
ಗಾಜಿಯಾಬಾದ (ಉತ್ತರ ಪ್ರದೇಶ) – ಭಾರತದಲ್ಲಿ ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ. ಈ ವಂಚನೆಗಳನ್ನು ತಡೆಯಲು, ಸರಕಾರವು “ಸೈಬರ್ ವಂಚನೆಗೆ ಬಲಿಯಾಗಬೇಡಿ” ಎಂದು ದೂರವಾಣಿ ಕರೆಗಳ ಮೂಲಕ ಹಲವಾರು ತಿಂಗಳುಗಳವರೆಗೆ ಜಾಗೃತಿ ಮೂಡಿಸುತ್ತಿತ್ತು. ಆದರೂ, ಕೇಂದ್ರ ರಕ್ಷಣಾ ಸಚಿವಾಲಯದ ನಿವೃತ್ತ ಅಧಿಕಾರಿಯೊಬ್ಬರು ಈ ‘ಡಿಜಿಟಲ್ ಅರೆಸ್ಟ್’ ವಂಚನೆಗೆ ಬಲಿಯಾಗಿದ್ದಾರೆ. ಅವರು ರೂ.34 ಲಕ್ಷ 90 ಸಾವಿರ ಕಳೆದುಕೊಂಡಿದ್ದಾರೆ. ವಂಚಕರು ತಮ್ಮನ್ನು ದೂರಸಂಪರ್ಕ ಕಂಪನಿಯ ಅಧಿಕಾರಿಗಳು, ಮುಂಬಯಿ ಪೊಲೀಸ್ ಅಧಿಕಾರಿಗಳು, ಕೇಂದ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಮತ್ತು “ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ” ಎಂದು ಸುಳ್ಳು ಹೇಳಿ ಅಧಿಕಾರಿಯಿಂದ ದೊಡ್ಡ ಮೊತ್ತದ ಹಣವನ್ನು ಪಡೆದಿದ್ದಾರೆ. ಪೊಲೀಸರು ವಂಚಕರಿಂದ ಕದ್ದ ಹಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ವಂಚನೆಯ ಸಂಪೂರ್ಣ ವಿವರ ಹೀಗಿದೆ!

1. ಆಗಸ್ಟ್ 21, 2025 ರಂದು ಆರಂಭ!
ಅ. ನಿವೃತ್ತ ಅಧಿಕಾರಿ, ಆಗಸ್ಟ್ 21 ರಂದು ಗುರುಗ್ರಾಮನ ಏರ್‌ಟೆಲ್ ಕಂಪನಿಯ ಪ್ರತಿನಿಧಿಯೆಂದು ಹೇಳಿಕೊಂಡಿರುವ ಆರುಷಿ ಅಗರವಾಲ್ ಎಂಬುವವರಿಂದ ಒಂದು ದೂರವಾಣಿ ಕರೆ ಬಂದಿತ್ತು.
ಆ. ಆಕೆಯು, ಅಧಿಕಾರಿಗಳ ಆಧಾರ್ ಕಾರ್ಡ್ ಅನ್ನು ದುರುಪಯೋಗಪಡಿಸಿ ಕೊಂಡು ಮುಂಬಯಿ ವಿಳಾಸದಲ್ಲಿ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಆ ಸಂಖ್ಯೆಯನ್ನು ಆನ್‌ಲೈನ್ ಬೆಟ್ಟಿಂಗ್ (ಜೂಜಾಟ), ಬ್ಲ್ಯಾಕ್‌ಮೇಲಿಂಗ್ (ಬೆದರಿಕೆ), ಹಣ ವರ್ಗಾವಣೆ ಮುಂತಾದ ಅಪರಾಧಗಳಿಗೆ ಬಳಸಲಾಗುತ್ತಿದೆ ಎಂದು ಹೇಳಿದರು.
