ನಾಟೋ’ದಲ್ಲಿನ ಅಮೆರಿಕಾದ ರಾಯಭಾರಿ ಮ್ಯಾಥ್ಯೂ ವ್ಹಿಟಕರ್ ಅವರ ವಿಚಿತ್ರ ಶೋಧ !
(‘ನಾಟೋ’ ಎಂದರೆ ‘ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್’ ಎಂಬ 29 ದೇಶಗಳ ಸಹಭಾಗಿತ್ವದಲ್ಲಿ ರಚಿತವಾದ ವಿಶ್ವದ ಒಂದು ಸೇನಾ ಸಂಘಟನೆ)

ಬ್ರುಸೆಲ್ಸ್ – ರಷ್ಯಾ ಉಕ್ರೇನ್ ವಿರುದ್ಧ ಪ್ರಾರಂಭಿಸಿದ ಯುದ್ಧಕ್ಕೆ ಭಾರತವು ರಷ್ಯಾಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ‘ನಾಟೋ’ದಲ್ಲಿನ ಅಮೆರಿಕಾದ ರಾಯಭಾರಿ ಮ್ಯಾಥ್ಯೂ ವ್ಹಿಟಕರ್ ಅವರು ‘ಫಾಕ್ಸ್ ನ್ಯೂಸ್’ನೊಂದಿಗೆ ಮಾತನಾಡುವಾಗ ಆರೋಪಿಸಿದರು.
ವ್ಹಿಟಕರ್ ಅವರು ಮಾತು ಮುಂದುವರೆಸಿ, ‘ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳಿಗೆ ರಷ್ಯಾ ತೈಲ ಮಾರಾಟ ಮಾಡುವುದರಿಂದ, ಉಕ್ರೇನ್ ನಲ್ಲಿನ ರಷ್ಯಾದ ಸೇನಾ ಕಾರ್ಯಾಚರಣೆಗೆ ಹಣ ಸಿಗುತ್ತಿದೆ. ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸಲು ಈ ದೇಶಗಳ ಮೇಲೆ ಹೆಚ್ಚುವರಿ ನಿರ್ಬಂಧ ಮತ್ತು ಶುಲ್ಕಗಳನ್ನು ಹೇರಬೇಕು,’’ಎಂದರು. ರಷ್ಯಾದ ತೈಲ ಖರೀದಿಯ ವಿಚಾರದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಮಿತ್ರರಾಷ್ಟ್ರಗಳು ಭಾರತವನ್ನು ನಿರಂತರವಾಗಿ ಗುರಿಯಾಗಿಸುತ್ತಿವೆ. ಟ್ರಂಪ್ ಅವರು ರಷ್ಯಾದ ತೈಲ ಖರೀದಿಸುವ ಭಾರತದ ಮೇಲೆ ಶೇ. 50ರಷ್ಟು ಆಮದು ಸುಂಕವನ್ನು ಹೇರಿದ್ದಾರೆ. ಭಾರತದ ಅಧಿಕಾರಿಗಳ ಪ್ರಕಾರ, ಭಾರತವನ್ನು ಅನ್ಯಾಯವಾಗಿ ಗುರಿಯಾಗಿಸಲಾಗುತ್ತಿದೆ. ಯುರೋಪಿಯನ್ ಯೂನಿಯನ್ ರಷ್ಯಾದ ಗ್ಯಾಸ್‌ನ ಪ್ರಮುಖ ಖರೀದಿದಾರನಾಗಿದ್ದು, ಚೀನಾ ರಷ್ಯಾದ ಕಚ್ಚಾ ತೈಲದ ಅತಿ ದೊಡ್ಡ ಆಮದುದಾರ ಎಂದು ಭಾರತವು ಒತ್ತಿಹೇಳಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !