
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಪ್ರಧಾನಿ ಡಾ. ಮಹಮ್ಮದ್ ಯೂನಸ್ ಅವರು ಈ ವರ್ಷ ದುರ್ಗಾಪೂಜೆಗೂ ಮುನ್ನ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಹಿಂದೂ ಸಮುದಾಯಕ್ಕೆ ಭದ್ರತೆಯ ಭರವಸೆ ನೀಡಿದ್ದರು. ಈ ಹಬ್ಬವನ್ನು ಶಾಂತಿಯುತವಾಗಿ ಮತ್ತು ಗೌರವದಿಂದ ಆಚರಿಸುವ ಭರವಸೆಯನ್ನು ಅವರು ನೀಡಿದ್ದರು; ಆದರೆ, ಹಾಗಿದ್ದರೂ ನವರಾತ್ರಿಯ ಮುನ್ನಾದಿನವೇ ಮತಾಂಧರು 7 ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ಇದರ ನಂತರವೂ ವಿಧ್ವಂಸಕ ಕೃತ್ಯಗಳು ಮುಂದುವರಿದಿವೆ. ಇದರಿಂದ ‘ಸರಕಾರದ ಭರವಸೆ ಕೇವಲ ಬಾಯಿ ಮಾತಿಗೆ’ ಎಂಬುದನ್ನು ಇದು ಬಯಲು ಮಾಡಿದೆ.
Attacks on 3 Durga Puja Pandals in Bangladesh: Idols vandalized
As long as the genocide of Hindus continues in Bangladesh, these attacks will persist, and just as true is that India and the world will continue to either passively watch or ignore it!
On Sept 22 (Jhenaidah),… pic.twitter.com/Bs1qRxfyyB
— Sanatan Prabhat (@SanatanPrabhat) September 26, 2025
1. ನವರಾತ್ರಿಯ ಮೊದಲ ದಿನವೇ, ಅಂದರೆ ಸೆಪ್ಟೆಂಬರ್ 22 ರಂದು, ಝೆನಾಯಿದಾಹ ಜಿಲ್ಲೆಯ ಶೈಲಕುಪಾ ಉಪಜಿಲ್ಲೆಯ ಫುಲಹೌರಿ ಹರಿತಲಾ ಸರ್ವಜನೀನ ಪೂಜಾ ಮಂಟಪದ ಮೇಲೆ ದಾಳಿ ಮಾಡಿ ವಿಗ್ರಹವನ್ನು ಧ್ವಂಸಗೊಳಿಸಲಾಯಿತು. ಪೊಲೀಸರು ಬಂಧಿಸಿದ ಮೊಂಜರ್ ಅಲಿ ಎಂಬ ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥ ಎಂದು ಘೋಷಿಸಿದೆ.
2. ಇದರ ನಂತರ ಸೆಪ್ಟೆಂಬರ್ 24 ರಂದು ಸಾತಖೀರಾ ಜಿಲ್ಲೆಯಲ್ಲಿ ವಿಗ್ರಹಗಳ ವಿರೂಪಗೊಳಿಸುವಿಕೆ ನಡೆಯಿತು ಮತ್ತು ವಿಗ್ರಹಗಳ ಮೇಲಿನ ಬಟ್ಟೆಗಳನ್ನು ಹರಿದು ಹಾಕಲಾಯಿತು. ಈ ಪ್ರಕರಣದಲ್ಲಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದರೂ, ಆತನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
3. ಈವರೆಗೆ ಜಮಾಲ್‌ಪುರ, ಝೆನಾಯಿದಾಹ ಮತ್ತು ಸಾತಖೀರಾ ಜಿಲ್ಲೆಗಳಲ್ಲಿ 3 ವಿಗ್ರಹಗಳ ಮೇಲೆ ದಾಳಿ ನಡೆದಿದೆ.
ಬಾಂಗ್ಲಾದೇಶದಲ್ಲಿ 700 ದುರ್ಗಾಪೂಜಾ ಮಂಟಪಗಳು ಅಸುರಕ್ಷಿತ!
‘ಸನಾತನಿ ಜಾಗರಣ ಜೋತ್ ಸಂಘಟನೆ’ಯು, ಈ ವರ್ಷ ದೇಶಾದ್ಯಂತ 700 ಕ್ಕೂ ಹೆಚ್ಚು ದುರ್ಗಾಪೂಜಾ ಮಂಟಪಗಳು ಅಪಾಯದಲ್ಲಿವೆ ಎಂದು ಪ್ರತಿಪಾದಿಸಿದೆ. ಸಂಘಟನೆಯು ಸೇನೆಯನ್ನು ನಿಯೋಜಿಸುವಂತೆ ಆಗ್ರಹಿಸಿದೆ. 55 ಮಂಟಪಗಳನ್ನು ಗುರುತಿಸಿರುವ ಸಾತಖೀರಾ ಜಿಲ್ಲೆಯು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ.
ಮತಾಂಧರ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು ಹಿಂದೂಗಳಿಗೇ ಬೆದರಿಕೆ ಹಾಕುತ್ತಿರುವ ಸರಕಾರ!‘ತಪ್ಪು ಮಾಹಿತಿ ಹರಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದಿದೆ!ಗೃಹ ಸಚಿವಾಲಯದ ಸಲಹೆಗಾರ ಜಹಾಂಗೀರ್ ಆಲಂ ಚೌಧರಿ ಅವರು, ಇವು ಬೇರೆ ಬೇರೆ ಘಟನೆಗಳಾಗಿವೆ ಎಂದು ಹೇಳುವ ಮೂಲಕ ಅವುಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂಬ ಸಂದೇಶ ನೀಡಲು ಪ್ರಯತ್ನಿಸಿದರು. ಅವರು, ದುರ್ಗಾಪೂಜೆಯು ಶಾಂತಿಯುತವಾಗಿ ನಡೆಯಲಿದೆ; ಆದರೆ ಯಾರು ತಪ್ಪು ಮಾಹಿತಿ ಹರಡುತ್ತಾರೋ, ಅವರ ಮೇಲೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ‘ಜಹಾಂಗೀರ ಚೌಧರಿ ಅವರ ಹೇಳಿಕೆಯು ಹಿಂದೂಗಳಿಗೆ ನೀಡಿದ ಬೆದರಿಕೆ ಆಗಿದೆ; ಏಕೆಂದರೆ ಈ ಘಟನೆಯನ್ನು ಖಂಡಿಸಿ ಅಪರಾಧಿಗಳನ್ನು ಬಂಧಿಸುವ ಬದಲು ಸರಕಾರವು ಸಂತ್ರಸ್ತ ಹಿಂದೂಗಳಿಗೆ ಎಚ್ಚರಿಕೆ ನೀಡಿದೆ’ ಎಂದು ಹಿಂದೂ ಸಮುದಾಯವು ಟೀಕಿಸಿದೆ.(ಇಸ್ಲಾಮಿಕ್ ದೇಶಗಳಲ್ಲಿ ಹಿಂದೂಗಳ ಮೇಲೆ ದಾಳಿ ಮಾಡುವವರಿಗೆ ಮುಕ್ತ ಅವಕಾಶವಿರುತ್ತದೆ ಮತ್ತು ದಾಳಿಯ ಬಗ್ಗೆ ದೂರು ನೀಡುವವರಿಗೆ ಶಿಕ್ಷೆ ನೀಡಲಾಗುತ್ತದೆ! – ಸಂಪಾದಕರು) |
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಹಿಂದೂಗಳ ವಂಶಹತ್ಯೆ ನಡೆಯುತ್ತಿರುವವರೆಗೂ ಹೀಗೆಯೇ ಮುಂದುವರಿಯಲಿದೆ ಮತ್ತು ಅದನ್ನು ಭಾರತ ಸೇರಿದಂತೆ ಜಗತ್ತು ನಿಷ್ಕ್ರಿಯವಾಗಿ ನೋಡುತ್ತಿರುತ್ತದೆ ಅಥವಾ ನಿರ್ಲಕ್ಷಿಸುತ್ತದೆ ಎಂಬುದು ಅಷ್ಟೇ ಸತ್ಯ! |
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