ನಾಥ್ ಅವರಿಂದ ಅಮೆರಿಕಾದ ಗುಪ್ತಚರ ಸಂಸ್ಥೆ, ಅಮೆರಿಕಾದಲ್ಲಿನ ಭಾರತೀಯ ರಾಯಭಾರ ಕಚೇರಿ, ಹಾಗೂ ಭಾರತದ ವಿದೇಶಾಂಗ ಸಚಿವರಲ್ಲಿ ದೂರು ಸಲ್ಲಿಕೆ!

ಮಿಲವಾಉಕೀ (ಅಮೆರಿಕಾ) – ಸಾಮಾಜಿಕ ಮಾಧ್ಯಮಗಳ ಮೂಲಕ ನನಗೆ ಪದೇ ಪದೇ ಕಿರುಕುಳ ಮತ್ತು ಬೆದರಿಕೆಗಳು ಬರುತ್ತಿದ್ದರಿಂದ ದೂರು ದಾಖಲಿಸಿದ್ದೇನೆ. ವಿಶೇಷವಾಗಿ ಹೇಳುವುದಾದರೆ, ‘ಒಬ್ಬ ಕಂದುಬಣ್ಣದ ಹಿಂದೂ ಭಾರತೀಯ ಅಮೆರಿಕನ್’ ಎಂದು ನನ್ನನ್ನು ಗುರಿ ಮಾಡಲಾಗುತ್ತಿದೆ. ಬೆದರಿಕೆಗಳಲ್ಲಿ ಬಲವಂತವಾಗಿ ಮತಾಂತರ ಮಾಡಿಸುವ ಒತ್ತಡವನ್ನು ನನ್ನ ಮೇಲೆ ಹೇರಲಾಗುತ್ತಿದೆ. ಇದರೊಂದಿಗೆ ಅವಮಾನ ಮತ್ತು ಭಯದ ತಂತ್ರಗಳನ್ನು ಅನುಸರಿಸಲಾಗುತ್ತಿದೆ, ಎಂದು ಅಮೆರಿಕಾದ ರಿಪಬ್ಲಿಕನ್ ಪಕ್ಷದ ನಾಯಕಿ, ಭೂರಾಜಕೀಯ ವಿಶ್ಲೇಷಕಿ ಮತ್ತು ಹಿಂದುತ್ವನಿಷ್ಠ ಪೂರ್ಣಿಮಾ ನಾಥ್ ಅವರು ತಮ್ಮ ‘ಎಕ್ಸ್’ ಖಾತೆಯ ಮೂಲಕ ಮಾಹಿತಿ ನೀಡಿದ್ದಾರೆ. ಅವರು ಎಫ್.ಬಿ.ಐ. ಅಂದರೆ, ‘ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್’, ಅಮೆರಿಕಾದ ಗುಪ್ತಚರ ಸಂಸ್ಥೆಯ ಹೆಸರಿನಲ್ಲಿ ಈ ಪೋಸ್ಟ್ ಮಾಡಿದ್ದಾರೆ. ಅವರು ಮಾಡಿದ ‘ಥ್ರೆಡ್’ನಲ್ಲಿ (ಅನೇಕ ಪೋಸ್ಟ್‌ಗಳ ಸಂಬಂಧಿತ ಸಮೂಹ) ಅವರಿಗೆ ನೀಡಿದ ಬೆದರಿಕೆಗಳನ್ನು ಪ್ರಸಾರ ಮಾಡಿದ್ದಾರೆ.
ನಾಥ್ ಅವರು ತಮ್ಮ ಪೋಸ್ಟ ನಲ್ಲಿ,
1. ಸ್ವತಃ ನನ್ನ ಸುರಕ್ಷತೆಯ ಬಗ್ಗೆ, ಹಾಗೆಯೇ ನನ್ನಂತಹ ಇತರರು ಮತ್ತು ವ್ಯಾಪಕ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ನನಗೆ ಬಹಳ ಕಾಳಜಿ ಇದೆ.
