
(ಮೌಲ್ವಿ ಎಂದರೆ ಇಸ್ಲಾಂ ಧರ್ಮದ ಧಾರ್ಮಿಕ ಮುಖಂಡ)
ಚಂಡಿಗಢ – ಹರಿಯಾಣದ ಪಲವಲ್ ಜಿಲ್ಲೆಯ ಒಂದು ಗ್ರಾಮದಲ್ಲಿ ಓರ್ವ ಅಪ್ರಾಪ್ತ ಹಿಂದು ಬಾಲಕಿಯನ್ನು ಬಲವಂತವಾಗಿ ಮಸೀದಿಗೆ ಕರೆದೊಯ್ದು ಬಂಧಿಸಲಾಗಿತ್ತು. ಅಲ್ಲಿ ಆಕೆಯನ್ನು ಮತಾಂತರಗೊಳಿಸುವ ಪ್ರಯತ್ನ ನಡೆದಿತ್ತು. ಈ ಪ್ರಕರಣದಲ್ಲಿ ಮೌಲ್ವಿ ಸೇರಿದಂತೆ 8 ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಈ ಪ್ರಕರಣದ ಮುಖ್ಯ ಆರೋಪಿ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ತಂದೆ ನೀಡಿದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 24ರ ಸಂಜೆ ತಾಯಿ-ತಂದೆ ಮನೆಯಲ್ಲಿ ಇಲ್ಲದ ಸಮಯ ಸಾಧಿಸಿ ಓರ್ವ ಮುಸಲ್ಮಾನ ಯುವಕ ಮನೆಯೊಳಗೆ ನುಗ್ಗಿ ಅವರ ಮಗಳನ್ನು ಮಸೀದಿಗೆ ಕರೆದುಕೊಂಡು ಹೋಗಿದ್ದಾನೆ. ಅವರು ಮನೆಗೆ ಮರಳಿದಾಗ ಮಗಳು ಇರಲಿಲ್ಲ. ಹುಡುಕಿದ ನಂತರ ಮಗಳನ್ನು ಮಸೀದಿಗೆ ಕರೆದೊಯ್ದಿರುವುದು ಅವರಿಗೆ ತಿಳಿಯಿತು. ಮಸೀದಿಗೆ ಹೋದಾಗ ಅವರು, ಮಗಳನ್ನು ಬಂಧಿಸಲಾಗಿದೆ ಮತ್ತು ಅಲ್ಲಿ ಅನೇಕ ಜನರು ನೆರೆದಿದ್ದಾರೆ, ಎಂಬುದು ಕಂಡಿತು. ಅಲ್ಲಿ ಹುಡುಗಿಯ ಬಲವಂತದ ಮತಾಂತರ ನಡೆಯುತ್ತಿತ್ತು. ಆಕೆಯ ಕೈಯಲ್ಲಿದ್ದ ಪವಿತ್ರ ದಾರವನ್ನು ಕತ್ತರಿಸಲಾಗಿತ್ತು, ಹಾಗೂ ಹಣೆಯ ಮೇಲಿನ ಕುಂಕುಮವನ್ನು ಅಳಿಸಲಾಗಿತ್ತು. ತಂದೆಯವರು ಹೇಗೋ ಕಷ್ಟಪಟ್ಟು ಮಗಳನ್ನು ಬಿಡಿಸಿಕೊಂಡು ಬಂದರು.
ಪೊಲೀಸ ಉಪಾಯುಕ್ತರಾದ ನರೇಂದ್ರ ಖಟಾನಾ ಅವರು ಮಾತನಾಡಿ, ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಮೌಲ್ವಿ ಸೇರಿದಂತೆ 8 ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಮೌಲ್ವಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಬಾಲಕಿಯ ತಂದೆ, ತಮ್ಮ ಮಗಳಿಗೆ ಯಜ್ಞ ಮತ್ತು ಪೂಜೆ-ಆರಾಧನೆಗಳಲ್ಲಿ ಆಸಕ್ತಿ ಇತ್ತು ಮತ್ತು ಇದೇ ಕಾರಣಕ್ಕಾಗಿ ಆಕೆಯನ್ನು ಗುರಿಯಾಗಿಸಲಾಗಿತ್ತು ಎಂದು ಹೇಳಿದ್ದಾರೆ. (ಇದರಿಂದ ಮತಾಂಧರಲ್ಲಿ ಹಿಂದು ದ್ವೇಷವು ಎಷ್ಟು ತುಂಬಿ ತುಳುಕುತ್ತಿದೆ ಎಂಬುದು ಅರಿವಿಗೆ ಬರುತ್ತದೆ! – ಸಂಪಾದಕರು)
ಸಂಪಾದಕೀಯ ನಿಲುವುಮುಸಲ್ಮಾನರಿಗೆ ಯಾವುದೇ ಭಯ ಉಳಿಯದ ಕಾರಣ ಅವರು ಈ ರೀತಿ ಹಿಂದುಗಳ ಮತಾಂತರ ಮಾಡುತ್ತಿದ್ದಾರೆ. ಇಂತಹವರಿಗೆ ಕಠಿಣ ಶಿಕ್ಷೆ ನೀಡುವುದು ಅಗತ್ಯ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!