ಇ. ಮುಂಬಯಿ ಪೊಲೀಸರ ಅನುಮತಿ ಸಿಗುವವರೆಗೆ ಅವರ ಎಲ್ಲ ಸಂಖ್ಯೆಗಳನ್ನು ನಿರ್ಬಂಧಿಸಲಾಗುವುದು ಎಂದು ಅಧಿಕಾರಿಗೆ ತಿಳಿಸಲಾಯಿತು. ಇದಕ್ಕಾಗಿ ಸೈಬರ್ ಅಪರಾಧಿಯು “ನೀವು ಮುಂಬಯಿ ಪೊಲೀಸರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ಸಿಂಗ್ ಅವರೊಂದಿಗೆ ಮಾತನಾಡಿ” ಎಂದು ಹೇಳಿದರು.
ಈ. ನಂತರ, ನಿವೃತ್ತ ಅಧಿಕಾರಿಯನ್ನು ಪ್ರವೀಣ್ ಸೂದ್ ಎಂಬ ನಕಲಿ ಸಿಬಿಐ ಅಧಿಕಾರಿಯೊಂದಿಗೆ ಸಂಪರ್ಕಿಸಲಾಯಿತು. ತನಗೆ ಈ ಎಲ್ಲದರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿ ಹೇಳಿದಾಗ, ಅವರಿಗೆ ವಾಟ್ಸಾಪ್ ನಲ್ಲಿ ಒಂದು ಸಂದೇಶ ಬಂದಿತು. ಆ ಸಂದೇಶದಲ್ಲಿ ಅವರು ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಬರೆಯಲಾಗಿತ್ತು. ಅವರಿಗೆ ಎಲ್ಲಿಗೂ ಹೋಗದಿರಲು ಮತ್ತು ವಿಷಯವನ್ನು ಗೌಪ್ಯವಾಗಿ ಇಡಲು ಸೂಚಿಸಲಾಯಿತು. ಇದಲ್ಲದೆ, ಅವರನ್ನು ಬಂಧಿಸುವ ಬೆದರಿಕೆಯನ್ನೂ ಹಾಕಲಾಯಿತು.
2. ಆಗಸ್ಟ್ 22, 2025 ರಂದು ಏನಾಯಿತು?
ಅಧಿಕಾರಿಗೆ ವಿಡಿಯೋ ಕರೆ ಬಂದಿತು. ಅದರಲ್ಲಿ, “ಪ್ರಾಥಮಿಕ ವಿಚಾರಣೆಗಾಗಿ ನೀವು ಮುಂಬಯಿ ಉಚ್ಚ ನ್ಯಾಯಾಲಯಕ್ಕೆ ಬರಬೇಕಾಗುತ್ತದೆ” ಎಂದು ಅವರಿಗೆ ತಿಳಿಸಲಾಯಿತು. ಅವರ ವೈಯಕ್ತಿಕ ದಾಖಲೆಗಳ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ನಂತರ, ಪ್ರತಿದಿನವೂ ವಿಡಿಯೋ ಕರೆಗಳು ಬರುತ್ತಿದ್ದವು.
3. ಆಗಸ್ಟ್ 25, 2025 ಒಂದು ಭೀಕರ ದಿನ!
ಅಧಿಕಾರಿಗೆ ₹37 ಲಕ್ಷ, ಸಂಪೂರ್ಣ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಎಫ್.ಡಿ.ಯನ್ನು ನೀಡುವಂತೆ ಹೇಳಲಾಯಿತು. ಅಧಿಕಾರಿ ಸೂಚನೆಯ ಪ್ರಕಾರ ರೂ.34 ಲಕ್ಷ 90 ಸಾವಿರವನ್ನು ಹಿಂಪಡೆದು, ನಿಗದಿತ ಬ್ಯಾಂಕ್ ಖಾತೆಗೆ ಜಮೆ ಮಾಡಿದರು.
ಸಂಪಾದಕೀಯ ನಿಲುವುಸಾರ್ವಜನಿಕರೇ, ಸೈಬರ್ ವಂಚನೆಗೆ ಬಲಿಯಾಗಬೇಡಿ! ದೂರವಾಣಿ ಮೂಲಕ ಯಾವುದೇ ಸರಕಾರಿ ಸಂಸ್ಥೆಗಳು ನಿಮ್ಮಿಂದ ಮಾಹಿತಿ ಅಥವಾ ಕ್ರಮ ಕೈಕೊಳ್ಳಲು ಬಯಸುವುದಿಲ್ಲ ಎಂಬುದನ್ನು ನೆನಪಿಡಿರಿ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