಲನ ನಡೆಯುತ್ತಿದೆ.

3. ಈ ಸಂಘಟನೆಯು ಸರಕಾರದ ಮುಂದೆ 38 ಬೇಡಿಕೆಗಳನ್ನು ಇಟ್ಟಿದೆ, ಇದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಧಾನಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಗಳಿಗಾಗಿ ಇರುವ 12 ಮೀಸಲು ಸ್ಥಾನಗಳನ್ನು ರದ್ದುಗೊಳಿಸಬೇಕು, ಎಂಬ ಅಂಶವೂ ಸೇರಿದೆ.

4. ಹಣದುಬ್ಬರದಿಂದಾಗಿ ಜನರು ತತ್ತರಿಸಿದ್ದು, ಹಿಟ್ಟು ಮತ್ತು ವಿದ್ಯುತ್ ಬಿಲ್‌ಗಳಲ್ಲಿ ರಿಯಾಯಿತಿ ನೀಡಬೇಕೆಂದು ಸಹ ಬೇಡಿಕೆ ಮಾಡಲಾಗಿದೆ.