2. ಒಬ್ಬ ಹಿಂದೂ ಮತ್ತು ಭಾರತೀಯ ಮೂಲದ ವ್ಯಕ್ತಿ ಆಗಿ ನನಗೆ ಅಮೆರಿಕಾದಲ್ಲಿ ಧರ್ಮ, ಜೀವನ, ಮಾತು, ಅಭಿವ್ಯಕ್ತಿ ಮತ್ತು ವಿಚಾರ ಸ್ವಾತಂತ್ರ್ಯ, ಇವುಗಳ ಹಕ್ಕು ಇಲ್ಲದಿದ್ದರೆ, ಈ ಬಗ್ಗೆ ನನಗೆ ಸ್ಪಷ್ಟೀಕರಣ ನೀಡಬೇಕು.
3. ಪೂರ್ಣಿಮಾ ನಾಥ್ ಅವರು ಅಮೆರಿಕಾದ ಭಾರತೀಯ ರಾಯಭಾರ ಕಚೇರಿ, ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇತ್ಯಾದಿಗಳನ್ನು ಉದ್ದೇಶಿಸಿ (‘ಟ್ಯಾಗ್’ ಮಾಡಿ), ನಾನು ಭಾರತೀಯ ರಾಯಭಾರ ಕಚೇರಿಗೆ ಈ ಬಗ್ಗೆ ತಿಳಿಸಿದ್ದೇನೆ. ಅಮೆರಿಕಾದಲ್ಲಿ ಸಂಘಟಿತ ಕಿರುಕುಳ ಅಥವಾ ಬೆದರಿಕೆಗಳನ್ನು ಎದುರಿಸುತ್ತಿರುವ ಸಮುದಾಯದ ಸದಸ್ಯರಿಗಾಗಿ (ಹಿಂದೂಗಳಿಗಾಗಿ) ಅವರಿಗೆ ಮಾರ್ಗದರ್ಶನ ಅಥವಾ ಸಹಾಯ ಮಾಡುವ ವ್ಯವಸ್ಥೆ ಇದೆಯೇ ?, ಎಂದು ಸಹ ಕೇಳಿದ್ದಾರೆ.
4. ಈ ಪೋಸ್ಟ್‌ನಲ್ಲಿ ಅವರು ಅಮೆರಿಕಾದಲ್ಲಿನ ‘ಹಿಂದೂಹೇಟ್’, ‘ಹಿಂದೂ ಅಮೆರಿಕನ್ ಫೌಂಡೇಶನ್’, ‘ಹಿಂದೂಆಕ್ಟ್’ ಈ ಅಮೆರಿಕನ್, ಹಾಗೆಯೇ ‘ಪ್ರಾಚ್ಯಂ’, ‘ಸನಾತನ ಪ್ರಭಾತ’ ಮುಂತಾದ ಭಾರತೀಯ ಹಿಂದುತ್ವನಿಷ್ಠ ಪ್ರಸಾರ ಮಾಧ್ಯಮಗಳಿಗೂ ‘ಟ್ಯಾಗ್’ ಮಾಡಿದ್ದಾರೆ.
@FBIDDBongino @FBI @FBIDirectorKash: Here is another comment from this racist
1. Is the “We the people” = White Christian supremacists?
2. “Moral society”? The lecture on ‘morality’ comes from white Christian supremacists who wiped out native indigenous American Indians and… pic.twitter.com/I1n9xFyZCb
— Er. MBA Purnima NATH #USCongressWI4 Candidate🇺🇲 (@PurnimaNath) July 24, 2025
ಅಮೆರಿಕಾದ ರಾಜಕೀಯ ಹೇಳಿಕೆಗಳಿಂದ ಹಿಂದೂ ದ್ವೇಷ ಮತ್ತು ಭಾರತ ದ್ವೇಷ ಎರಡೂ ಹೆಚ್ಚಾಗಿದೆ ! – ಪೂರ್ಣಿಮಾ ನಾಥ್ಇನ್ನೊಂದು ಪೋಸ್ಟ್‌ನಲ್ಲಿ ಪೂರ್ಣಿಮಾ ನಾಥ್ ಅವರು ಅಮೆರಿಕಾ, ಭಾರತ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಐರ್ಲೆಂಡ್, ನೆದರ್ಲ್ಯಾಂಡ್ಸ್, ನಾರ್ವೆ ಮತ್ತು ಜಾಗತಿಕ ಮಟ್ಟದ ಹಿಂದೂಗಳನ್ನು ಉದ್ದೇಶಿಸಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು, ನಾವು ಪಶ್ಚಿಮ ದೇಶಗಳಲ್ಲಿನ ಹಿಂದೂ ಮತ್ತು ಭಾರತೀಯ ಮೂಲದ ಸಮುದಾಯಗಳ ವಿರುದ್ಧ ‘ಹಿಂದೂಫೋಬಿಯಾ’ (ಹಿಂದೂ ದ್ವೇಷ), ಕಿರುಕುಳ ಮತ್ತು ಗುರಿಮಾಡಿದ ಹಿಂಸಾಚಾರದಲ್ಲಿ ಆತಂಕಕಾರಿ ಹೆಚ್ಚಳವನ್ನು ನೋಡುತ್ತಿದ್ದೇವೆ. ಈ ಪರಿಸ್ಥಿತಿ ವೇಗವಾಗಿ ಹೆಚ್ಚುತ್ತಿದೆ. ನಮ್ಮ ಹಕ್ಕುಗಳು, ಸುರಕ್ಷತೆ ಮತ್ತು ಘನತೆ ಅಪಾಯದಲ್ಲಿದೆ. ದ್ವೇಷದ ಈ ಅಲೆಯನ್ನು ಎದುರಿಸಲು ನಾವೆಲ್ಲಾ ಒಂದಾಗಿ ಧ್ವನಿ ಎತ್ತಬೇಕು. ಯಾವುದೇ ರಾಜಕೀಯ ಸಿದ್ಧಾಂತವಿರಲಿ, ಪ್ರತಿಯೊಬ್ಬ ಹಿಂದೂಗೂ ಅಸ್ತಿತ್ವದ, ಅಭಿವ್ಯಕ್ತಿಯ ಮತ್ತು ಅಪಾಯಕ್ಕೆ ಒಳಗಾಗುವ ಭಯವಿಲ್ಲದೆ ಮುಕ್ತವಾಗಿ ಯೋಚಿಸುವ ಮೂಲಭೂತ ಹಕ್ಕು ಇರಬೇಕು. ಆದರೂ ಅಮೆರಿಕಾದ ರಾಜಕೀಯ ಹೇಳಿಕೆಗಳಿಂದ ಹಿಂದೂದ್ವೇಷ ಮತ್ತು ಭಾರತ ದ್ವೇಷ ಎರಡೂ ಹೆಚ್ಚಾಗಿದೆ. ದಯವಿಟ್ಟು ಈ ಕರೆಗೆ ಬಲ ನೀಡಿ. ಇದರಲ್ಲಿ ನಾಥ್ ಅವರು ‘ಹಿಂದೂಸ್ ಅಂಡರ್ ಅಟ್ಯಾಕ್ ಇನ್ ಅಮೆರಿಕಾ’ (ಅಮೆರಿಕಾದಲ್ಲಿ ಹಿಂದೂಗಳ ಮೇಲೆ ದಾಳಿಗಳು) ಮತ್ತು ‘ರೈಸಿಂಗ್ ಹಿಂದೂಫೋಬಿಯಾ ಇನ್ ದ ವೆಸ್ಟ್’ (ಪಾಶ್ಚಿಮಾತ್ಯ ಜಗತ್ತಿನಲ್ಲಿ ಹೆಚ್ಚುತ್ತಿರುವ ಹಿಂದೂ ದ್ವೇಷ) ಈ ‘ಹ್ಯಾಶ್‌ಟ್ಯಾಗ್’ (ಚರ್ಚೆಯಾಗುತ್ತಿರುವ ವಿಷಯಗಳು) ಬಳಸಿದ್ದಾರೆ.
|
ಸಂಪಾದಕೀಯ ನಿಲುವು
|
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !