ನವರಾತ್ರಿ ವ್ರತದ ವಿಧಗಳು, ಅದರ ಅಂಗಗಳು ಮತ್ತು ಇತರ ಶಾಸ್ತ್ರೀಯ ಮಾಹಿತಿ

ಆಶ್ವಯುಜ ಶುಕ್ಲ ಪಾಡ್ಯದಿಂದ ಪ್ರಾರಂಭವಾಗುವ ನವರಾತ್ರಿ ಕಾಲವು ಶರದ ಋತು ಆಗಿರುವುದರಿಂದ ಈ ನವರಾತ್ರಿಯನ್ನು ‘ಶರದೀಯ ನವರಾತ್ರಿ’ ಎಂದು ಕರೆಯಲಾಗುತ್ತದೆ. ಈ ವಾರದ ಲೇಖನದಲ್ಲಿ, ನವರಾತ್ರಿ ವ್ರತದ ವಿಧಗಳು, ನವರಾತ್ರಿಯಲ್ಲಿ ‘ಸಪ್ತಶತಿ ಪಾಠ’ದ ಮಹತ್ವ, ವಯಸ್ಸಿಗೆ ಅನುಗುಣವಾಗಿ ಮಾಡಿದ ಕುಮಾರಿ ಪೂಜೆಯ ಫಲ ಮತ್ತು ನವರಾತ್ರಿ ಕಾಲದ ಪ್ರಮುಖ ತಿಥಿಗಳ ಮಹತ್ವವನ್ನು ನೀಡಲಾಗಿದೆ.
೧. ನವರಾತ್ರಿ ವ್ರತದ ವಿಧಗಳು
ಅ. ಪ್ರತಿಪದೆಯಿಂದ ನವಮಿಯ ವರೆಗೆ : ಈ ೯ ದಿನಗಳು ಸಂಪೂರ್ಣ ನವರಾತ್ರಿ ವ್ರತ.
ಆ. ಪ್ರತಿಪದೆಯಿಂದ ಸಪ್ತಮಿಯ ವರೆಗೆ : ಸಪ್ತರಾತ್ರಿವ್ರತ.
ಇ. ಪಂಚಮಿಯಿಂದ ನವಮಿಯವರೆಗೆ : ಪಂಚರಾತ್ರಿ ವ್ರತ.
ಈ. ಸಪ್ತಮಿಯಿಂದ ನವಮಿಯ ವರೆಗೆ : ತ್ರಿರಾತ್ರಿ ವ್ರತ.
ಉ. ಕೇವಲ ಅಷ್ಟಮಿವ್ರತ.
ಹೀಗೆ ೫ ವ್ರತಗಳಿರುತ್ತವೆ.
೨. ನವರಾತ್ರಿಯ ಅಂಗಗಳು
ನವರಾತ್ರಿಯ ಪ್ರಮುಖ ೪ ಅಂಗಗಳಿವೆ. ಅವೆಂದರೆ ದೇವತಾ-ಸ್ಥಾಪನೆ, ಮಾಲಾಬಂಧನ, ನಂದಾದೀಪ ಮತ್ತು ಕುಮಾರಿಕಾ ಪೂಜೆ. ಕೆಲವರ ಮನೆಯಲ್ಲಿ ವೇದಿಯನ್ನು (ಹೊಲ ವನ್ನು) ಸ್ಥಾಪಿಸುತ್ತಾರೆ. ಇದಕ್ಕಾಗಿ ಹೊಲದ ಸ್ವಲ್ಪ ಮಣ್ಣನ್ನು ತಂದು ಅದರಲ್ಲಿ ಏಳು ಧಾನ್ಯಗಳನ್ನು ಅರಶಿನ ನೀರಿನಲ್ಲಿ ಬಣ್ಣ ಮಾಡಿ ಬಿತ್ತಬೇಕು. ನಂದಾದೀಪ ಹಚ್ಚಲು ದಪ್ಪ ಲೋಹದ ದೀಪವನ್ನು ಉಪಯೋಗಿಸಬೇಕು. ಎಣ್ಣೆಯ ಜೋಡಿದೀಪದ ಒಂದು ಬತ್ತಿ ಉದ್ದ ಇರಬೇಕು ಮತ್ತು ಅದಕ್ಕೆ ಕುಂಕುಮ ಹಚ್ಚಬೇಕು. ನಂದಾದೀಪ ಅಖಂಡವಾಗಿ ಉರಿಯುತ್ತಿರಬೇಕು. ನಂದಾದೀಪ ನಂದುವ ಭಯವಿದ್ದರೆ ೨ ದೀಪಗಳನ್ನು ಹಚ್ಚಬೇಕು. ನವರಾತ್ರಿಯ ನಂದಾದೀಪ ಎಣ್ಣೆ ಮುಗಿದು ಅಥವಾ ಮಸಿಯನ್ನು ತೆಗೆಯುವಾಗ ನಂದಿ ಹೋದರೆ, ಕುಲದೇವತೆಯ ನಾಮಜಪವನ್ನು ೧೦೮ ಬಾರಿ ಅಥವಾ ೧೦೦೧ ಬಾರಿ ಮಾಡಬೇಕು ಅಥವಾ ‘ವಿಷ್ಣು ಸಹಸ್ರನಾಮ’ವನ್ನು ಓದಬೇಕು. ನವರಾತ್ರಿಯಲ್ಲಿ ಮಾಲಾಬಂಧನ ಮಾಡುವಾಗ ಆ ಸಮಯದಲ್ಲಿ ಲಭ್ಯವಿರುವ ಸುಗಂಧಭರಿತ ಹೂವುಗಳ ಮತ್ತು ಎಲೆಗಳ ಮಾಲೆಯನ್ನು ಕಟ್ಟಬೇಕು.
