ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಶಾಖೆಯ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರ ಪಾಕಿಸ್ತಾನ ಪರ ಹೇಳಿಕೆ!

ನವದೆಹಲಿ – ನನ್ನ ಪ್ರಕಾರ, ನಮ್ಮ ವಿದೇಶಾಂಗ ನೀತಿಯು ಮೊದಲು ನೆರೆಯ ದೇಶಗಳ ಮೇಲೆ ಕೇಂದ್ರೀಕರಿಸಬೇಕು. ನಾವು ನಿಜವಾಗಿಯೂ ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧಗಳನ್ನು ಸುಧಾರಿಸಬಹುದೇ? ನಾನು ಪಾಕಿಸ್ತಾನಕ್ಕೆ ಹೋಗಿದ್ದೆ. ಅಲ್ಲಿ ನನಗೆ ಮನೆಯಂತೆ ಅನಿಸಿತು ಎಂದು ಹೇಳಲು ಬಯಸುತ್ತೇನೆ. ನಾನು ಬಾಂಗ್ಲಾದೇಶ ಮತ್ತು ನೇಪಾಳಕ್ಕೂ ಹೋಗಿದ್ದೇನೆ, ಅಲ್ಲಿಯೂ ನನಗೆ ಮನೆಯಲ್ಲಿ ಇರುವಂತೆ ಅನಿಸಿತು. ನಾನು ವಿದೇಶಿ ನೆಲದಲ್ಲಿದ್ದೇನೆ ಎಂದು ನನಗೆ ಅನಿಸಲೇ ಇಲ್ಲ ಎಂದು ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ (ಭಾರತದ ಹೊರಗಿನ ಕಾಂಗ್ರೆಸ್ ಶಾಖೆ) ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಅವರ ಈ ಹೇಳಿಕೆಯ ಮೇಲೆ ಭಾಜಪ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡಿದೆ.
ಇದೇ ಕಾರಣಕ್ಕೆ ಮುಂಬಯಿ ಮೇಲಿನ ದಾಳಿಯ ನಂತರ ಆಗಿನ ಕಾಂಗ್ರೆಸ್ ಸರಕಾರ ಪಾಕಿಸ್ತಾನದ ಮೇಲೆ ಕ್ರಮ ಕೈಗೊಳ್ಳಲಿಲ್ಲ! – ಭಾಜಪ

ರಾಹುಲ್ ಗಾಂಧಿಯವರ ನಿಕಟವರ್ತಿ ಮತ್ತು ಕಾಂಗ್ರೆಸ್‌ನ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರಿಗೆ ಪಾಕಿಸ್ತಾನದಲ್ಲಿ ಮನೆಯಂತೆ ಅನಿಸುತ್ತದೆ, ಇದೇ ಕಾರಣಕ್ಕೆ ಕಾಂಗ್ರೆಸ್ ಸರಕಾರವು ಮುಂಬಯಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯಕರವಲ್ಲ ಎಂದರು.
‘ಚೀನಾವನ್ನು ಶತ್ರು ಎಂದು ಭಾವಿಸುವುದನ್ನು ನಿಲ್ಲಿಸಬೇಕಂತೆ
ಇದರಿಂದ ಪಿತ್ರೋಡಾ ಅವರು ಭಾರತೀಯರಲ್ಲ, ಬದಲಾಗಿ ಪಾಕಿಸ್ತಾನ ಮತ್ತು ಚೀನಾದ ನಾಗರಿಕರಾಗಿದ್ದಾರೆ ಎಂದು ತಿಳಿದುಬರುತ್ತದೆ! ಅಂತಹವರ ಭಾರತೀಯ ಪೌರತ್ವವನ್ನು ರದ್ದುಪಡಿಸಬೇಕೆಂದು ಭಾರತೀಯರು ಒತ್ತಾಯಿಸಬೇಕು!

ಸ್ಯಾಮ್ ಪಿತ್ರೋಡಾ ಒಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ನನಗೆ ಚೀನಾದಿಂದ ಯಾವುದೇ ಅಪಾಯವಿಲ್ಲ. ಚೀನಾ ಶತ್ರು ಎಂಬ ವಿಷಯವನ್ನು ಹಲವು ಬಾರಿ ಉತ್ಪ್ರೇಕ್ಷೆ ಮಾಡಲಾಗಿದೆ; ಏಕೆಂದರೆ ಇತರ ದೇಶಗಳನ್ನು ಶತ್ರುಗಳೆಂದು ಭಾವಿಸುವುದು ಅಮೆರಿಕದ ಪ್ರವೃತ್ತಿಯಾಗಿದೆ. ನನ್ನ ಪ್ರಕಾರ ಈಗ ಕಾಲ ಬದಲಾಗಬೇಕು. ದೇಶಗಳು ಪರಸ್ಪರ ಸಹಕರಿಸಬೇಕು, ಸಂಘರ್ಷವನ್ನು ತಪ್ಪಿಸಬೇಕು. ನಮ್ಮ ದೃಷ್ಟಿಕೋನ ಮೊದಲಿನಿಂದಲೂ ಸಂಘರ್ಷದಿಂದ ಕೂಡಿದೆ ಮತ್ತು ಇದೇ ದೃಷ್ಟಿಕೋನ ಶತ್ರುಗಳನ್ನು ಸೃಷ್ಟಿಸುತ್ತದೆ. ನಾವು ಈ ಮನಸ್ಥಿತಿಯನ್ನು ಬದಲಾಯಿಸಬೇಕು ಮತ್ತು ‘ಚೀನಾ ಮೊದಲ ದಿನದಿಂದಲೂ ಶತ್ರು’ ಎಂದು ಭಾವಿಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.
ಸಂಪಾದಕೀಯ ನಿಲುವು
|
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