
ಮುಂಬಯಿ – ಸೆಪ್ಟೆಂಬರ್ 6 ರ ರಾತ್ರಿ ಕೊಲಾಬಾದ ನೇವಿನಗರದಲ್ಲಿ, ಭಾರತೀಯ ನೌಕಾಪಡೆಯ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬರು ಕರ್ತವ್ಯದಲ್ಲಿದ್ದ ನೌಕಾಪಡೆಯ ಅಗ್ನಿವೀರನಿಂದ ರೈಫಲ್, 40 ಕಾರ್ಟ್ರಿಜ್‌ಗಳು ಮತ್ತು 3 ತುಂಬಿದ ಮ್ಯಾಗಜಿನ್‌ಗಳನ್ನು ದೋಚಿದ್ದ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಮುಂಬಯಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ‘ಅವರು ಈ ರೈಫಲ್ ಅನ್ನು ನಕ್ಸಲರಿಗೆ ಮಾರಾಟ ಮಾಡಲು ಉದ್ದೇಶಿಸಿದ್ದರೇ?’ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಇಬ್ಬರೂ ಆರೋಪಿಗಳು ಸಹೋದರರಾಗಿದ್ದು, ಅವರು ಯೆಳಗಾಪಲ್ಲಿ (ತೆಲಂಗಾಣ) ನಿವಾಸಿಗಳಾಗಿದ್ದಾರೆ. ಅಲ್ಲಿ ಅವರು ಪಡಿತರ ಅಂಗಡಿಯನ್ನು ನಡೆಸುತ್ತಿದ್ದರು. ಸೆಪ್ಟೆಂಬರ್ 4 ರಂದು ಅವರು ಮುಂಬಯಿಗೆ ಬಂದು ಕೊಲಾಬಾದ ನೌಕಾಪಡೆ ಪ್ರದೇಶವನ್ನು ಪರಿಶೀಲಿಸಿದ್ದರು. ರೈಫಲ್ ಕದ್ದ ಮುಖ್ಯ ಆರೋಪಿಯು ಹಿಂದೆ ಕೊಚ್ಚಿಯಲ್ಲಿ ನೌಕಾಪಡೆಯಲ್ಲಿದ್ದ ಕಾರಣ, ಅವರ ಬಳಿ ನೌಕಾಪಡೆಯ ಸಮವಸ್ತ್ರವಿತ್ತು.
1. ಈ ಕಳ್ಳನು ಅಗ್ನಿವೀರನಿಗೆ, ‘ನಿಮ್ಮ ಡ್ಯೂಟಿ ಮುಗಿದಿದೆ. ಹೈ ಅಲರ್ಟ್ ಇದೆ. ಭದ್ರತಾ ಸಿಬ್ಬಂದಿಯನ್ನು ಬದಲಾಯಿಸುವ ಸೂಚನೆ ಇದೆ,’ ಎಂದು ಸುಳ್ಳು ಹೇಳಿ ಆತನ ಕೈಯಿಂದ ರೈಫಲ್ ಪಡೆದುಕೊಂಡನು.
2. ರೈಫಲ್ ಕೇಳಿದವನು ನೌಕಾಪಡೆಯ ಹೊಸ ಅಧಿಕಾರಿಯಿರಬಹುದು ಎಂದು ಅಗ್ನಿವೀರ ಭಾವಿಸಿದ್ದರು; ಆದರೆ ರೈಫಲ್ ಪಡೆದ ಕೆಲವೇ ಸಮಯದಲ್ಲಿ, ಈ ವ್ಯಕ್ತಿ (ಆರೋಪಿ) ಹೊರಗೆ ನಿಂತಿದ್ದ ತನ್ನ ಸಹೋದರನಿಗೆ ಗೋಡೆಯ ಮೇಲಿಂದ ರೈಫಲ್ ಮತ್ತು ಕಾರ್ಟ್ರಿಜ್‌ಗಳಿರುವ ಬ್ಯಾಗ್ ಅನ್ನು ಕೊಟ್ಟನು ಮತ್ತು ಇಬ್ಬರೂ ಪರಾರಿಯಾದರು.
3. ಕರ್ತವ್ಯದಲ್ಲಿದ್ದ ಅಗ್ನಿವೀರ ತಮ್ಮ ಗಡಿಯಾರವನ್ನು ಮರೆತು ಅರ್ಧ ಗಂಟೆಯ ನಂತರ ಸ್ಥಳಕ್ಕೆ ಹಿಂತಿರುಗಿದಾಗ, ಅಲ್ಲಿ ಹೊಸ ಸೈನಿಕರು ಇಲ್ಲದಿರುವುದು ಅವರ ಗಮನಕ್ಕೆ ಬಂತು.
4. ಇದರ ನಂತರ, ಮುಂಬಯಿ ಪೊಲೀಸ್, ನೌಕಾಪಡೆ, ಭಯೋತ್ಪಾದನಾ ವಿರೋಧಿ ದಳ ಇತ್ಯಾದಿ ಸಂಸ್ಥೆಗಳು ಕೂಡಲೇ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದವು.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !