|

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರಕಾರವು ಜಾತಿ ಆಧಾರಿತ ಯಾವುದೇ ಮೆರವಣಿಗೆ, ಸಭೆ ಮತ್ತು ಕಾರ್ಯಕ್ರಮಗಳಿಗೆ ಅನುಮತಿ ನೀಡದಿರಲು ನಿರ್ಧರಿಸಿದೆ. ಅಲ್ಲದೆ, ಪೊಲೀಸರು ದಾಖಲಿಸುವ ಅಪರಾಧಗಳಲ್ಲಿ ಯಾವುದೇ ವ್ಯಕ್ತಿಯ ಜಾತಿಯನ್ನು ನಮೂದಿಸಲಾಗುವುದಿಲ್ಲ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಅಲಹಾಬಾದ ಉಚ್ಚ ನ್ಯಾಯಾಲಯದ ಆದೇಶದಂತೆ ಈ ನಿರ್ಧಾರವನ್ನು ಜಾರಿಗೊಳಿಸಿದ್ದಾರೆ. ‘ಎಲ್ಲರಿಗೂ ಸಮಾನವಾಗಿ ನಡೆಸಿಕೊಳ್ಳಬೇಕು’ ಎನ್ನುವುದು ಈ ನಿರ್ಧಾರದ ಹಿಂದಿನ ಮುಖ್ಯ ಉದ್ದೇಶ ಎಂದು ಸರಕಾರ ಸ್ಪಷ್ಟಪಡಿಸಿದೆ.
ಸರಕಾರಿ ದಾಖಲೆಗಳಿಂದ ‘ಜಾತಿ’ಯನ್ನು ತೋರಿಸುವ ಕಾಲಂ ತೆಗೆದುಹಾಕಲಾಗುತ್ತದೆ
ಆದೇಶದ ಪ್ರಕಾರ, ಸರಕಾರಿ ಮತ್ತು ಕಾನೂನು ದಾಖಲೆಗಳಿಂದ ‘ಜಾತಿ’ಯನ್ನು ತೋರಿಸುವ ಕಾಲಂ ಅನ್ನು ತೆಗೆದುಹಾಕಲಾಗುವುದು. ಅದರ ಬದಲಿಗೆ, ಸಂಬಂಧಪಟ್ಟ ವ್ಯಕ್ತಿಯ ಪೋಷಕರ ಹೆಸರನ್ನು ನಮೂದಿಸಲಾಗುತ್ತದೆ. ಇದರ ಜೊತೆಗೆ, ಪೊಲೀಸ್ ಠಾಣೆಗಳ ಸೂಚನಾ ಫಲಕಗಳು, ವಾಹನಗಳು ಮತ್ತು ಫಲಕಗಳಿಂದ ಜಾತಿ ಸಂಬಂಧಿತ ಎಲ್ಲಾ ಚಿಹ್ನೆಗಳು ಮತ್ತು ಘೋಷಣೆಗಳನ್ನು ತೆಗೆದುಹಾಕಲಾಗುವುದು.
ಸಾಮಾಜಿಕ ಮಾಧ್ಯಮಗಳಿಗೂ ನಿರ್ಬಂಧ
ಕೇವಲ ಸರಕಾರದ ಕೆಲಸಗಳಿಗೆ ಮಾತ್ರವಲ್ಲದೆ, ಸಾಮಾಜಿಕ ಮಾಧ್ಯಮಗಳಿಗೂ ಈ ಆದೇಶ ಅನ್ವಯವಾಗಲಿದೆ. ಜಾತಿಯನ್ನು ಗೌರವಿಸುವ, ಇತರ ಜಾತಿಗಳ ವಿರುದ್ಧ ದ್ವೇಷವನ್ನು ಹರಡುವ ಅಥವಾ ಜಾತಿ ಆಧಾರಿತ ಚರ್ಚೆಗಳನ್ನು ಮಾಡುವ ವ್ಯಕ್ತಿಗಳ ವಿರುದ್ಧ ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಸಂಪಾದಕೀಯ ನಿಲುವುಇಂತಹ ಆದೇಶವನ್ನು ಇಡೀ ದೇಶಕ್ಕೆ ನೀಡುವುದು ಅವಶ್ಯಕವಾಗಿದೆ. ದೇಶದಿಂದ ಜಾತಿಭೇದ ನಿರ್ಮೂಲನೆಯಾಗದೆ ದೇಶದ ಪ್ರಗತಿ ವೇಗವಾಗಿ ಆಗುವುದಿಲ್ಲ, ಇದೂ ಅಷ್ಟೇ ಸತ್ಯವಾಗಿದೆ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!