೩. ಕುಮಾರಿಕಾ ಪೂಜೆ
ಕುಮಾರಿ (ಬಾಲಕಿ)ಯ ಪೂಜೆ ಈ ವ್ರತದ ಪ್ರಾಣವಾಗಿದೆ. ಸಾಧ್ಯವಾದರೆ ನವರಾತ್ರಿ ಮುಗಿಯುವ ವರೆಗೆ ಪ್ರತಿದಿನ ಅಥವಾ ಸಪ್ತಮಿಯಂದು ಕುಮಾರಿ (ಬಾಲಕಿ)ಯ ಕಾಲು ತೊಳೆದು ಅವಳಿಗೆ ಮೃಷ್ಟಾನ್ನ ಭೋಜನವನ್ನು ನೀಡಬೇಕು. ಸ್ಕಂದ ಪುರಾಣದಲ್ಲಿ ಕುಮಾರಿಯ ವಯಸ್ಸಿಗೆ ಅನುಗುಣವಾಗಿ ಅವಳ ವಿಧಗಳು ಹೀಗಿವೆ.
ಅ. ೨ ವರ್ಷದ ಕುಮಾರಿ
ಆ. ೩ ವರ್ಷದ ತ್ರಿಮೂರ್ತಿನಿ
ಇ. ೪ ವರ್ಷದ ಕಲ್ಯಾಣಿ
ಈ. ೫ ವರ್ಷದ ರೋಹಿಣಿ
ಉ. ೬ ವರ್ಷದ ಕಾಳಿ
ಊ. ೭ ವರ್ಷದ ಚಂಡಿಕಾ
ಎ. ೮ ವರ್ಷದ ಶಾಂಭವಿ
ಏ. ೯ ವರ್ಷದ ದುರ್ಗಾ
ಒ. ೧೦ ವರ್ಷದ ಸುಭದ್ರಾ.
೪. ವಯಸ್ಸಿಗೆ ಅನುಗುಣವಾಗಿ ಮಾಡಿದ ಕುಮಾರಿ ಪೂಜೆಯ ಫಲ ಕೆಳಗಿನಂತಿದೆ
ಅ. ಒಂದು ವರ್ಷ : ಐಶ್ವರ್ಯ
ಆ. ಎರಡು ವರ್ಷ : ಭೋಗ ಮತ್ತು ಮೋಕ್ಷ
ಇ. ಮೂರು ವರ್ಷ : ಧರ್ಮ, ಅರ್ಥ, ಕಾಮ ಮತ್ತು ಪ್ರಾಪ್ತಿ
ಈ. ನಾಲ್ಕು ವರ್ಷ : ರಾಜಪದಪ್ರಾಪ್ತಿ
ಉ. ಐದು ವರ್ಷ : ವಿದ್ಯಾಪ್ರಾಪ್ತಿ
ಊ. ಆರು ವರ್ಷ : ಷಟ್ಕರ್ಮಸಿದ್ಧಿ
ಎ. ಏಳು ವರ್ಷ : ರಾಜ್ಯಪ್ರಾಪ್ತಿ
ಏ. ಎಂಟು ವರ್ಷ : ಸಂಪತ್ತು
ಒ. ಒಂಬತ್ತು ವರ್ಷ : ಭೂಮಿಯ ರಾಜ್ಯ ಸಿಗುತ್ತದೆ.
೫. ನವರಾತ್ರಿಯಲ್ಲಿ ‘ಸಪ್ತಶತಿಪಾಠ’ದ ಮಹತ್ವ
ಒಂದೊಂದು ಅಕ್ಷರವು ಅಗ್ನಿಗೆ ಸಮಾನ ವಾಗಿದೆ. ‘ಮಾರ್ಕಂಡೇಯ ಪುರಾಣ’ದಲ್ಲಿ ದೇವಿ ಹೀಗೆ ಹೇಳುತ್ತಾಳೆ, ಯಾವ ಮನುಷ್ಯ ನನ್ನ ಮಹಾತ್ಮೆಯನ್ನು ಕೇಳುತ್ತಾನೋ, ಆ ಮನುಷ್ಯನ ಎಲ್ಲ ತೊಂದರೆಗಳನ್ನು ನಾನು ದೂರ ಮಾಡುತ್ತೇನೆ. ಎಲ್ಲ ದುಷ್ಟ ಕನಸುಗಳು ಮತ್ತು ಉಗ್ರ ಗ್ರಹಪೀಡೆಗಳು ಬಂದಾಗ ಸಪ್ತಶತಿಪಾಠವನ್ನು ಕೇಳಿದರೆ ಅವು ದೂರವಾಗುತ್ತವೆ. ರಾಹುಕಾಲ ದಲ್ಲಿ ಸಪ್ತಶತಿಪಾಠದ ವಿಶೇಷ ಮಹತ್ವವನ್ನು ಹೇಳಲಾಗಿದೆ.
ಆಶ್ವಯುಜ ಮಾಸದ ಅಷ್ಟಮಿಯಂದು ಅನೇಕ ರೀತಿಯಲ್ಲಿ ದೇವಿಯ ಉಪಾಸನೆ ಮಾಡಲಾಗು ತ್ತದೆ, ಹಾಗೆಯೇ ಇದೇ ದಿನ ಮಧ್ಯರಾತ್ರಿಯಲ್ಲಿ ಭದ್ರಕಾಳಿಯ ಉತ್ಪತ್ತಿಯಾಯಿತು; ಆದ್ದರಿಂದ ಈ ತಿಥಿಯನ್ನು ಮಹಾಷ್ಟಮಿ ಎಂದು ಕರೆಯುತ್ತಾರೆ.
ನವರಾತ್ರಿಯಲ್ಲಿ ಪ್ರತಿ ವಾರ ಯಾವ ನೈವೇದ್ಯ ಗಳನ್ನು ಅರ್ಪಿಸಬೇಕು ಎಂದು ‘ದೇವಿ ಭಾಗವತ ಗ್ರಂಥ’ದಲ್ಲಿ ಹೇಳಲಾಗಿದೆ. ಅವುಗಳು ಈ ಕೆಳಗಿನಂತಿವೆ :
ಅ. ಭಾನುವಾರ : ಪಾಯಸ
ಆ. ಸೋಮವಾರ : ಹಸುವಿನ ತುಪ್ಪ
ಇ. ಮಂಗಳವಾರ : ಬಾಳೆಹಣ್ಣು
ಈ. ಬುಧವಾರ : ಬೆಣ್ಣೆ ಮತ್ತು ಸಕ್ಕರೆ
ಉ. ಗುರುವಾರ : ಕಲ್ಲು ಸಕ್ಕರೆ
ಊ. ಶುಕ್ರವಾರ : ಸಕ್ಕರೆ
ಎ. ಶನಿವಾರ : ಹಸುವಿನ ತುಪ್ಪ
ನವರಾತ್ರಿಯಲ್ಲಿ ಪ್ರಮುಖವಾಗಿ ದುರ್ಗಾ ಸ್ತೋತ್ರ ವಾಚನ, ಮಹಾಲಕ್ಷ್ಮಿಅಷ್ಟಕ, ಕನಕ ಧಾರಾ ಸ್ತೋತ್ರ, ರಾಮರಕ್ಷಾ, ದೇವ್ಯಪರಾಧ ಸ್ತೋತ್ರ, ಶ್ರೀಸೂಕ್ತ, ಶೂಲಿನಿದುರ್ಗಾಸುಮುಖಿ ಸ್ತೋತ್ರ ಇತ್ಯಾದಿ ಸ್ತೋತ್ರಗಳನ್ನು ವಾಚನ ಮಾಡಬೇಕು. ಸಾತ್ತ್ವಿಕ ಆಹಾರವನ್ನು ಸೇವಿಸಬೇಕು. ಬ್ರಹ್ಮಚರ್ಯವನ್ನು ಪಾಲಿಸಬೇಕು. ಗಡ್ಡ-ಕ್ಷೌರ ಮಾಡಬಾರದು. ಹಾಸಿಗೆಯ ಮೇಲೆ ಮಲಗಬಾರದು. ನವರಾತ್ರಿಯಲ್ಲಿ ನಿಯಮ ಗಳನ್ನು ಎಷ್ಟು ಹೆಚ್ಚು ಪಾಲಿಸುತ್ತೇವೆಯೋ, ಅಷ್ಟು ಭಕ್ತಿಭಾವ ಹೆಚ್ಚಾಗುತ್ತದೆ.
