|

ವಾರಣಾಸಿ – ಇಲ್ಲಿನ ಆದಂಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಲವಂತದ ಮತಾಂತರದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಒಬ್ಬ ಮೌಲ್ವಿ (ಇಸ್ಲಾಂ ವಿದ್ವಾಂಸ) 12 ವರ್ಷದ ಅಪ್ರಾಪ್ತ ಹಿಂದೂ ಬಾಲಕಿಯನ್ನು ಅಪಹರಿಸಿ, ಒಬ್ಬ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಿಸಿದ್ದಾನೆ. ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿ, ಅವರಿಗೆ ಪೊಲೀಸ್ ಠಾಣೆಯಲ್ಲಿ ಕಿವಿ ಹಿಡಿದು ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಈ ಮೊದಲು ಹುಡುಗಿಯನ್ನು ಅಪಹರಿಸಿದ ನಿಹಾಲ್ ಮತ್ತು ಅವನ ತಾಯಿಯನ್ನು ಪೊಲೀಸರು ಬಂಧಿಸಿದ್ದರು. ಈಗ ಪೊಲೀಸರು ಅವನ ತಂದೆ ಷರೀಫ್ ಅಲಿಯಾಸ್ ರಾಜು, ಚಿಕ್ಕಪ್ಪ ಲಾಲು ಮತ್ತು ಮದುವೆ ಮಾಡಿಸಿದ ಮೌಲ್ವಿ ಮಹಮ್ಮದ್ ಹಸೀನ್ ಸೇರಿದಂತೆ ಒಟ್ಟು 5 ಜನರನ್ನು ಬಂಧಿಸಿದ್ದಾರೆ.
ಪೀಡಿತ ಬಾಲಕಿಯ ತಂದೆಗೆ 200 ಮತಾಂಧರ ಗುಂಪಿನಿಂದ ಜೀವ ಬೆದರಿಕೆ
ಪೀಡಿತ ಬಾಲಕಿಯ ತಂದೆ ಪೊಲೀಸರಿಗೆ ಹೇಳಿದ ಪ್ರಕಾರ, ಅವರ ಮಗಳು ಮೂರು ತಿಂಗಳಿಂದ ಕಾಣೆಯಾಗಿದ್ದಳು. ಅವಳು ನಿಹಾಲ್ ಜೊತೆಗಿದ್ದಾಳೆ ಎಂದು ತಿಳಿದು ಆಕೆಯನ್ನು ಕರೆತರಲು ಅವನ ಮನೆಗೆ ಹೋದಾಗ, ಅಲ್ಲಿ ನಿಹಾಲ್, ಅವನ ತಂದೆ ಷರೀಫ್, ಚಿಕ್ಕಪ್ಪ ಲಾಲು ಮತ್ತು ಕುಟುಂಬದ ಇತರ ಸದಸ್ಯರು ಅವರಿಗೆ ಬೆದರಿಕೆ ಹಾಕಿದ್ದಾರೆ. ಅವರ ಮಗಳು ಮತಾಂತರಗೊಂಡಿದ್ದಾಳೆ, ಆದ್ದರಿಂದ ಈಗ ಆಕೆಯ ಮೇಲೆ ತಮಗೆ ಯಾವುದೇ ಹಕ್ಕಿಲ್ಲ ಎಂದು ಅವರು ಹೇಳಿದ್ದಾರೆ. ತಂದೆ ಇದನ್ನು ವಿರೋಧಿಸಿದಾಗ, ಸುಮಾರು 200 ಮತಾಂಧರ ಗುಂಪು ಅವರನ್ನು ಸುತ್ತುವರಿದು ಜೀವ ಬೆದರಿಕೆ ಹಾಕಿದ್ದಾರೆ.
ಸಂಪಾದಕೀಯ ನಿಲುವುಇಂತಹವರಿಗೆ ಕೇವಲ ಕಿವಿ ಹಿಡಿದು ಬಸ್ಕಿ ಹೊಡೆಯುವ ಶಿಕ್ಷೆ ನೀಡುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಇಂತಹ ಅಪರಾಧಗಳಿಗೆ ಸರಕಾರವು ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!