ಭಾಜಪ ಮತ್ತು ಆರ್‌ಎಸ್‌ಎಸ್‌ನ 9 ಕಾರ್ಯಕರ್ತರ ಖುಲಾಸೆ

ಕೇರಳದಲ್ಲಿ ಮಾಕ್‌ಪ ಪಕ್ಷದ ಕಾರ್ಯಕರ್ತನ ಹತ್ಯೆ ಪ್ರಕರಣ

ತಿರುವನಂತಪುರಂ (ಕೇರಳ) – ಕೇರಳದಲ್ಲಿ 2015 ರಲ್ಲಿ ನಡೆದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ, ನ್ಯಾಯಾಲಯವು ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂಬತ್ತು ಕಾರ್ಯಕರ್ತರನ್ನು ಖುಲಾಸೆ ಗೊಳಸಿಇದೆ. ಅವರ ಹೆಸರುಗಳು, ಸಾಜೇಶ್ ಸಿ., ಪ್ರಜೇಶ್ ಡಿ., ಇಂಚಿಕಾಂಡಿ ನಿಶಾಂತ್, ಲಿಜಿನ್ ಪಿ., ಮನಪಡ್ಡಿ ವಿನೀಶ್, ಸಿ. ರಾಜೇಶ್, ನಿಖಿಲ್ ಎನ್.ಆರ್., ರಮೇಶ್ ಮತ್ತು ರೆಂಜಿತ್ ಸಿ.ವಿ. 2015 ರ ಫೆಬ್ರವರಿ 25 ರಂದು ಕಣ್ಣೂರಿನ ಚಿತ್ತರಿಪರಂಬದಲ್ಲಿ ಓ. ಪ್ರೇಮನ್ (45 ವರ್ಷ) ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು ಮತ್ತು ಮಾರನೇ ದಿನ ಆಸ್ಪತ್ರೆಯಲ್ಲಿ ಅವರು ಮರಣ ಹೊಂದಿದ್ದರು.