೬. ಆಶ್ವಯುಜ ಮಾಸದ ತಿಥಿಗಳ ಮಹತ್ವ
ಅ. ಶುದ್ಧ ಪಾಡ್ಯ : ಘಟಸ್ಥಾಪನೆ
ಆ. ಪಂಚಮಿ : ಲಲಿತಾಪಂಚಮಿ
ಇ. ಷಷ್ಠಿ : ಸರಸ್ವತಿ ಆವಾಹನೆ (ಮೂಲ ನಕ್ಷತ್ರ)
ಈ. ಸಪ್ತಮಿ : ಮಹಾಲಕ್ಷ್ಮೀ ಪೂಜೆ ಮತ್ತು ಕೊಡ ಊದುವುದು
ಉ. ಅಷ್ಟಮಿ : ದುರ್ಗಾಷ್ಟಮಿ
ಊ. ನವಮಿ : ನವರಾತ್ರಿ ಉತ್ಥಾಪನ (ಮುಗಿಯುವುದು) ಮತ್ತು ಗಾಯತ್ರಿದೇವಿಯ ಉತ್ಸವ
ಎ. ದಶಮಿ : ವಿಜಯದಶಮಿ ಮತ್ತು ನವರಾತ್ರಿ ಸಮಾಪ್ತಿ
ಏ. ಏಕಾದಶಿ : ಪಾಶಾಂಕುಶ ಏಕಾದಶಿ
ಒ. ಹುಣ್ಣಿಮೆ : ಕೋಜಾಗರಿ ಹುಣ್ಣಿಮೆ ಮತ್ತು ವಾಲ್ಮೀಕಿ ಜಯಂತಿ
ಔ. ಕೃಷ್ಣ ಪಕ್ಷ ಚತುರ್ಥಿ : ಸಂಕಷ್ಟಿ ಚತುರ್ಥಿ
ಕ. ಕೃಷ್ಣ ಪಕ್ಷ ಅಷ್ಟಮಿ : ಕಾಲಾಷ್ಟಮಿ
ಖ. ಕೃಷ್ಣ ಪಕ್ಷ ಏಕಾದಶಿ : ರಮಾ ಏಕಾದಶಿ
ಗ. ಕೃಷ್ಣ ಪಕ್ಷ ದ್ವಾದಶಿ : ಗೋವತ್ಸದ್ವಾದಶಿ
ಘ. ಕೃಷ್ಣ ಪಕ್ಷ ತ್ರಯೋದಶಿ : ಧನತ್ರಯೋದಶಿ
ಚ. ಕೃಷ್ಣ ಪಕ್ಷ ಚತುರ್ದಶಿ : ನರಕ ಚತುರ್ದಶಿ
ಛ. ಅಮಾವಾಸ್ಯೆ : ದೀಪಾವಳಿ ಲಕ್ಷ್ಮೀ ಪೂಜೆ ಮತ್ತು ವಿಕ್ರಮ ಸಂವತ್ಸರ ಸಮಾಪ್ತಿ
– ಜ್ಯೋತಿಷಿ ಶ್ರೀ. ಬ.ವಿ. ಹಾಗೂ ಚಿಂತಾಮಣಿ ದೇಶಪಾಂಡೆ (ಗುರೂಜಿ), ಪುಣೆ
(ಆಧಾರ: ‘ಧಾರ್ಮಿಕ’, ದೀಪಾವಳಿ ವಿಶೇಷಾಂಕ ೨೦೧೭)
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಅಕ್ಷಯ ತದಿಗೆಯ ಶುಭ ಮುಹೂರ್ತದ ಮಹತ್ವ !